ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 12 ಕೋಟಿ ರೂ. ಹೆಚ್ಚುವರಿ ಅನುದಾನ: ಮಾಲತೇಶ್​

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ನಿರ್ದೇಶಕ ಪಿ.ಎಂ. ಮಾಲತೇಶ್​ ಉದ್ಘಾಟಿಸಿದರು.
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ನಿರ್ದೇಶಕ ಪಿ.ಎಂ. ಮಾಲತೇಶ್​ ಉದ್ಘಾಟಿಸಿದರು.
Published on
ಉಡುಪಿ: ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದಲ್ಲಿ 2025&26ನೇ ಸಾಲಿನಲ್ಲಿ 16 ಕೋಟಿ ರೂ. ಅನುದಾನ ಲಭ್ಯವಿದ್ದು, 8 ಕೋಟಿ ರೂ. ಶೈಕ್ಷಣಿಕ ಉದ್ದೇಶ ಹಾಗೂ 8 ಕೋಟಿ ರೂ. ಸ್ವ ಉದ್ಯೋಗ ಸಾಲಕ್ಕೆ ಮೀಸಲಿಡಲಾಗಿತ್ತು. ಆದರೆ ಈ ವರ್ಷ ಸಾಲಕ್ಕಾಗಿ 1333 ಅರ್ಜಿಗಳು ಸಲ್ಲಿಕೆಯಾಗಿದ್ದು. ಎಲ್ಲಾ ಲಾನುಭವಿಗಳಿಗೆ ಸಹಾಯಧನ ಮಂಜೂರುಗೊಳಿಸಲು ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 12 ಕೋಟಿ ರೂ. ಬಿಡುಗಡೆಗೊಳಿಸಿದೆ ಎಂದು ನಿಗಮ ನಿರ್ದೇಶಕ ಪಿ.ಎಂ. ಮಾಲತೇಶ್​ ತಿಳಿಸಿದರು.
ತಾಲೂಕು ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ಅಸಂಘಟಿತ ವಲಯದ ಬ್ರಾಹ್ಮಣ ಬಾಂಧವರಿಗೆ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ವತಿಯಿಂದ ಆಯೋಜಿಸಲಾದ ವಿವಿಧ ಯೋಜನೆಯ ಬಗ್ಗೆ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
2024&25ನೇ ಸಾಲಿನಲ್ಲಿ ನಿಗಮದ ಯೋಜನೆಗಳಿಗೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗದೆ 10 ಕೋಟಿ ಅನುದಾನದಲ್ಲಿ 6.5 ಕೋಟಿ ರೂ. ವಾಪಾಸು ಹೋಗಿತ್ತು. ಪ್ರಸ್ತುತ ಅನೇಕ ಕಡೆಗಳಲ್ಲಿ ಮಾಹಿತಿ ಶಿಬಿರಗಳನ್ನು ಆಯೋಜಿಸಿದ್ದರಿಂದ ಅರ್ಜಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಸ್ವ ಉದ್ಯೋಗಕ್ಕೆ ಶೇ. 20ರಷ್ಟು ಸಬ್ಸಿಡಿ ಹಾಗೂ ಶೇ.4ರಷ್ಟು ಬಡ್ಡಿದರಲ್ಲಿ 2 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಪಿಯುಸಿ ಹಾಗೂ ಪದವಿ ಶಿಕ್ಷಣ ಪಡೆಯುವವರಿಗೆ ಪ್ರತಿ ವರ್ಷ 15 ಸಾವಿರ ರೂ. ವಿದ್ಯಾರ್ಥಿವೇತನ, ಇಂಜಿನಿಯರಿಂಗ್​ ಮತ್ತು ಮೆಡಿಕಲ್​ ಓದುವವರಿಗೆ ಸರ್ಕಾರಿ ಶುಲ್ಕದಲ್ಲಿ 3ನೇ 2 ಭಾಗ ಹಣವನ್ನು ಭರಿಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀೆ ಬರೆಯುವವರಿಗೆ 1 ಲಕ್ಷ ರೂ. ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ನಿರ್ದೇಶಕ ಪಿ. ಎಂ. ಮಾಲತೇಶ್​, ಜಿಲ್ಲಾ ಮಹಿಳಾ ಕಾಂಗ್ರೆಸ್​ ಸಮಿತಿ ಅಧ್ಯೆ ಜ್ಯೋತಿ ಕೃಷ್ಣಹೆಬ್ಬಾರ್​, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್​ ಕಾಂಚನ್​, ಪ್ರೊ,.ಶಂಕರ್​, ದುರ್ಗಾಪ್ರಸಾದ್​ ಉಪಸ್ಥಿತರಿದ್ದರು. ವಿನಯಕುಮಾರ್​ ಕಬ್ಯಾಡಿ ಕಾರ್ಯಕ್ರಮ ನಿರೂಪಿಸಿದರು.
"

ಸಾಮಾಜಿಕ ಹಿಂದುಳಿದ ವರ್ಗ ಒಂದೆಡೆ ಇದ್ದರೆ ಆರ್ಥಿಕವಾಗಿ ಹಿಂದುಳಿದವರು ಎಲ್ಲಾ ವರ್ಗಗಳಲ್ಲಿ ಇದ್ದಾರೆ. ಇವರನ್ನು ಗುರುತಿಸಿ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದು ಅಗತ್ಯ. ಆಯಾ ಜಾತಿಗಳ ಮುಖಂಡರು ಇದೊಂದು ಸಾಮಾಜಿಕ ಸೇವೆ ಎಂಬ ನೆಲೆಯಲ್ಲಿ ಯೋಜನೆಗಳ ಪ್ರಯೋಜನವನ್ನು ದೊರಕಿಸಿಕೊಡಬೇಕು. ಪ್ರತಿಭೆಗಳು ಅವಕಾಶವಂಚಿತರಾಗಬಾರದು. ಸರ್ಕಾರದಿಂದ ಸೌಲಭ್ಯಗಳನ್ನು ಕೇಳಿ ಪಡೆಯುವುದು ಪ್ರಜೆಗಳ ಹಕ್ಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net