ಚರಿತ್ರೆ ಎಂದೂ ಮರೆಯದ ವ್ಯಕ್ತಿತ್ವ ಇಂದಿರಾ ಗಾಂಧಿ

ಉಡುಪಿಯ ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಹಾಗೂ ಸರ್ದಾರ್​ ವಲ್ಲಭ ಭಾಯ್​ ಪಟೇಲ ಜನ್ಮದಿನ ಆಚರಿಸಲಾಯಿತು. ಕೆ.ಜಯಪ್ರಕಾಶ ಹೆಗ್ಡೆ, ವಿನಯಕುಮಾರ ಸೊರಕೆ, ಎಂ.ಎ. ಗಫೂರ್​, ಭುಜಂಗ ಶೆಟ್ಟಿ, ಉದ್ಯಾವರ ನಾಗೇಶಕುಮಾರ, ಅಶೋಕ ಕೊಡವೂರು, ರಮೇಶ ಕಾಂಚನ್​, ಜ್ಯೋತಿ ಹೆಬ್ಬಾರ ಇದ್ದರು.
ಉಡುಪಿಯ ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಹಾಗೂ ಸರ್ದಾರ್​ ವಲ್ಲಭ ಭಾಯ್​ ಪಟೇಲ ಜನ್ಮದಿನ ಆಚರಿಸಲಾಯಿತು. ಕೆ.ಜಯಪ್ರಕಾಶ ಹೆಗ್ಡೆ, ವಿನಯಕುಮಾರ ಸೊರಕೆ, ಎಂ.ಎ. ಗಫೂರ್​, ಭುಜಂಗ ಶೆಟ್ಟಿ, ಉದ್ಯಾವರ ನಾಗೇಶಕುಮಾರ, ಅಶೋಕ ಕೊಡವೂರು, ರಮೇಶ ಕಾಂಚನ್​, ಜ್ಯೋತಿ ಹೆಬ್ಬಾರ ಇದ್ದರು.
Published on: 

* ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಅಭಿಮತ

* ಗಾಂಧಿ ಪುಣ್ಯಸ್ಮರಣೆ, ವಲ್ಲಭ ಭಾಯ್​ ಪಟೇಲ ಜನ್ಮದಿನ

ಉಡುಪಿ: ಬಡಜನತೆಗೆ ಭೂಸುಧಾರಣೆ ಕಾನೂನಿನ ಮೂಲಕ ಆರ್ಥಿಕ ಸ್ವಾತಂತ್ರ್ಯ ನೀಡಿದ ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರು ಚರಿತ್ರೆಯಲ್ಲಿ ಶಾಶ್ವತವಾಗಿ ಇರುವ ಹೆಸರು. ಅದನ್ನು ಎಂದಿಗೂ ಅಳಿಸಲು ಅಸಾಧ್ಯ. 'ನನ್ನ ರಕ್ತದ ಪ್ರತಿಯೊಂದು ಹನಿಯೂ ಈ ದೇಶದ ಸಮೃದ್ಧಿಗೆ ಮತ್ತು ಬಲವರ್ಧನೆಗೆ' ಎಂಬ ಅವರ ಘೋಷಣೆಯು ದೇಶ ಅಭಿವೃದ್ಧಿಯತ್ತ ಸಾಗಲು ಪೂರಕವಾಯಿತು. ದೇಶದ ಏಕತೆ, ಸಮಗ್ರತೆ ಮತ್ತು ಅಭಿವೃದ್ಧಿಗೆ ಅವರ ಕೊಡುಗೆ ಅಪಾರ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಅಭಿಮತ ವ್ಯಕ್ತಪಡಿಸಿದರು.

ಉಡುಪಿ ಬೃಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಜಿಲ್ಲಾ ಕಾಂಗ್ರೆಸ್​ ಸಮಿತಿ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್​ ಜಂಟಿಯಾಗಿ ಶನಿವಾರ (ಅ.31) ಆಯೋಜಿಸಿದ್ದ ಇಂದಿರಾ ಗಾಂಧಿ ಪುಣ್ಯಸ್ಮರಣೆ ಹಾಗೂ ಸರ್ದಾರ್​ ವಲ್ಲಭ ಭಾಯ್​ ಪಟೇಲ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಏಕೀರಣದ ರೂವಾರಿ

