ರೋಟರಿಯಲ್ಲಿದೆ ಭಾರತೀಯ ಧರ್ಮ

 ಬಾರಕೂರು ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ರೋಟರಿ 3182 ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್ ಮಾತನಾಡಿದರು. ಪ್ರಮುಖರಾದ ವಿಜಯ ಕುಮಾರ್ ಶೆಟ್ಟಿ,  ಆನಂದ ಶೆಟ್ಟಿ, ಸೀತಾರಾಮ ಎಸ್. ಮೊದಲಾದವರಿದ್ದರು.
ಬಾರಕೂರು ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ರೋಟರಿ 3182 ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್ ಮಾತನಾಡಿದರು. ಪ್ರಮುಖರಾದ ವಿಜಯ ಕುಮಾರ್ ಶೆಟ್ಟಿ, ಆನಂದ ಶೆಟ್ಟಿ, ಸೀತಾರಾಮ ಎಸ್. ಮೊದಲಾದವರಿದ್ದರು.
Published on
ಬ್ರಹ್ಮಾವರ: ಮಾನವೀಯ ಸಂಬಂಧಗಳೇ ಇಲ್ಲದ ಪಾಶ್ಚಿಮಾತ್ಯ ದೇಶದಲ್ಲಿ ಆರಂಭಗೊಂಡ ರೋಟರಿ ಸಂಸ್ಥೆ ಭಾರತೀಯ ಧರ್ಮವನ್ನು ಹೊಂದಿದೆ ಎಂದು ರೋಟರಿ 3182 ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್ ಹೇಳಿದರು.
ಬಾರಕೂರಿನಲ್ಲಿ ಬಾರಕೂರು ರೋಟರಿ ಕ್ಲಬ್ 2027-28ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು.

ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಮಟ್ಟದಲ್ಲಿ 10ನೇ ರ‌್ಯಾಂಕ್ ಪಡೆದ ಗಾಯತ್ರಿ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಾರಕೂರು ರೋಟರಿ ಕ್ಲಬ್ ಅಧ್ಯಕ್ಷರಾಗಿ ಎಚ್.ಅಜಿತ್ ಕುಮಾರ್ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಬಿ.ಎಸ್.ಗಣೇಶ ಅಚಾರ್ಯ ಅಧಿಕಾರ ಸ್ವೀಕರಿಸಿದರು. ಹೊಸ ಸದಸ್ಯರ ಸೇರ್ಪಡೆ ಮತ್ತು ಸದಸ್ಯರನ್ನು ಪರಿಚಯಿಸಲಾಯಿತು.
ಸಹಾಯಕ ಗವರ್ನರ್ ವಿಜಯ ಕುವಾರ್ ಶೆಟ್ಟಿ, ಆನಂದ ಶೆಟ್ಟಿ, ವಲಯ ಪ್ರತಿನಿಧಿ ಸೀತಾರಾಮ ಎಸ್., ವಲಯ ಪ್ರತಿನಿಧಿ ಸುಲತಾ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷೆ ಕಿಶೋರಿ ಎಸ್.ಶೆಟ್ಟಿ, ಕಾರ್ಯದರ್ಶಿ ಸುದರ್ಶನ್ ಉಡುಪ ಕೆ. ಉಪಸ್ಥಿತರಿದ್ದರು. ರತ್ನಾಕರ ಶೆಟ್ಟಿ ಹಾಗೂ ಪ್ರಕಾಶ್ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net