ಲಭಿಸುವ ಅವಕಾಶಗಳ ಸದುಪಯೋಗ ಅಗತ್ಯ

ಉಡುಪಿ ಪೂರ್ಣಪ್ರಜ್ಞ ಕಾಲೇಜ್​ನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಪ್ರಶಾಂತ ಹೊಳ್ಳ ಉದ್ಘಾಟಿಸಿದರು. ಡಾ. ಉದಯ್​ ಶೆಟ್ಟಿ, ಡಾ. ರಾಮು ಎಲ್​., ಹರ್ಷವರ್ದನ್​ ಶೆಟ್ಟಿ, ಡಾ. ರಮೇಶ್​ ಟಿ.ಎಸ್​.,ಡಾ. ವಿನಯ್​ ಕುಮಾರ್​, ಡಾ. ಆನಂದ್​ ಆಚಾರ್ಯ, ಧನ್ಯಶ್ರೀ, ಜಯಲಕ್ಷ್ಮೀ ಇದ್ದರು.
ಉಡುಪಿ ಪೂರ್ಣಪ್ರಜ್ಞ ಕಾಲೇಜ್​ನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಪ್ರಶಾಂತ ಹೊಳ್ಳ ಉದ್ಘಾಟಿಸಿದರು. ಡಾ. ಉದಯ್​ ಶೆಟ್ಟಿ, ಡಾ. ರಾಮು ಎಲ್​., ಹರ್ಷವರ್ದನ್​ ಶೆಟ್ಟಿ, ಡಾ. ರಮೇಶ್​ ಟಿ.ಎಸ್​.,ಡಾ. ವಿನಯ್​ ಕುಮಾರ್​, ಡಾ. ಆನಂದ್​ ಆಚಾರ್ಯ, ಧನ್ಯಶ್ರೀ, ಜಯಲಕ್ಷ್ಮೀ ಇದ್ದರು.
Published on

* ವಿದ್ಯಾರ್ಥಿಗಳಿಗೆ ಸಿಎ ಪ್ರಶಾಂತ್​ ಹೊಳ್ಳ ಕರೆ 

* ಪಿಪಿಸಿಯಲ್ಲಿ ಉದ್ಯೋಗ ಮೇಳ ಉದ್ಘಾಟನೆ

ಉಡುಪಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಸುಲಭವಾಗಿ ಲಭಿಸದು. ಆದರೆ, ಉದ್ಯೋಗ ಮೇಳಗಳಲ್ಲಿ ವಿವಿಧ ಕಂಪನಿಗಳೇ ಭಾಗವಹಿಸಿ ಉದ್ಯೋಗವಕಾಶ ನೀಡುತ್ತವೆ. ಹೀಗಾಗಿ ಇಂತಹ ಮೇಳಗಳಲ್ಲಿ ಪಾಲ್ಗೊಂಡು ಉದ್ಯೋಗ ಪಡೆದುಕೊಳ್ಳುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಬೇಕು. ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಉದ್ಯೋಗಾಕಾಂಕ್ಷಿಗಳಿಗೆ ಉಡುಪಿ ಪೂರ್ಣಪ್ರಜ್ಞ ಕಾಲೇಜ್​ನ ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಸಿಎ ಪ್ರಶಾಂತ್​ ಹೊಳ್ಳ ಕರೆ ನೀಡಿದರು.
ಪೂರ್ಣಪ್ರಜ್ಞ ಕಾಲೇಜ್​ (ಸ್ವಾಯತ್ತ) ಉಡುಪಿ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ಉಪನ್ಯಾಸಕರ ಸಂಘ ಹಾಗೂ ಸೃಷ್ಟಿ ಇಂಫೋಟೆಕ್​ ಕುಂದಾಪುರ ಸಹಯೋಗದೊಂದಿಗೆ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ&-2026ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೌಶಲ ಅಗತ್ಯ

