ಇಂದಿರಾ ಗಾಂಧಿ ಯೋಜನೆಗಳು ದೇಶದ ಪ್ರಗತಿಗೆ ಬುನಾದಿ: ಅಶೋಕ್​ ಕುಮಾರ್​

congress
ಮಾಜಿ ಪ್ರಧಾನಮಂತ್ರಿ, ಭಾರತ ರತ್ನ ದಿ. ಇಂದಿರಾ ಗಾಂಧಿ ಅವರ 109ನೇ ಜನ್ಮದಿನಾಚರಣೆ ನಡೆಯಿತು.
Published on: 

ಉಡುಪಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನಪರ ಯೋಜನೆಗಳು ಹಾಗೂ ದೇಶದ ಪ್ರಗತಿಗೆ ಬುನಾದಿಯಾಗಿದೆ. ಇದೇ ಆಧಾರದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್​ ನೇತೃತ್ವದ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಜನರ ಬದುಕನ್ನು ಹಸನುಗೊಳಿಸಲು ಮತ್ತು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಹಲವಾರು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿವೆ ಎಂದು ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು ಹೇಳಿದರು.

ಜಿಲ್ಲಾ ಕಾಂಗ್ರೆಸ್​ ಸಮಿತಿ ಹಾಗೂ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್​ ಸಮಿತಿಯ ಜಂಟಿ ಆಶ್ರಯದಲ್ಲಿ ಬ್ರಹ್ಮಗಿರಿ ಕಾಂಗ್ರೆಸ್​ ಭವನದಲ್ಲಿ ನಡೆದ ಮಾಜಿ ಪ್ರಧಾನಮಂತ್ರಿ, ಭಾರತ ರತ್ನ ದಿ. ಇಂದಿರಾ ಗಾಂಧಿ ಅವರ 109ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ಕಾರ್ಯಕ್ರಮವನ್ನು ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕಿ ಮಾಲಿನಿ ರೈ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಜಿಲ್ಲಾ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಳೆಬೈಲು ಮಾತನಾಡಿದರು. ಬ್ಲಾಕ್​ ಮಹಿಳಾ ಕಾಂಗ್ರೆಸ್​ ಸಮಿತಿ ಅಧ್ಯಕ್ಷೆ ಮಮತಾ ಶೆಟ್ಟಿ, ಕಾಂಗ್ರೆಸ್​ ಪಕ್ಷದ ಮುಖಂಡರಾದ ದಿನೇಶ್​ ಪುತ್ರನ್​, ಮಹಾಬಲ ಕುಂದರ್​, ರಮೇಶ್​ ಕಾಂಚನ್​, ವೆರೋನಿಕಾ ಕರ್ನೇಲಿಯೋ, ಪ್ರಖ್ಯಾತ್​ ಶೆಟ್ಟಿ, ಅಣ್ಣಯ್ಯ ಶೇರಿಗಾರ್​, ಹರೀಶ್​ ಕಿಣಿ, ಸುನಿಲ್​ ಬಂಗೇರ, ಆನಂದ್​ ಕೊಡೇರಿ, ಶರ್ಫುದ್ದೀನ್​, ಹಬೀಬ್​ ಆಲಿ, ಸಜ್ಜನ್​ ಶೆಟ್ಟಿ, ಜಯಕುಮಾರ್​, ಕೀರ್ತಿ ಶೆಟ್ಟಿ, ಸುಂದರಿ, ಮುರಳಿ ಶೆಟ್ಟಿ, ನರಸಿಂಹಮೂರ್ತಿ, ನಾಗೇಶ್​ ಕುಮಾರ್​ ಉದ್ಯಾವರ, ದಿಲೀಪ್​ ಹೆಗ್ಡೆ, ಬಾಲಕೃಷ್ಣ ಪೂಜಾರಿ, ಶಾಂತಾ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಪುಷ್ಪ ಅಂಚನ್​, ಸಂಧ್ಯಾ ತಿಲಕ್​ರಾಜ್​ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್​ ಸ್ವಾಗತಿಸಿದರು. ಸತೀಶ್​ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ದಯಾನಂದ್​ ಕಿದಿಯೂರು ವಂದಿಸಿದರು.