ಮಕ್ಕಳಿಗೆ ತುಳು ಸಂಸ್ಕೃತಿ, ಸಂಸ್ಕಾರ ಮಾಹಿತಿ

 ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ ಉದ್ಘಾಟಿಸಿದರು. ಯುವವಾಹಿನಿ ಮೂಲ್ಕಿ ಘಟಕ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್, ಅಶೋಕ್ ಕುಮಾರ್ ಪಡ್ಪು ಮೊದಲಾದವರಿದ್ದರು.
ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ ಉದ್ಘಾಟಿಸಿದರು. ಯುವವಾಹಿನಿ ಮೂಲ್ಕಿ ಘಟಕ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್, ಅಶೋಕ್ ಕುಮಾರ್ ಪಡ್ಪು ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಹಿಂದಿನ ಜ್ಞಾನಪೂರ್ಣ ಜೀವನ ಶೈಲಿ ಆಚಾರ ವಿಚಾರಗಳ ವೈಜ್ಞಾನಿಕ ಸತ್ಯ ಹೊಂದಿದ ತಿಳಿವಳಿಕೆಗಳನ್ನು ಕೂಡು ಕುಟುಂಬದ ಉತ್ತಮ ಅನುಭವಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಉತ್ತಮ ಸಂಸ್ಕಾರ ಪೂರ್ಣ ವ್ಯಕ್ತಿತ್ವ ಬೆಳೆಸಲು ಸಾಧ್ಯ ಎಂದು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಭಾನುವಾರ ಯುವವಾಹಿನಿ ಮೂಲ್ಕಿ ಘಟಕ ಆಶ್ರಯದಲ್ಲಿ ಇಪ್ಪತ್ತನಾಲ್ಕನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜಸೇವಕ ವಾಸು ಪೂಜಾರಿ ಚಿತ್ರಾಪು ಅವರಿಗೆ ಆಟಿ ತಮ್ಮನ ನೀಡಿ ಗೌರವಿಸಲಾಯಿತು. ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಮೂಲ್ಕಿ ರೋಟರಿ ಅಧ್ಯಕ್ಷೆ ಭಾನುವತಿ ಶೆಟ್ಟಿ ಕಕ್ವಗುತ್ತು, ಕಾರ್ಯಕ್ರಮ ಸಂಯೋಜಕಿ ಚಿತ್ರ ಸುರೇಶ್ ಜತ್ತನ್, ಕಾರ್ಯದರ್ಶಿ ವೇದಾವತಿ ಜಯ ಕುಮಾರ್, ಕೋಶಾಧಿಕಾರಿ ಭವಿಷ್ ಬಿ.ಸಾಲ್ಯಾನ್ ಉಪಸ್ಥಿತರಿದ್ದರು.
ಶಿವಪ್ರಣಾಮ್ ತಂಡದ ಮಕ್ಕಳಿಂದ ವಿಶೇಷ ನೃತ್ಯ ಪ್ರದರ್ಶನ, ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಜಯ ಕುಮಾರ್ ಕುಬೆವೂರು ಅವರಿಂದ ಪ್ರಸ್ತಾವನೆ, ಪ್ರಜ್ವಲ್ ಭಂಡಾರಿ ಕೌಡೂರು ಅವರಿಂದ ಆಟಿದ ತೆಲಿಕೆ, ಯುವ ವಾಹಿನಿ ಕಲಾವಿದರಿಂದ ಆಟಿ ನಲಿಕೆ ನಡೆಯಿತು. ನರೇಂದ್ರ ಕೆರೆಕಾಡು ಮತ್ತು ಮೋಹನ್ ಸುವರ್ಣ ನಿರೂಪಿಸಿದರು. ವೇದಾವತಿ ಜಯ ಕುಮಾರ್ ವಂದಿಸಿದರು. ಬಳಿಕ ಆಟಿ ಖಾದ್ಯಗಳೊಂದಿಗೆ ಭೋಜನ ಕೂಟ ನಡೆಯಿತು.
ತುಳುನಾಡಿನ ಆಟಿ ಆಚರಣೆಗಳು ವಿಶೇಷವಾಗಿ ಆರೋಗ್ಯ ರಕ್ಷಣೆಗೆ ಪೂರಕವಾಗಿದ್ದು ಕೃಷಿ ಬದುಕಿನಲ್ಲಿ ಕಂಡುಕೊಂಡ ತಿಳುವಳಿಕೆಗಳನ್ನು ಆಚರಣೆಯ ಮೂಲಕ ನಡೆಸಿ ಬೆಳೆಸಿದ್ದಾರೆ. ನಾವು ತಿಳಿದು ಮುಂದಿನ ಪೀಳಿಗೆಗೆ ಕಾಪಿಡುವ ಅಗತ್ಯತೆ ಇದೆ.
ದಯಾನಂದ ಕರ್ಕೇರ ಉಗ್ಗೇಲ್ ಬೆಟ್ಟು ಬ್ರಹ್ಮಬೈದರ್ಕಳ ಮತ್ತು ಚಿಕ್ಕಮ್ಮದೇವಿ ಗರಡಿ ಮುಖ್ಯಸ್ಥ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net