ಮನುಷ್ಯರಿಗೂ ಹರಡುತ್ತದೆ ಪ್ರಾಣಿಗಳಿಗಿರುವ ಕಾಯಿಲೆ

ಉಡುಪಿಯ ಪೂರ್ಣಪ್ರಜ್ಞ ಪ.ಪೂ. ಕಾಲೇಜ್​ನಲ್ಲಿ ಇಕೋ ಕ್ಲಬ್​ ಉದ್ಘಾಟಿಸಿ ಡಾ.ಪ್ರಶಾಂತ್​ ಶೆಟ್ಟಿ ಮಾತನಾಡಿದರು. ಸಿ.ಸುರೇಶ್​ ತುಂಗ, ಡಾ.ಪುಷ್ಪಾ ಜಿ. ಮಾಲಗಿತ್ತಿಮಠ, ಪದ್ಮಾ ಎ. ಆಚಾರ್ಯ ಇದ್ದರು.
ಉಡುಪಿಯ ಪೂರ್ಣಪ್ರಜ್ಞ ಪ.ಪೂ. ಕಾಲೇಜ್​ನಲ್ಲಿ ಇಕೋ ಕ್ಲಬ್​ ಉದ್ಘಾಟಿಸಿ ಡಾ.ಪ್ರಶಾಂತ್​ ಶೆಟ್ಟಿ ಮಾತನಾಡಿದರು. ಸಿ.ಸುರೇಶ್​ ತುಂಗ, ಡಾ.ಪುಷ್ಪಾ ಜಿ. ಮಾಲಗಿತ್ತಿಮಠ, ಪದ್ಮಾ ಎ. ಆಚಾರ್ಯ ಇದ್ದರು.
Published on

* ಪಶುವೈದ್ಯಾಧಿಕಾರಿ ಡಾ.ಪ್ರಶಾಂತ್​ ಶೆಟ್ಟಿ ಮಾಹಿತಿ

* ಪೂರ್ಣಪ್ರಜ್ಞ ಪ.ಪೂ. ಕಾಲೇಜ್​ನಲ್ಲಿ ಇಕೋ ಕ್ಲಬ್​ ಉದ್ಘಾಟನೆ

ಉಡುಪಿ: ರೇಬಿಸ್​ ರೋಗವು ಪ್ರಾಣಿಗಳು ಕಚ್ಚುವುದರಿಂದ ಹರಡಲಿದ್ದು, ಈ ರೋಗಕ್ಕೆ ತುತ್ತಾದ ದನದ ಹಲ್ಲು ತಾಗುವುದರಿಂದಲೂ ಆ ಕಾಯಿಲೆ ಮನುಷ್ಯರಿಗೂ ತಗುಲಬಹುದು.ಆದರೆ, ದನದ ಹಾಲನ್ನು ಕುದಿಸಿ ಕುಡಿಯುವುದರಿಂದ ರೋಗ ಹರಡದು ಎಂದು ಮಣಿಪಾಲದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಪ್ರಶಾಂತ್​ ಶೆಟ್ಟಿ ತಿಳಿಸಿದರು.
ಉಡುಪಿಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜ್​ನಲ್ಲಿ ಇಕೋ ಕ್ಲಬ್​ ಉದ್ಘಾಟಿಸಿ, ರೇಬಿಸ್​ ಮತ್ತು ಜೊನೋಟಿಕ್​ ರೋಗಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ವಿವಿಧ ರೋಗಗಳ ಮಾಹಿತಿ

ಹುಚ್ಚು ಹಿಡಿದ ನಾಯಿ ನೀರಿಗೆ ಹೆದರುತ್ತದೆ ಎನ್ನುವುದು ತಪ್ಪು ಕಲ್ಪನೆ. ಹೈಡ್ರೋಫೋಬಿಯಾ (ಜಲ ದ್ವೇಷ)ವು ಮನುಷ್ಯನಲ್ಲಿ ಮಾತ್ರ ಕಾಣುವ ರೋಗ ಲಕ್ಷಣ. ಬೆಕ್ಕು, ನಾಯಿ ಕಚ್ಚಿದರೆ ಅಥವಾ ಪರಚಿದರೆ ಮೊದಲು ಬಟ್ಟೆ ಒಗೆಯುವ ಸಾಬೂನಿನಿಂದ ತೊಳೆಯಬೇಕು. ನಂತರ ಟಿಟಿ ಇಂಜೆಕ್ಷನ್​ ತೆಗೆದುಕೊಳ್ಳಬೇಕು. ಜೋನೋಟಿಕ್​ ರೋಗಗಳು ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಹರಡುವ ಸಾಂಕ್ರಾಮಿಕ ರೋಗಗಳಾಗಿವೆ. ಕುದುರೆಗಳಲ್ಲಿ ಗ್ಲಾಂಡರ್ಸ್​ ರೋಗ, ದನಗಳಲ್ಲಿ ಬ್ರುಸೆಲ್ಲೋಸಿಸ್​ ರೋಗ, ಮೇಕೆಗಳಿಂದ ಅಂಥ್ರಾಕ್ಸ್​ ರೋಗ ಮನುಷ್ಯರಿಗೆ ಹರಡುತ್ತದೆ ಎಂದು ಮಾಹಿತಿ ನೀಡಿದರು.
ಪಶುವೈದ್ಯೆ ಡಾ. ಪುಷ್ಪಾ ಜಿ. ಮಾಲಗಿತ್ತಿಮಠ ಮಾತನಾಡಿ, ವಿದ್ಯಾರ್ಥಿಗಳು ಪ್ರಸ್ತುತ ಹೆಚ್ಚು ಅವಕಾಶವರುವ ಪಶುವೈದ್ಯಕಿಯ ಕೋರ್ಸ್​ ಸೇರುವಂತೆ ಸಲಹೆ ನೀಡಿದರು.
ಕಾಲೇಜ್​ನ ಪ್ರಾಂಶುಪಾಲ ಸಿ.ಸುರೇಶ್​ ತುಂಗ ಅಧ್ಯಕ್ಷತೆ ವಹಿಸಿದ್ದರು. ಇಕೋ ಕ್ಲಬ್​ನ ಸಂಯೋಜಕಿ ಪದ್ಮಾ ಎ.ಆಚಾರ್ಯ, ಉಪನ್ಯಾಸಕರಾದ ವೀಣಾ ಜಿ. ಪ್ರಭು, ಲಕ್ಷ್ಮಣನ್​ ಹಾಗೂ ಪಾವನಾ ಕಶ್ಯಪ್​ ಉಪಸ್ಥಿತರಿದ್ದರು.
ಮೇದಿನಿ ಪ್ರಾರ್ಥಿಸಿದರು. ಇಕೋ ಕ್ಲಬ್​ನ ಕಾರ್ಯದರ್ಶಿ ಸಾನ್ವಿ ವಿ. ಸ್ವಾಗತಿಸಿದರು. ಅಮಿರತಾ ಕಾರ್ಯಕ್ರಮ ನಿರೂಪಿಸಿದರು. ಬಿಂದಿಯಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net