ವೇದಗಳ ಪಠಣದಿಂದ ದೈವಿಕ ಶಕ್ತಿ ವೃದ್ಧಿ

 ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆದ ವೇದ ಶಿಬಿರದ ಸವಾರೋಪ ಸವಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರವಾಣಪತ್ರ ವಿತರಿಸಲಾಯಿತು. ಶ್ಯಾಮಪ್ರಸಾದ್ ಕುಳಮರ್ವ, ರಾಜೇಶ್ ಟಿ., ಜಯದೇವ ಖಂಡಿಗೆ ಇತರರಿದ್ದರು.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆದ ವೇದ ಶಿಬಿರದ ಸವಾರೋಪ ಸವಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರವಾಣಪತ್ರ ವಿತರಿಸಲಾಯಿತು. ಶ್ಯಾಮಪ್ರಸಾದ್ ಕುಳಮರ್ವ, ರಾಜೇಶ್ ಟಿ., ಜಯದೇವ ಖಂಡಿಗೆ ಇತರರಿದ್ದರು.
Published on
ಕಾಸರಗೋಡು: ಜ್ಞಾನದ ಪ್ರತೀಕವಾದ ವೇದಗಳ ಪಠಣದಿಂದ ಮನಸ್ಸಿಗೆ ಶಾಂತಿ, ಏಕಾಗ್ರತೆ ಉಂಟಾಗುವ ಜತೆಗೆ ಮನುಷ್ಯನೊಳಗೆ ದೈವಿಕ ಶಕ್ತಿ ವೃದ್ಧಿಸುತ್ತದೆ ಎಂದು ನಿವೃತ್ತ ಮುಖ್ಯಶಿಕ್ಷಕ ಶ್ಯಾಮಪ್ರಸಾದ್ ಕುಳಮರ್ವ ಹೇಳಿದರು.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವೇದಪಾಠ ಶಿಬಿರದ ಸವಾರೋಪ ಸವಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಾತನಾಡಿದರು. ಮಧೂರು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ರಾಜೇಶ್ ಟಿ. ಅಧ್ಯಕ್ಷತೆ ವಹಿಸಿದ್ದರು. \
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕಾರ್ಯದರ್ಶಿ ಕೆ.ನಾರಾಯಣಯ್ಯ, ಪವಿತ್ರಪಾಣಿ ರತನ್ ಕುವಾರ್ ಕಾಮಡ, ಸಹಾಯಕ ಅರ್ಚಕ ಕೃಷ್ಣಮೂರ್ತಿ, ವಿಷ್ಣುಮೂರ್ತಿ ಕಕ್ಕಿಲ್ಲಾಯ, ಮುರಳೀಧರ ಎಡಪ್ಪಾಡಿ, ಸಿಬ್ಬಂದಿ ಕೆ.ಎಸ್.ಮಧ್ಯಸ್ಥ ಉಪಸ್ಥಿತರಿದರು. ವೇದಾಭ್ಯಾಸ ಪೂರ್ಣಗೊಳಿಸಿದೆ ವಿದ್ಯಾರ್ಥಿಗಳಿಗೆ ಪ್ರವಾಣ ಪತ್ರ, ಶಾಲು, ಭಗವದ್ಗೀತೆ, ಪುಸ್ತಕಗಳನ್ನು ವಿತರಿಸಲಾಯಿತು.
ವೇದ ಗುರು ಶ್ರೀಕೃಷ್ಣ ಮಯ್ಯ ಅವರನ್ನು ಗೌರವಿಸಲಾಯಿತು. ಸಹಾಯಕ ಗುರುಗಳಾಗಿ ಸಹಕರಿಸಿದ ರಾಮ್ ಪ್ರಸಾದ್ ಕೂಡ್ಲು, ವಸಂತ ಕಲ್ಲೂರಾಯ, ಆದಿತ್ಯ ಕಾರಂತ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ವಿದ್ಯಾರ್ಥಿಗಳು ವೇದ ಪಠಣ ಮಾಡದರು. ದೇವಸ್ಥಾನದ ವ್ಯವಸ್ಥಾಪಕ ಮತ್ತು ಶಿಬಿರದ ಸಂಚಾಲಕ ಬಿ.ಎನ್.ಸುಬ್ರಹ್ಮಣ್ಯ ರಂಗಾಭಟ್ ಸ್ವಾಗತಿಸಿದರು. ನಿವೃತ್ತ ಅಧ್ಯಾಪಕ ಕೃಷ್ಣ ಕಾರಂತ ವಂದಿಸಿದರು. ನರಸಿಂಹ ಮಯ್ಯ ಎಂ.ಮಧೂರು ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net