ರಾಷ್ಟ್ರದ ಏಕತೆಯ ಶಿಲ್ಪಿ, ಅಜಾತಶತ್ರು ಸರ್ದಾರ್​ ವಲ್ಲಭ ಭಾಯ್​ ಪಟೇಲರು ದೇಶದ ಮೊದಲ ಉಪಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದರು. 565ಕ್ಕೂ ಹೆಚ್ಚು ರಾಜ ಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಿ, ರಾಷ್ಟ್ರೀಯ ಏಕೀಕರಣಕ್ಕೆ ಭದ್ರ ಬುನಾದಿ ಹಾಕಿದವರು. ಅವರ ದಿಟ್ಟ ನಾಯಕತ್ವ, ಆತ್ಮವಿಶ್ವಾಸ ಮತ್ತು ದೂರದೃಷ್ಟಿತ್ವ ಸದಾ ಸ್ಫೂರ್ತಿದಾಯಕ ಎಂದರು.

ಮಾಜಿ ಸಚಿವ ವಿನಯಕುಮಾರ ಸೊರಕೆ, ಹಿರಿಯ ಮುಖಂಡ ಭುಜಂಗ ಶೆಟ್ಟಿ, ಉದ್ಯಾವರ ನಾಗೇಶಕುಮಾರ ಮಾತನಾಡಿದರು.

ನಿಕಟಪೂರ್ವ ಜಿಲ್ಲಾಧ್ಯಕ್ಷ ಅಶೋಕ ಕೊಡವೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಬ್ಲಾಕ್​ ಅಧ್ಯಕ್ಷ ರಮೇಶ ಕಾಂಚನ್​, ಪ್ರಶಾಂತ ಜತ್ತನ್ನ, ದಿನೇಶ ಪುತ್ರನ್​, ಬಿ..ನರಸಿಂಹಮೂರ್ತಿ, ಶರ್ಪುದ್ದೀನ್​ ಶೇಖ್​, ಭಾಸ್ಕರ ರಾವ್​ ಕಿದಿಯೂರು, ಪ್ರಖ್ಯಾತ ಶೆಟ್ಟಿ, ಶಬ್ಬೀರ್​ ಅಹ್ಮದ್​, ಮಹಾಬಲ ಕುಂದರ್​, ಕೀರ್ತಿ ಶೆಟ್ಟಿ, ಗಣನಾಥ ಶೆಟ್ಟಿ ಎಕ್ಕಾರು, ಶಶಿಧರ ಶೆಟ್ಟಿ ಎಲ್ಲೂರು, ಜಯಕುಮಾರ, ಲಕ್ಷ್ಮೀಶ ಶೆಟ್ಟಿ, ಶೇಖ್​ ವಹೀದ್​, ಅನಿತಾ ಪೂಜಾರಿ, ಮಮತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ರೇಖಾ ಸುವರ್ಣ ಇತರರಿದ್ದರು.

ಮಹಿಳಾ ಕಾಂಗ್ರೆಸ್​ ಜಿಲ್ಲಾಧ್ಯಕ್ಷೆ ಜ್ಯೋತಿ ಹೆಬ್ಬಾರ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಗೋಪಿ ನಾಯ್ಕ ವಂದಿಸಿದರು.

ಇಂದಿರಾ ಗಾಂಧಿಯವರು ದೇಶದಲ್ಲಿ ಆಹಾರ ಸ್ವಾವಲಂಬನೆಗಾಗಿ ಹಸಿರು ಕ್ರಾಂತಿ, ಜನಸಾಮಾನ್ಯರಿಗೂ ಅನುಕೂಲವಾಗಲು ಬ್ಯಾಂಕ್​ಗಳ ರಾಷ್ಟ್ರೀಕರಣ, ಉಳುವವನಿಗೆ ಭೂಮಿ ಆಶಯದೊಂದಿಗೆ ಭೂ ಮಸೂದೆ ಕಾಯ್ದೆ ಮೂಲಕ ಜನರಿಗೆ ಆಸರೆಯಾಗಿದ್ದರು. ಅದರಂತೆಯೇ ವಲ್ಲಭ ಭಾಯ್​ ಪಟೇಲ ಅವರು ದೇಶದ ಏಕತೆ ನೀಡಿದ ಕೊಡುಗೆಗಾಗಿ 'ರಾಷ್ಟ್ರೀಯ ಏಕತಾ ದಿನ' ಆಚರಿಸುವುದು ಗೌರವದ ಸಂಕೇತವಾಗಿದೆ.
ಎಂ.ಎ. ಗಫೂರ್. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ.