ಕರಾವಳಿ ಭಾಗದ ಜನರಿಗೆ 15 ವರ್ಷದಿಂದ ಫರ್ನಿರ್ಸ್ ಮತ್ತು ಇಲೆಕ್ಟ್ರಾನಿಕ್ಸ್ ಪರಿಕರ ಒದಗಿಸುತ್ತಿರುವ ಸಂಸ್ಥೆಯು ಸ್ವಾತಂತ್ರ್ಯೋತ್ಸವ, ನವರಾತ್ರಿ, ಪ್ರಜಾಪ್ರಭುತ್ವದ ದಿನ ಹಾಗೂ ಇನ್ನಿತರ ವಿಶೇಷ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದೆ. ಉಡುಪಿಯಲ್ಲಿ ನೂತನ ಶಾಖೆ ಉದ್ಘಾಟನೆಯ ನಿಮಿತ್ತ 'ವಿಸಿಟ್ ವಿನ್' ಅಭಿಯಾನ ಆಯೋಜಿಸಿದ್ದು, ಮಳಿಗೆಗೆ ಭೇಟಿ ನೀಡುವವರಿಗೂ ಸಹ ಕನಸಿನ ತಾಣ ಕಾಶ್ಮೀರ ಪ್ರವಾಸ ಗೆಲ್ಲುವ ಸುವರ್ಣಾವಕಾಶ ಒದಗಿಸಲಾಗಿದೆ. ಒಂದೇ ಸೂರಿನಡಿ ವಿವಿಧ ಉತ್ಪನ್ನ, ಮನೆ ಹಾಗೂ ಕಚೇರಿಗಾಗಿ ಗುಣಮಟ್ಟದ ಫರ್ನಿಚರ್, ಹೋಮ್ ಮತ್ತು ಆಫೀಸ್ ಇಂಟೀರಿಯರ್ಸ್, ಡೆಕೋರೇಟಿವ್ ಹಾಗೂ ಫರ್ನಿಶಿಂಗ್ ಉತ್ಪನ್ನ, ಟೆಲಿವಿಷನ್, ಗೃಹೋಪಯೋಗಿ ವಿದ್ಯುತ್ ಉಪಕರಣ, ವಿವಿಧ ಕಂಪನಿಗಳ ಮೊಬೈಲ್, ಲ್ಯಾಪ್ಟಾಪ್ಗಳು ಹಾಗೂ ಕಿಚನ್ವೇರ್ ಸೇರಿದಂತೆ ಎಲ್ಲವೂ ಲಭಿಸಲಿದೆ. ಮನೆ ಹಾಗೂ ಸಂಸ್ಥೆಗಳಿಗೆ ಬೇಕಾಗುವ ದೊಡ್ಡ ಪ್ರಮಾಣದ ಸಗಟು ಬೇಡಿಕೆಯನ್ನೂ ಸಹ ಅತಿ ಕಡಿಮೆ ಅವಧಿಯಲ್ಲಿ ಸರಬರಾಜು ಮಾಡಲು ತಯಾರಿಕಾ ಘಟಕವನ್ನೂ ಹೊಂದಿದ್ದೇವೆ ಎಂದು ತಿಳಿಸಿದರು ವಿಕೆ ಸಂಸ್ಥೆಯ ಪ್ರವರ್ತಕ ವಿಠ್ಠಲ್ ಕುಲಾಲ್.