ಶ್ರೀ ಕ್ಷೇತ್ರ ಶಂಕರಪುರ ಏಕ ಜಾತಿ ಧರ್ಮ ಪೀಠದ ಪೀಠಾಧ್ಯಕ್ಷ ಶ್ರೀ ಸಾಯಿ ಈಶ್ವರ್ ಗುರೂಜಿ ಮಾತನಾಡಿದರು. ಬಡ ಕುಟುಂಬದ ವಿದ್ಯಾರ್ಥಿನಿ ಶಿಕ್ಷಣ ದತ್ತು ಸ್ವೀಕಾರ, ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು. ಶ್ರೀ ಕ್ಷೇತ್ರ ಶಂಕರಪುರ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಸುಧಾಕರ್ ಶೆಟ್ಟಿ, ಟ್ರಸ್ಟಿಗಳಾದ ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಸಮಾಜಸೇವಕ ಪ್ರಶಾಂತ್ ಪೂಜಾರಿ ಕಾಪು, ಕ್ಷೇತ್ರದ ಹಿತೈಷಿಗಳಾದ ರಾಮಣ್ಣ ಪೂಜಾರಿ, ವಿಜಯ್ ಕುಂದರ್, ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು. ರಾಜೇಶ್ ನಿರೂಪಿಸಿದರು.