ಬಡವರಿಗೆ ಮಾಡಿದ ಸಹಾಯದಿಂದ ಸಂತಸ

ಉಡುಪಿಯ ವಿದ್ಯಾಪೋಷಕ್​ನ ವಿದ್ಯಾರ್ಥಿನಿ ಮನೀಷಾ ಖಾರ್ವಿ ಇವಳಿಗೆ ನಿರ್ಮಿಸಿಕೊಟ್ಟ ಮನೆಯನ್ನು ಉದ್ಘಾಟಿಸಲಾಯಿತು. ಸುಂದರ್​ ರಾವ್​, ವಾದಿರಾಜ ಉಪಾಧ್ಯಾಯ, ರಘುರಾಮ್​ ಆಚಾರ್ಯ, ಸುಶೀಲಾ ಮುಗೆರಾಯ, ಎಚ್​.ವಿ. ರಮಾದೇವಿ, ಗೀತಾ ಆರ್​. ಆಚಾರ್ಯ, ಜಯಂತಿ, ಎಂ. ಗಂಗಾಧರ ರಾವ್​, ಮುರಳಿ ಕಡೆಕಾರ್​ ಇತರರಿದ್ದರು.
ಉಡುಪಿಯ ವಿದ್ಯಾಪೋಷಕ್​ನ ವಿದ್ಯಾರ್ಥಿನಿ ಮನೀಷಾ ಖಾರ್ವಿ ಇವಳಿಗೆ ನಿರ್ಮಿಸಿಕೊಟ್ಟ ಮನೆಯನ್ನು ಉದ್ಘಾಟಿಸಲಾಯಿತು. ಸುಂದರ್​ ರಾವ್​, ವಾದಿರಾಜ ಉಪಾಧ್ಯಾಯ, ರಘುರಾಮ್​ ಆಚಾರ್ಯ, ಸುಶೀಲಾ ಮುಗೆರಾಯ, ಎಚ್​.ವಿ. ರಮಾದೇವಿ, ಗೀತಾ ಆರ್​. ಆಚಾರ್ಯ, ಜಯಂತಿ, ಎಂ. ಗಂಗಾಧರ ರಾವ್​, ಮುರಳಿ ಕಡೆಕಾರ್​ ಇತರರಿದ್ದರು.
Published on

