ಯಕ್ಷಗಾನ ಕಲಾರಂಗದ ಕಾರ್ಯ ಪಾರದರ್ಶಕ

ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ ಫಲಾನುಭವಿ ಸಜನಿ ಪೂಜಾರಿಗೆ ನಿರ್ಮಿಸಿಕೊಟ್ಟ ಮನೆಯನ್ನು ಎ.ಕಿರಣಕುಮಾರ್​ ಕೊಡ್ಗಿ ಉದ್ಘಾಟಿಸಿದರು. ಉಪೇಂದ್ರ ಸೋಮಯಾಜಿ, ವಿ.ಜಿ. ಶೆಟ್ಟಿ, ಬನ್ನಾಡಿ ಸೋಮನಾಥ ಹೆಗ್ಡೆ, ನ್ಯಾ.ಅರುಣಾ ಎಸ್​. ಹೆಗ್ಡೆ, ಜಗದೀಶ್​ ನಾವುಡ, ಡಾ. ಬಿ.ಜಗದೀಶ್​ ಶೆಟ್ಟಿ, ಪಿ.ಕಿಶನ್​ ಹೆಗ್ಡೆ, ಎಂ. ಗಂಗಾಧರ್​ ರಾವ್​, ಮುರಳಿ ಕಡೆಕಾರ್​ ಇತರರಿದ್ದರು.
ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ ಫಲಾನುಭವಿ ಸಜನಿ ಪೂಜಾರಿಗೆ ನಿರ್ಮಿಸಿಕೊಟ್ಟ ಮನೆಯನ್ನು ಎ.ಕಿರಣಕುಮಾರ್​ ಕೊಡ್ಗಿ ಉದ್ಘಾಟಿಸಿದರು. ಉಪೇಂದ್ರ ಸೋಮಯಾಜಿ, ವಿ.ಜಿ. ಶೆಟ್ಟಿ, ಬನ್ನಾಡಿ ಸೋಮನಾಥ ಹೆಗ್ಡೆ, ನ್ಯಾ.ಅರುಣಾ ಎಸ್​. ಹೆಗ್ಡೆ, ಜಗದೀಶ್​ ನಾವುಡ, ಡಾ. ಬಿ.ಜಗದೀಶ್​ ಶೆಟ್ಟಿ, ಪಿ.ಕಿಶನ್​ ಹೆಗ್ಡೆ, ಎಂ. ಗಂಗಾಧರ್​ ರಾವ್​, ಮುರಳಿ ಕಡೆಕಾರ್​ ಇತರರಿದ್ದರು.
Published on

* ಶಾಸಕ ಎ.ಕಿರಣಕುಮಾರ್​ ಕೊಡ್ಗಿ ಶ್ಲಾಘನೆ

* ವಿದ್ಯಾಪೋಷಕ್​ನ 93ನೇ ಮನೆ ಉದ್ಘಾಟನೆ

ಉಡುಪಿ: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ ಫಲಾನುಭವಿಗಳ ಆಯ್ಕೆ, ಮನೆ ನಿರ್ಮಾಣಕ್ಕೆ ಅರ್ಹತೆಯ ಮಾನದಂಡ ಎಲ್ಲವೂ ಪಾರದರ್ಶಕ. ಅಲ್ಲಿ ಯಾರ ಪ್ರಭಾವವೂ ಕೆಲಸ ಮಾಡದು. ಅವರ ಶಿಸ್ತು, ಸಮಯ ಪ್ರಜ್ಞೆಯಿಂದ ಕೂಡಿದ ಕಾರ್ಯಕ್ರಮ ಹೇಗಿದೆಯೆಂದರೆ ಬರಲು ಅನಿವಾರ್ಯ ಕಾರಣದಿಂದ ಸ್ವಲ್ಪ ವಿಳಂಬವಾದರೂ ನಮ್ಮನ್ನು ಅಪರಾಧಿ ಪ್ರಜ್ಞೆಗೆ ಒಳಗಾಗುವಂತೆ ಮಾಡುತ್ತದೆ ಎಂದು ಕುಂದಾಪುರ ಶಾಸಕ ಎ.ಕಿರಣಕುಮಾರ್​ ಕೊಡ್ಗಿ ಹೇಳಿದರು.
ಉಡುಪಿ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್​ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಸರಸ್ವತಿ ಮತ್ತು ಬಸವ ಪೂಜಾರಿ ಅವರ ಪುತಿ ಸಜನಿ ಪೂಜಾರಿ (ಎಸ್​ಎಸ್​ಎಲ್​ಸಿಲ್ಲಿ ಶೇ.98, ಪಿಯುಸಿಯಲ್ಲಿ ಶೇ.97 ಅಂಕ)ಗೆ ಬ್ರಹ್ಮಾವರ ತಾಲೂಕಿನ ವಡ್ಡರ್ಸೆಯಲ್ಲಿ ದಯಾಶಂಕರ್​ ಶೆಟ್ಟಿ ಮತ್ತು ಪ್ರತಿಭಾ ಶೆಟ್ಟಿ ಗೌರವಾರ್ಥ ಮುಂಬಯಿಯ ವಿಂಡ್ಸರ್​ ರೆಫ್ರೆಕ್ಟರಿಸ್​ ಪೆ.ಲಿ. ಸಂಸ್ಥೆಯ ಸಿಇಒ ಪ್ರಜ್ಞಾ ಶೆಟ್ಟಿ ಇವರು ಸಂಸ್ಥೆಯ ವತಿಯಿಂದ ಹಾಗೂ ಯಕ್ಷಗಾನ ಕಲಾರಂಗದ ಸಹಕಾರದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆ 'ಪ್ರತಿಭಾ ನಿಲಯ'ವನ್ನು ಶನಿವಾರ (ಮೇ 2) ಉದ್ಘಾಟಿಸಿ ಮಾತನಾಡಿದರು.

