ಬಡವರಿಗೆ ಆಶ್ರಯ ದಾನವೂ ಸರ್ವಶ್ರೇಷ್ಠ

ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ ವಿದ್ಯಾರ್ಥಿನಿ ಸಿಂಚನಾಳಿಗೆ ನಿರ್ಮಿಸಿಕೊಟ್ಟ ಮನೆಯನ್ನು ಡಾ. ಉದಯಕುಮಾರ್​ ಸರಳತ್ತಾಯ ಉದ್ಘಾಟಿಸಿದರು. ವಿ.ಸುನೀಲಕುಮಾರ್​, ಡಾ.ಹರಿಶ್ಚಂದ್ರ, ಹರೀಶ್​ ರಾಯಸ್​, ಕೆ. ಸದಾಶಿವ ಭಟ್​, ವಿಲಾಸಿನಿ ಬಾಬುರಾಯ ಶೆಣೈ, ಶ್ರೀನಿವಾಸ ಹೆಬ್ಬಾರ್​, ಡಾ. ಭಾರ್ಗವಿ ಐತಾಳ್​, ಪಿ.ಕಿಶನ್​ ಹೆಗ್ಡೆ, ಎಂ. ಗಂಗಾಧರ ರಾವ್​ ಇತರರಿದ್ದರು.
ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ ವಿದ್ಯಾರ್ಥಿನಿ ಸಿಂಚನಾಳಿಗೆ ನಿರ್ಮಿಸಿಕೊಟ್ಟ ಮನೆಯನ್ನು ಡಾ. ಉದಯಕುಮಾರ್​ ಸರಳತ್ತಾಯ ಉದ್ಘಾಟಿಸಿದರು. ವಿ.ಸುನೀಲಕುಮಾರ್​, ಡಾ.ಹರಿಶ್ಚಂದ್ರ, ಹರೀಶ್​ ರಾಯಸ್​, ಕೆ. ಸದಾಶಿವ ಭಟ್​, ವಿಲಾಸಿನಿ ಬಾಬುರಾಯ ಶೆಣೈ, ಶ್ರೀನಿವಾಸ ಹೆಬ್ಬಾರ್​, ಡಾ. ಭಾರ್ಗವಿ ಐತಾಳ್​, ಪಿ.ಕಿಶನ್​ ಹೆಗ್ಡೆ, ಎಂ. ಗಂಗಾಧರ ರಾವ್​ ಇತರರಿದ್ದರು.
Published on

