ಬ್ರಹ್ಮಾವರ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ಶಿಕ್ಷಣದೊಂದಿಗೆ ಪಂಚ ಪರಿವರ್ತನೆಗಳಾದ ಸಾವಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನಾ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಹಾಗೂ ನಾಗರಿಕ ಶಿಷ್ಟಾಚಾರ ಪಾಲನೆಯ ಶಿಕ್ಷಣ ನೀಡುತ್ತದೆ. ಜಗತ್ತಿಗೆ ಭಾರತ ನೀಡಿದ ಜ್ಞಾನ, ಆರೋಗ್ಯ ಸಂಸ್ಕೃತಿ ಮತ್ತು ತತ್ವ ಸಿದ್ಧಾಂತವನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ತಿಳಿಸಬೇಕು. ರಾಷ್ಟ್ರೀಯತೆ ಮತ್ತು ಸಂಸ್ಕಾರಯುತ ಶಿಕ್ಷಣ ಪಡೆದಲ್ಲಿ ವಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ ಎಂದು ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾರಾವಿ ದಿನೇಶ್ ಹೆಗ್ಡೆ ಹೇಳಿದರು.