ವಂದೇ ಮಾತರಂ ಜಾಥಾ; ಸದಾನಂದನ್​ ಮಾಸ್ತರ್​ ಚಾಲನೆ

ಕೇರಳಂ ರಾಜ್ಯಸಭಾ ಸದಸ್ಯ ಸಿ. ಸದಾನಂದನ್​ ಮಾಸ್ತರ್​.
ಕೇರಳಂ ರಾಜ್ಯಸಭಾ ಸದಸ್ಯ ಸಿ. ಸದಾನಂದನ್​ ಮಾಸ್ತರ್​.
Published on

ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

* ಸೆ.7ರಂದು ಕುಂದಾಪುರದಲ್ಲಿ ಆಯೋಜನೆ

ಉಡುಪಿ: ಕುಂದಾಪುರದಲ್ಲಿ ಸೆ.7ರಂದು ವಂದೇ ಮಾತರಂ ರಾಷ್ಟ್ರಗೀತೆಯ ಜನಜಾಗೃತಾ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದ್ದು, ಕೇರಳಂ ರಾಜ್ಯಸಭಾ ಸದಸ್ಯ ಸಿ. ಸದಾನಂದನ್​ ಮಾಸ್ತರ್​ ಚಾಲನೆ ನೀಡಲಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕುಂದಾಪುರದ ಬಸ್​ ನಿಲ್ದಾಣದ ಬಳಿ ಬೆಳಗ್ಗೆ 8:30ಕ್ಕೆ ತ್ರಿವರ್ಣ ಧ್ವಜ ಅರಳಿಸುವ ಮೂಲಕ ಜಾಥಾ ಉದ್ಘಾಟಿಸಲಿದ್ದಾರೆ. ಬಳಿಕ ಶಾಸ್ತ್ರಿ ಸರ್ಕಲ್​ ಬಳಿ ಅಭಿಯಾನ ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಅವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ನಿರ್ಗಮಿಸಲಿದ್ದಾರೆ. ಸಾಸ್ತಾನ ಬಸ್​ ನಿಲ್ದಾಣದ ಬಳಿ ಸಂಜೆ 5 ಗಂಟೆಗೆ ಜಾಥಾದ ಸಮಾರೋಪ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net