ಅಂತಾರಾಜ್ಯ ಮಟ್ಟದ ವಾಲಿಬಾಲ್​ ಪಂದ್ಯಾಟ ಅಟಲ್​ ಟ್ರೋಫಿ ಉದ್ಘಾಟನೆ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಂತರ್​ ರಾಜ್ಯ ಮಟ್ಟದ ಮಹಿಳಾ ಹಾಗೂ ಪುರುಷರ ಆಹ್ವಾನಿತ ತಂಡಗಳ ವಾಲಿಬಾಲ್​ ಪಂದ್ಯಾಟ ಉದ್ಘಾಟಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಂತರ್​ ರಾಜ್ಯ ಮಟ್ಟದ ಮಹಿಳಾ ಹಾಗೂ ಪುರುಷರ ಆಹ್ವಾನಿತ ತಂಡಗಳ ವಾಲಿಬಾಲ್​ ಪಂದ್ಯಾಟ ಉದ್ಘಾಟಿಸಿದರು.
Published on
ಉಡುಪಿ: ಬಿಜೆಪಿ ವಿಶ್ವದ ಅತ್ಯಂತ ದೊಡ್ಡ ಪಕ್ಷ$ವಾಗಿ ಹೊರ ಹೊಮ್ಮಲು ಅಟಲ್​ ಬಿತ್ತಿದ ರಾಷ್ಟ್ರಪ್ರೇಮದ ಬೀಜ ಕಾರಣವಾಗಿದೆ. ಸಮರ್ಥ ಭಾರತ ನಿರ್ಮಾಣದ ಕನಸು ಮೋದಿ ಸರ್ಕಾರದಿಂದ ಶತಪ್ರತಿಶತ ನನಸಾಗುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿ ನಗರ ಬಿಜೆಪಿ ವತಿಯಿಂದ ನಗರ ಬಿಜೆಪಿ ಮಹಿಳಾ ಮೋರ್ಚಾ ಹಾಗೂ ಯುವ ಮೋರ್ಚಾದ ಸಂಯುಕ್ತ ಆಶ್ರಯದಲ್ಲಿ ಮಾಜಿ ಪ್ರಧಾನಿ ಭಾರತರತ್ನ ಅಟಲ್​ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧಿ ಅಂಗವಾಗಿ ನಡೆದ ಅಂತರ್​ ರಾಜ್ಯ ಮಟ್ಟದ ಮಹಿಳಾ ಹಾಗೂ ಪುರುಷರ ಆಹ್ವಾನಿತ ತಂಡಗಳ ವಾಲಿಬಾಲ್​ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿಯಾಗಿ ಅಟಲ್​ ಅವರು ಅನೇಕ ಜನಪರ ಕಾರ್ಯಗಳನ್ನು ಮಾಡಿದರೂ 2004ರ ಚುನಾವಣೆಯಲ್ಲಿ ಸೋಲನುಭವಿಸುವಂತಾಗಿದ್ದು, ಸರ್ಕಾರದ ಯೋಜನೆಗಳ ಮಾಹಿತಿ ಜನಮಾನಸಕ್ಕೆ ತಲುಪಿಸುವಲ್ಲಿ ಕಾರ್ಯಕರ್ತರು ಯಶಸ್ವಿಯಾಗಿಲ್ಲ ಎಂಬ ದುಗುಡ ಅವರನ್ನು ಕಾಡುತ್ತಿತ್ತು. ಹೀಗಾಗಿ ಸರ್ಕಾರ ಕೆಲಸಗಳು ಪ್ರಚಾರವಿಲ್ಲದಿದ್ದರೆ ಚುನಾವಣೆಯಲ್ಲಿ ಗೆಲುವು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಬೆಳ್ತಂಗಡಿ ಶಾಸಕ ಹರೀಶ್​ ಪೂಂಜಾ ಮಾತನಾಡಿ, ಪ್ರಧಾನಿ ಮಂತ್ರಿ ಗ್ರಾಮ ಸಡಕ್​ ಯೋಜನೆ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಕೇಂದ್ರ ಸರ್ಕಾರ ರಸ್ತೆಗಳನ್ನು ನಿರ್ಮಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ವಾಜಪೇಯಿಯವರು. ಸರ್ವಶಿಾ ಅಭಿಯಾನ ಶಿಕ್ಷಣ ಕ್ರಾಂತಿ ಹಾಗೂ ಸುವರ್ಣ ಚತುಷ್ಪಥ ಯೋಜನೆ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆದಿದ್ದವು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸುನೀಲ್​ ಕುಮಾರ್​, ಗುರ್ಮೆ ಸುರೇಶ್​ ಶೆಟ್ಟಿ, ವಿಪ ಸದಸ್ಯ ಕಿಶೋರ್​ಕುಮಾರ್​, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್​ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಉದಯ್​ ಕುಮಾರ್​ ಶೆಟ್ಟಿ, ಕಿರಣ್​ ಕುಮಾರ್​, ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್​ ಅಮೀನ್​ ಉಪಸ್ಥಿತರಿದ್ದರು. ಶಾಸಕ ಯಶ್​ ಪಾಲ್​ ಸುವರ್ಣ ಸ್ವಾಗತಿಸಿ, ಗಿರೀಶ್​ ಕಾಂಚನ್​ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net