ಕಲಿತು ದೇಶದ ಪ್ರಗತಿಗೆ ಕೈಜೋಡಿಸಿ

ಉಡುಪಿಯ ಇಂದ್ರಾಳಿ ಇಂಗ್ಲಿಷ್​ ಮೀಡಿಯಂ ಸ್ಕೂಲ್​ನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ವಾತಂತ್ರ್ಯೋತ್ಸವದ ನಿಮಿತ್ತ 80 ಆಕೃತಿ ರಚಿಸಿ ಸಂಭ್ರಮಿಸಿದರು.
ಉಡುಪಿಯ ಇಂದ್ರಾಳಿ ಇಂಗ್ಲಿಷ್​ ಮೀಡಿಯಂ ಸ್ಕೂಲ್​ನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ವಾತಂತ್ರ್ಯೋತ್ಸವದ ನಿಮಿತ್ತ 80 ಆಕೃತಿ ರಚಿಸಿ ಸಂಭ್ರಮಿಸಿದರು.
Published on

* ವಿದ್ಯಾರ್ಥಿಗಳಿಗೆ  ಕೆ.ಅಣ್ಣಪ್ಪ ಶೆಣೈ ಕಿವಿಮಾತು 

ಉಡುಪಿ: ಭಾರತದ ಅನೇಕ ನೇತಾರರು ಬ್ರಿಟಿಷರ ವಿರುದ್ಧ ಹೋರಾಡಿ ನಮಗೆ ಸ್ವಾತಂತ್ರ್ಯ ನೀಡಿದ್ದಾರೆ. ಇದನ್ನು ಅರಿತು ವಿದ್ಯಾರ್ಥಿಗಳೆಲ್ಲರೂ ನಮ್ಮ ದೇಶ ಪ್ರಗತಿಪಥದತ್ತ ಸಾಗಲು ಕೈಜೋಡಿಸಬೇಕು. ಚೆನ್ನಾಗಿ ಕಲಿತು ಸಾಧನೆಯ ಮೂಲಕ ವಿಶ್ವದಲ್ಲಿ ದೇಶದ ಕೀರ್ತೀ ಹೆಚ್ಚಿಸಬೇಕು ಎಂದು ಶಾಲಾ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಕಿವಿಮಾತು ಹೇಳಿದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಶನಿವಾರ (ಆ.15) ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಮಾತನಾಡಿದರು.
ಉಡುಪಿ ಮಿಷನ್​ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವ್ಯವಸ್ಥಾಪಕಿ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಕಾವ್ಯಶ್ರೀ ವಿ. ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೂ ಜವಾಬ್ದಾರಿ, ಕರ್ತವ್ಯಗಳಿವೆ. ನಾಯಕತ್ವ ಗುಣ ಬೆಳೆಸಿಕೊಂಡು ಭಾ ರತದ ಉತ್ತಮ ಪ್ರಜೆಗಳಾಗಬೇಕು ಎಂದರು.
ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ರಚಿಸಿದ 'ಹೆರಿಟೇಜ್​ ಹಾರ್ಮೊನಿ' ಗ್ರೀಟಿಂಗ್​ ಕಾರ್ಡ್​, ನಾಣ್ಯಗಳು ಹಾಗೂ ಪ್ರಾಚೀನ ವಸ್ತುಗಳ ಪ್ರದರ್ಶನ ಉದ್ಘಾಟಿಸಲಾಯಿತು.
ಶಾಲಾ ಅಡಳಿತ ಮಂಡಳಿಯ ಸದಸ್ಯರಾದ ವಿದ್ಯಾ ಅಮರ್​ ಪೈ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಶಿರಾಜ್​ ಕುಂದರ್​, ಉಪಾಧ್ಯಕ್ಷ ಸಂತೋಷ್​ ಸಗ್ರಿ, ಕೋಶಾಧಿಕಾರಿ ವೈಷ್ಣವಿ ಕಾಮತ್​, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ವಿನಾಯಕ್​ ಕಿಣಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಶ್ಮಾ ಪ್ರಭು, ವಿದ್ಯಾರ್ಥಿ ನಾಯಕ ಕಿಶನ್​ ಎಂ.ಪಿ. ಹಾಗೂ ಸಾನ್ಯಾ ನಾಯ್ಕ್​, ಹಳೆಯ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ಶಿಕ್ಷಕೇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಚಿರಾಗ್​ ಸ್ವಾಗತಿಸಿದರು. ವೀಕ್ಷಾ ವಂದಿಸಿದರು. ಅನುಜ್​ ಕಿಣಿ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net