ಮಂಗಳೂರು ವಿವಿಯ ವಾಣಿಜ್ಯ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಡಾ. ಉದಯ್​ ಶೆಟ್ಟಿ ಮಾತನಾಡಿ, ಅಂಕಗಳಿಗೆ ಪ್ರಾಮುಖ್ಯತೆ ಕೊಡುವುದರ ಜತೆಗೆ ಉದ್ಯೋಗ ನಿರ್ವಹಣೆಗೆ ಬೇಕಾದ ಜ್ಞಾನ ಹಾಗೂ ಕೌಶಲವನ್ನೂ ಬೆಳೆಸಿಕೊಳ್ಳಬೇಕು. ಅದರಿಂದ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಕಾಲೇಜ್​ನ ಪ್ರಾಂಶುಪಾಲ ಡಾ. ರಾಮು ಎಲ್​. ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ಸೃಷ್ಟಿ  ಇನ್ಫೋಟೆಕ್​ನ ಮೆನೇಜಿಂಗ್​ ಡೈರೆಕ್ಟರ್​ ಹರ್ಷವರ್ದನ್​ ಶೆಟ್ಟಿ ಉದ್ಯೋಗ ಮೇಳದ ಉಸ್ತುವಾರಿ ವಹಿಸಿದ್ದರು. 
ಕಾಲೇಜ್​ನ ಪರೀಕ್ಷಾ ವಿಭಾಗದ ನಿಯಂತ್ರಣಾಧಿಕಾರಿ ಡಾ. ರಮೇಶ್​ ಟಿ.ಎಸ್​., ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ. ವಿನಯ್​ ಕುಮಾರ್​, ಉದ್ಯೋಗ ಮಾರ್ಗದರ್ಶನ ಘಟಕದ ಸಂಯೋಜಕ ಡಾ. ಆನಂದ್​ ಆಚಾರ್ಯ, ವಿದ್ಯಾರ್ಥಿ ತರಬೇತಿ ಘಟಕದ ಸಂಯೋಜಕಿ ಹಾಗೂ ಪ್ಲೇಸ್​ಮೆಂಟ್​ ಆಫೀಸರ್​ ಧನ್ಯಶ್ರೀ, ಉದ್ಯೋಗ ಮೇಳದ ಸಂಯೋಜಕಿ ಜಯಲಕ್ಷ್ಮೀ ಉಪಸ್ಥಿತರಿದ್ದರು.
ಸಿಂಧೂ ಹೆಗಡೆ ಪ್ರಾರ್ಥಿಸಿದರು. ನೇಹಾ ಕಾರ್ಯಕ್ರಮ ನಿರ್ವಹಿಸಿದರು.

135 ಅಭ್ಯರ್ಥಿಗಳಿಗೆ ಉದ್ಯೋಗವಕಾಶ

ಉದ್ಯೋಗ ಮೇಳದಲ್ಲಿ 17 ಕಂಪನಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, 623  ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ವಿವಿಧ ಕಂಪನಿಗಳಲ್ಲಿ 213 ಮಂದಿ ಮುಂದಿನ ಸುತ್ತಿಗೆ ಆಯ್ಕೆಯಾದರು. 135 ಅಭ್ಯರ್ಥಿಗಳು ಅಂತಿಮವಾಗಿ ಆಯ್ಕೆಗೊಂಡು ಉದ್ಯೋಗವಕಾಶ ಪಡೆದರು.
"

ಪ್ರತಿವರ್ಷವೂ ನಮ್ಮ ಪಿಪಿಸಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, ಹಲವಾರು ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೂ ಸಹ ಇಂತಹ ಅವಕಾಶ ಕಲ್ಪಿಸುವುದು ನಮ್ಮ ವಿದ್ಯಾಸಂಸ್ಥೆಯ ಸಾಮಾಜಿಕ ಜವಾಬ್ದಾರಿಯಾಗಿದೆ.

— ಡಾ. ರಾಮು ಎಲ್​. ಪೂರ್ಣಪ್ರಜ್ಞ ಕಾಲೇಜ್​ನ ಪ್ರಾಂಶುಪಾಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net