* ಡಾ. ಉದಯಕುಮಾರ್​ ಸರಳತ್ತಾಯ ಅಭಿಪ್ರಾಯ

* ವಿದ್ಯಾಪೋಷಕ್​ನ 100ನೇ ಮನೆ ಹಸ್ತಾಂತರ

ಉಡುಪಿ: ಅನ್ನದಾನ ಶ್ರೇಷ್ಠದಾನ. ಅದಕ್ಕಿಂತಲೂ ಉನ್ನತವಾದುದು ವಿದ್ಯಾದಾನ. ಅನ್ನವು ಕ್ಷಣಿಕ ತೃಪ್ತಿ ಕೊಡುತ್ತದೆ. ಆದರೆ, ವಿದ್ಯಾದಾನ ಅನ್ನವನ್ನು ಗಳಿಸುವ ಮಾರ್ಗ ತೋರಿಸುತ್ತದೆ. ಯಕ್ಷಗಾನ ಕಲಾರಂಗದವರು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಬಡ ವಿದ್ಯಾರ್ಥಿಗಳಿಗೆ ಕಲಿಯಲು ಅನುಕೂಲವಾಗಲೆಂದು ಮನೆ ನಿರ್ಮಿಸಿಕೊಟ್ಟು ಆಶ್ರಯ ದಾನ ಮಾಡುತ್ತಿದ್ದಾರೆ. ಸಂಸ್ಥೆಯ ಈ ಕಾರ್ಯ ಇನ್ನಷ್ಟು ವರ್ಧಿಸಲಿ ಎಂದು ಪರ್ಯಾಯ ಶೀರೂರು ಮಠದ ದಿವಾನ ಡಾ. ಉದಯಕುಮಾರ್​ ಸರಳತ್ತಾಯ ಆಶಿಸಿದರು.
ಉಡುಪಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಶಕುಂತಲಾ ಮತ್ತು ಶಿವ ದಂಪತಿ ಪುತ್ರಿ ಸಿಂಚನಾಳಿಗೆ ಕಾರ್ಕಳ ತಾಲೂಕಿನ ಶಿವಪುರದಲ್ಲಿ ಎಲ್ಲ ಫಲಾನುಭವಿಗಳ ಪ್ರಾಯೋಜಕತ್ವದಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ 'ಶತಸ್ಮೃತಿ' ಮನೆಯನ್ನು ಭಾನುವಾರ (ಜೂ.28) ಉದ್ಘಾಟಿಸಿ ಮಾತನಾಡಿದರು.
ಉಡುಪಿ ಗಾಂಧಿ ಆಸ್ಪತ್ರೆಯ ಎಂಡಿ ಡಾ.ಹರಿಶ್ಚಂದ್ರ, ಬೆಂಗಳೂರು ಟೆಕ್ಸೆಲ್​ ಪೆ.ಲಿ.ನ ಎಂಡಿ ಹರೀಶ್​ ರಾಯಸ್​, ಕೆ. ಸದಾಶಿವ ಭಟ್​, ವಿಲಾಸಿನಿ ಬಾಬುರಾಯ ಶೆಣೈ, ಶಿವ ಇಲೆಕ್ಟ್ರಿಕಲ್ಸ್​ನ ಶ್ರೀನಿವಾಸ ಹೆಬ್ಬಾರ್​, ಡಾ. ಭಾರ್ಗವಿ ಐತಾಳ್​, ಬಿಇಒ ಉಮಾ, ರೂಪಾ ಹರೀಶ್​, ಡಾ. ರಾಮಚಂದ್ರ ಐತಾಳ್​, ಯು. ಶ್ರೀಧರ್​ ಉಪಸ್ಥಿತರಿದ್ದರು.
ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಕೆ.ಗಣೇಶ್​ ರಾವ್​, ಉಪಾಧ್ಯಕ್ಷರಾದ ಎಸ್​.ವಿ. ಭಟ್​, ಪಿ.ಕಿಶನ್​ ಹೆಗ್ಡೆ, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ್​ ರಾವ್​, ಸದಸ್ಯರಾದ ಯು.ವಿಶ್ವನಾಥ್​ ಶೆಣೈ, ಯು. ಎಸ್​. ರಾಜಗೋಪಾಲ ಆಚಾರ್ಯ, ಭುವನಪ್ರಸಾದ್​ ಹೆಗ್ಡೆ, ಯು. ಅನಂತರಾಜ ಉಪಾಧ್ಯ, ವಿಜಯಕುಮಾರ್​ ಮುದ್ರಾಡಿ, ಹಿರಿಯಣ್ಣ ಕಿದಿಯೂರ್​, ಎಚ್​.ಎನ್​. ವೆಂಕಟೇಶ್​, ನಟರಾಜ್​ ಉಪಾಧ್ಯ, ಡಾ. ರಾಜೇಶ್​ ನಾವುಡ, ಡಾ. ರಾಘವೇಂದ್ರ ರಾವ್​, ಗಣಪತಿ ಭಟ್​, ನಾಗರಾಜ್​ ಹೆಗಡೆ, ಕಿಶೋರ್​ ಸಿ. ಉದ್ಯಾವರ, ಗಣೇಶ್​ ಬ್ರಹ್ಮಾವರ, ನಿರಂಜನ್​ ಭಟ್​, ಎನ್​. ರಾಮ ಭಟ್​, ಎಸ್​. ಗಣರಾಜ್​ ಭಟ್​, ಡಾ.ಪ್ರತಿಮಾ ಆಚಾರ್ಯ, ನಾಗಭೂಷಣ್​ ಭಟ್​, ಅವಿನಾಶ್​ ಭಟ್​, ಚಂದ್ರಕಾಂತ್​, ಸನಕ, ಪ್ರಸನ್ನ, ಕಲಾವಿದ ಪ್ರವೀಣ್​ ಗಾಣಿಗ, ಶಿಕ್ಷಕ ಶಿವಪ್ರಸಾದ್​ ಅಡಿಗ ಹಾಗೂ ಊರಿನ ಅನೇಕರು ಪಾಲ್ಗೊಂಡಿದ್ದರು.
ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್​ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್​ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.
"

ಉಡುಪಿ ಯಕ್ಷಗಾನ ಕಲಾರಂಗದ ಕೆಲಸ ನಮಗೆಲ್ಲರಿಗೂ ಮಾದರಿ. ಅವರ ಶಿಸ್ತು, ಸಮಯ ಪ್ರಜ್ಞೆ, ಕಾರ್ಯವಿಧಾನ ನನ್ನನ್ನು ಆಕರ್ಷಿಸಿದೆ. ನಾವೂ ನಮ್ಮ ವಿಕಾಸ ಸೇವಾ ಟ್ರಸ್ಟ್​ ಮೂಲಕ ಇದೇ ರೀತಿಯ ಕೆಲಸ ಮಾಡುತ್ತಿದ್ದೇವೆ.

— ವಿ.ಸುನೀಲಕುಮಾರ್​. ಕಾರ್ಕಳ ಶಾಸಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net