ಮೂಲ ಸಂಸ್ಕೃತಿಯಿಂದ ಭಾರತ ಸುಭದ್ರ

 ಎಡನೀರು ಮಠದಲ್ಲಿ ಭರತಮುನಿ ಜಯಂತಿ ಕಾರ್ಯಕ್ರಮವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಕೆರೆಮನೆ ಶಿವಾನಂದ ಹೆಗಡೆ, ವಿದ್ವಾನ್ ಯು.ಕೆ.ಪ್ರವೀಣ್, ಸುದರ್ಶನ್, ರಾಜೇಂದ್ರ ಕಲ್ಲೂರಾಯ ಮತ್ತಿತರರು ಉಪಸ್ಥಿತರಿದ್ದರು.
ಎಡನೀರು ಮಠದಲ್ಲಿ ಭರತಮುನಿ ಜಯಂತಿ ಕಾರ್ಯಕ್ರಮವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಕೆರೆಮನೆ ಶಿವಾನಂದ ಹೆಗಡೆ, ವಿದ್ವಾನ್ ಯು.ಕೆ.ಪ್ರವೀಣ್, ಸುದರ್ಶನ್, ರಾಜೇಂದ್ರ ಕಲ್ಲೂರಾಯ ಮತ್ತಿತರರು ಉಪಸ್ಥಿತರಿದ್ದರು.
Published on
ಬದಿಯಡ್ಕ: ರಂಗಭೂಮಿ ಕಲೆಗಳಾದ ಯಕ್ಷಗಾನ, ಭರತನಾಟ್ಯ, ನಾಟಕ ಮೊದಲಾದವುಗಳಿಗೆ ಹೊಸ ಆಯಾಮ ಕೊಟ್ಟವರು ನಾಟ್ಯಶಾಸ್ತ್ರದ ಪಿತಾಮಹ ಭರತಮುನಿ. ಕೃಷಿ ಹಾಗೂ ಋಷಿ ಸಂಸ್ಕೃತಿಯ ಮೂಲಕ ಭಾರತ ಇಂದಿಗೂ ಸುಭದ್ರವಾಗಿದೆ. ಗುರುಕುಲ ಪದ್ಧತಿಯಿಂದ ಭಾರತೀಯ ಸಂಸ್ಕೃತಿ ಉಳಿಯುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಶಾಸ್ತ್ರೀಯ ನೃತ್ಯ ಕಲಾವಿದರ ಸಂಘಟನೆ ಮಂಗಳೂರಿನ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಎಡನೀರು ಮಠದ ಭಾರತೀ ಕಲಾಸದನದಲ್ಲಿ ಭಾನುವಾರ ಭರತಮುನಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಅಧ್ಯಕ್ಷೆ ವಿದುಷಿ ರಾಜಶ್ರೀ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ನಾಟ್ಯರಂಗ ಕಲಾನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ನುಡಿನಮನ ಸಲ್ಲಿಸಿದರು. ನೃತ್ಯಗುರು ವಿದುಷಿ ಶಶಿಕಲಾ ಅವರಿಗೆ ಸನ್ಮಾನ ನಡೆಯಿತು. ಬೆಳಗ್ಗೆ ನಾಟ್ಯಾರ್ಚನೆ, ಸಮೂಹ ನೃತ್ಯ ಪ್ರದರ್ಶನ ಹಾಗೂ ಮಧ್ಯಾಹ್ನ ಭರತನಾಟ್ಯ, ಕಥಕ್ಕಳಿ ಪ್ರದರ್ಶನ ನಡೆಯಿತು.
ಹಿರಿಯ ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ನಿಕಟಪೂರ್ವ ಅಧ್ಯಕ್ಷ ವಿದ್ವಾನ್ ಯು.ಕೆ.ಪ್ರವೀಣ್, ಸುದರ್ಶನ್, ಎಡನೀರು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಉಪಸ್ಥಿತರಿದ್ದರು.
ಶ್ರೀಧರ ಹೊಳ್ಳ ನಿರೂಪಿಸಿದರು. ಆತ್ಮಶ್ರೀ ಪ್ರಾರ್ಥಿಸಿದರು. ಉಪಾಧ್ಯಕ್ಷ ವಿದ್ವಾನ್ ಚಂದ್ರಶೇಖರ ನಾವಡ ಸ್ವಾಗತಿಸಿದರು. ಕಾರ್ಯದರ್ಶಿ ವಿದುಷಿ ಶಾರದಾ ಮಣಿಶೇಖರ್ ವಂದಿಸಿದರು.

ದಕ್ಷಿಣ ಏಷ್ಯಾದಲ್ಲಿಯೇ ಪರಸ್ಪರ ಹೋಲಿಕೆಗಳಿರುವ ಶಾಸ್ತ್ರೀಯ ಕಲೆಗಳಿವೆ. ಭಾರತೀಯ ಶಾಸ್ತ್ರಗಳನ್ನು ನಾವು ಎಂದೂ ಮರೆಯಬಾರದು. ಕಲಾವಿದರು ಪರಸ್ಪರ ಬೇಧವನ್ನು ಮರೆತು ಒಗ್ಗಟಿನಿಂದ ಸಾಗಬೇಕು. ಯಕ್ಷಗಾನದ ಎಲ್ಲ ವಿಭಾಗವನ್ನು ಸಂಗಮಿಸಿದ ಕ್ಷೇತ್ರ ಶ್ರೀ ಎಡನೀರು ಮಠ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net