* ಪ್ರಾಯೋಜಕ ಸುಂದರ್​ ರಾವ್​ ಅನಿಸಿಕೆ

* ವಿದ್ಯಾಪೋಷಕ್​ನ 98ನೇ ಮನೆ ಉದ್ಘಾಟನೆ

ಉಡುಪಿ: ನನ್ನ ತಂದೆ ಕಡು ಬಡತನದಿಂದಾಗಿ ಮುಂಬಯಿಗೆ ಹೋಗಿ ಹೋಟೆಲ್​ ಆರಂಭಿಸಿ ಜೀವನ ನಡೆಸಿದ್ದರು. ಪರೋಪಕಾರಿಯಾಗಿದ್ದ ಅವರ ಸ್ಮರಣೆಯಲ್ಲಿ ಬಡವರಿಗೆ ಸಹಾಯ ಮಾಡಬೇಕೆಂದು ನಾನು ನನ್ನ ಮಡದಿ ಪ್ರೇಮಾ ಅಪೇಕ್ಷೆ ಪಟ್ಟಿದ್ದೆವು. ಬಡ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್​ ಸಂಸ್ಥೆ ಮನೆ ಕಟ್ಟಿಸಿಕೊಡುವ ವಿಷಯ ರಘುರಾಮ್​ ಆಚಾರ್ಯರಿಂದ ತಿಳಿಯಿತು. ಕಾಲ ಕೂಡಿ ಬಂದು ಮನೆ ಸಜ್ಜಾಗಿದೆ. ಬಡವರಿಗೆ ಮಾಡಿದ ಸಹಾಯದಿಂದ ನಾವ ಸಂತಸಗೊಂಡಿದ್ದೇವೆ ಎಂದು ಪ್ರಾಯೋಜಕ ಮುಂಬಯಿಯ ಸುಂದರ್​ ರಾವ್​ ತಿಳಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಮಂಜುನಾಥ್​ ಖಾರ್ವಿ ಮತ್ತು ಅನಿತಾ ದಂಪತಿ ಪುತ್ರಿ ಮನೀಷಾ ಖಾರ್ವಿ ಇವಳಿಗೆ ಗಂಗೊಳ್ಳಿಯಲ್ಲಿ ತನ್ನ ಮಾತಾ&ಪಿತೃರಾದ ಜಲಜಾಕ್ಷಿ ಮತ್ತು ರಾಘವೇಂದ್ರ ರಾವ್​ ಸ್ಮರಣೆಯಲ್ಲಿ ನಿರ್ಮಿಸಿದ 'ಶ್ರೀ ರಾಘವೇಂದ್ರ ನಿಲಯ' ಮನೆಯನ್ನು ಶುಕ್ರವಾರ (ಜೂ.12) ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯಿಂದ ಅನನ್ಯ ಕಾರ್ಯ
ಕೊಲೆಕಾಡಿಯ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಮಾತನಾಡಿ, ಯಕ್ಷಗಾನ ಕಲಾರಂಗ ಸಂಯೋಜಿಸುವ ಒಳ್ಳೆಯ ಆಟಗಳಲ್ಲಿ ಭಾಗವಹಿಸಿ ಆನಂದ ಅನುಭವಿಸಿದ್ದೆ. ಅವರ ಸಾಮಾಜಿಕ ಕಳಕಳಿಯ ಬಗ್ಗೆಯೂ ಕೇಳಿದ್ದೆ. ಇದೀಗ ಪ್ರತ್ಯಕ್ಷ ನೋಡುವ ಅವಕಾಶ ಒದಗಿತು. ಅವರ ಕಾರ್ಯ ಅನನ್ಯ ಎಂದರು.
ಪೇಜಾವರ ಮಠದ ದಿವಾನ ರಘುರಾಮ್​ ಆಚಾರ್ಯ ಮಾತನಾಡಿದರು. ಸುಶೀಲಾ ಮುಗೆರಾಯ, ಎಚ್​.ವಿ. ರಮಾದೇವಿ, ಗೀತಾ ಆರ್​. ಆಚಾರ್ಯ, ಗ್ರಾಪಂ ಅಧ್ಯಕ್ಷೆ ಜಯಂತಿ ಉಪಸ್ಥಿತರಿದ್ದರು.
ಪೇಜಾವರ ಮಠದ ವಿಷ್ಣುಮೂರ್ತಿ ಆಚಾರ್ಯ, ಸ್ನೇಹಾ ವಿ. ಆಚಾರ್ಯ, ಸಂಸ್ಥೆಯ ಉಪಾಧ್ಯಕ್ಷ ಪಿ. ಕಿಶನ್​ ಹೆಗ್ಡೆ, ಕೋಶಾಧಿಕಾರಿ ಕೆ. ಸದಾಶಿವ್​ ರಾವ್​,  ಸದಸ್ಯರಾದ ಯು. ವಿಶ್ವನಾಥ್​ ಶೆಣೈ, ಯು.ಎಸ್​. ರಾಜಗೋಪಾಲ್​ ಆಚಾರ್ಯ, ವಿಜಯಕುಮಾರ್​ ಮುದ್ರಾಡಿ, ಭುವನಪ್ರಸಾದ್​ ಹೆಗ್ಡೆ, ಹಿರಿಯಣ್ಣ ಕಿದಿಯೂರ್​, ಸುಜಯೀಂದ್ರ ಹಂದೆ, ಜಯರಾಮ ಪಡಿಯಾರ್​, ವಿದ್ಯಾಪೋಷಕ್​ ಫಲಾನುಭವಿಗಳಾದ ಡಾ.ದೀಪಿಕಾ ಶಾನುಭಾಗ್​, ನಿಶಾ, ಶ್ರಾವ್ಯಾ, ನಿಸರ್ಗ ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್​ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್​ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.
"

ವಿದ್ಯಾಪೋಷಕ್​ ಮೂಲಕ ಸಂಸ್ಥೆ ಮಾಡುತ್ತಿರುವ ಕಾರ್ಯ ಅಗಾಧವಾದುದು. ನಾನು ಆಡಳಿತ ಸಮಿತಿಯ ಸದಸ್ಯನಾಗಿರುವ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾಪೋಷಕ್​ ವಿದ್ಯಾರ್ಥಿಗಳ ಕಾಲೇಜು ಶುಲ್ಕದಲ್ಲಿ ರಿಯಾಯಿತಿ ಮಾಡಿಸಲು ಪ್ರಯತ್ನಿಸುತ್ತೇನೆ.

— ಸೀತಾರಾಮ ನಕ್ಕತ್ತಾಯ. ಕುಂದಾಪುರದ ಓಂ ಟೈಲ್ಸ್​ನ ಮಾಲೀಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net