ಇನ್ನರ್ ವೀಲ್ ಕ್ಲಬ್ ಆಫ್ ಉಡುಪಿಯ ಪದಗ್ರಹಣ ಸಮಾರಂಭ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಿತು. ಶುಭಾ ಬಾಸ್ರಿ, ಸರಿತಾ ವಿ.ಕೆ., ಶಾಲಿನಿ ರಾಘವೇಂದ್ರ, ರಾಜಲಕ್ಷ್ಮೀ ಡಿ. ಶೆಟ್ಟಿ, ವಾಣಿ ಜೆ. ಪ್ರಭು, ವೈಷ್ಣವಿ ಆಚಾರ್ಯ, ಮಾಲತಿ ಅಮೀನ್, ಪ್ರೇಮಾ ಜಗದೀಶ್ ಇತರರಿದ್ದರು.
Published on:
Copied
Follow Us
* ಇನ್ನರ್ ವೀಲ್ ಕ್ಲಬ್ ಆಫ್ ಉಡುಪಿ ಪದಾಧಿಕಾರಿಗಳಪದಗ್ರಹಣ
ಉಡುಪಿ: ಇನ್ನರ್ ವೀಲ್ ಕ್ಲಬ್ ಆಫ್ ಉಡುಪಿಯ 2026-27ನೇ ಸಾಲಿನ ಪದಾಧಿಕಾರಿಗಳಪದಗ್ರಹಣ ಸಮಾರಂಭ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.
ಮಾಜಿ ಅಧ್ಯಕ್ಷೆ ಶುಭಾ ಬಾಸ್ರಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಸರಿತಾ ವಿ.ಕೆ. ಅಧ್ಯಕ್ಷೆಯಾಗಿ, ಶಾಲಿನಿ ರಾಘವೇಂದ್ರ ಮಾಜಿ ಅಧ್ಯಕ್ಷೆಯಾಗಿ (ಐಪಿಪಿ), ರಾಜಲಕ್ಷ್ಮೀ ಡಿ. ಶೆಟ್ಟಿ ಉಪಾಧ್ಯಕ್ಷೆಯಾಗಿ, ವಾಣಿ ಜೆ. ಪ್ರಭು ಕಾರ್ಯದರ್ಶಿಯಾಗಿ, ವೈಷ್ಣವಿ ಆಚಾರ್ಯ ಖಜಾಂಚಿಯಾಗಿ, ಮಾಲತಿ ಅಮೀನ್ ಸಂಪಾದಕಿಯಾಗಿ ಹಾಗೂ ಪ್ರೇಮಾ ಜಗದೀಶ್ ಅಂತಾರಾಷ್ಟ್ರೀಯ ಸೇವಾ ಸಂಘಟಕಿಯಾಗಿ (ಐಎಸ್ಒ) ಅಧಿಕಾರ ಸ್ವೀಕರಿಸಿದರು.
ಕಾರ್ಯಕಾರಿ ಮಂಡಳಿಯ ಸದಸ್ಯೆಯರಾಗಿ ಗಿರಿಜಾ ರಾವ್, ನಿರ್ಮಲಾ ಪ್ರಭಾಕರ್, ರಶ್ಮಿ ಹೊಳ್ಳ, ಶುಭಾ ಬಾಸ್ರಿ, ಶ್ರೀಲಕ್ಷ್ಮೀ ಹಾಗೂ ಸ್ವಾತಿ ಪ್ರಭು ಆಯ್ಕೆಯಾದರು. ಸುಧಾ ರಾವ್ ಕಾರ್ಯಕ್ರಮ ನಿರ್ವಹಿಸಿದರು.