ನಾಡಿಗೆ ಹೆಮ್ಮೆ

ನಿವೃತ್ತ ಪ್ರಾಧ್ಯಾಪಕ ಉಪೇಂದ್ರ ಸೋಮಯಾಜಿ ಮಾತನಾಡಿ, ಯಕ್ಷಗಾನ ಕಲಾರಂಗವು ಸುಮನಸರ ಕೂಟ. ಅವರ ಸಮಾಜಪರ ಕಾಳಜಿ ಅನನ್ಯ. ಈ ಕಾಲದಲ್ಲೂ ಇಂತಹ ಸಂಘಟನೆ ಇದೆ ಎನ್ನುವುದೇ ನಾಡಿಗೆ ಹೆಮ್ಮೆ. ಈ ಸಂಸ್ಥೆಯ ವತಿಯಿಂದ ನಿರ್ಮಿಸಿಕೊಟ್ಟ 93ನೇ ಮನೆಯಿದು ಎಂದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿಯ ಲಯನ್ಸ್​ ಮಾಜಿ ಗವರ್ನರ್​ ವಿ.ಜಿ. ಶೆಟ್ಟಿ ಮಾತನಾಡಿ, ಮನೆಯ ಪ್ರಾಯೋಜಕತ್ವ ವಹಿಸಿಕೊಂಡ ಪ್ರಜ್ಞಾ ಶೆಟ್ಟಿ ಅವರಿಗೆ ಕೃತಜ್ಞತೆ ಹೇಳಿದರು. ಕುಂದಾಪುರ ವಕೀಲರ ಸಂಘದ ಮಾಜಿ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಚನ್ನರಾಯಪಟ್ಟಣದ ಪ್ರಧಾನ ಹಿರಿಯ ಸಿವಿಲ್​ ನ್ಯಾಯಾಧೀಶೆ ಅರುಣಾ ಸೋಮನಾಥ ಹೆಗ್ಡೆ ಆಗಮಿಸಿದ್ದರು.
ಪ್ರಾಂಶುಪಾಲ ಜಗದೀಶ ನಾವುಡ, ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಬಿ.ಜಗದೀಶ್​ ಶೆಟ್ಟಿ, ಭರತ್​ ಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷ ಪಿ. ಕಿಶನ್​ ಹೆಗ್ಡೆ, ಯು. ವಿಶ್ವನಾಥ ಶೆಣೈ, ಯು.ಎಸ್​. ರಾಜಗೋಪಾಲ್​ ಆಚಾರ್ಯ, ವಿಷ್ಣುಮೂರ್ತಿ ಭಟ್​ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಪದಾಧಿಕಾರಿಗಳಾದ ಪ್ರೊ. ಕೆ.ಸದಾಶಿವ ರಾವ್​, ವಿದ್ಯಾಪ್ರಸಾದ್​,  ಸದಸ್ಯರಾದ ಭುವನಪ್ರಸಾದ್​ ಹೆಗ್ಡೆ, ಅನಂತರಾಜ ಉಪಾಧ್ಯ, ಹಿರಿಯಣ್ಣ ಕಿದಿಯೂರು, ಜಯರಾಮ ಪಡಿಯಾರ, ಎಚ್​.ಎನ್​. ವೆಂಕಟೇಶ್​, ಗಣೇಶ್​ ಬ್ರಹ್ಮಾವರ, ಸನಕ ಕಡೆಕಾರ್​, ವಿವೇಕ ಪ್ರೌಢಶಾಲೆಯ ಮಹಾಲಕ್ಷ್ಮೀ, ಬನ್ನಾಡಿ ವಡ್ಡರ್ಸೆ ಲಯನ್ಸ್​ ಕ್ಲಬ್​ ಸದಸ್ಯರು ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್​ ರಾವ್​ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್​ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net