ಏಪ್ರಿಲ್​ 20ರಂದು ಉಡುಪಿ ನೂತನ ಬಿಷಪ್​ ಅಧಿಕಾರ ಸ್ವೀಕಾರ ಸಮಾರಂಭ

ಡಾ. ಲೆಸ್ಲಿ ಕ್ಲಿಫರ್ಡ್​ ಡಿ'ಸೋಜಾ
ಡಾ. ಲೆಸ್ಲಿ ಕ್ಲಿಫರ್ಡ್​ ಡಿ'ಸೋಜಾ
Published on
ಉಡುಪಿ: ಕ್ರೈಸ್ತ ಧರ್ಮಪ್ರಾಂತ್ಯದ ದ್ವೀತಿಯ ಧಮಾರ್ಧ್ಯಕ್ಷ ಡಾ. ಲೆಸ್ಲಿ ಕ್ಲಿಫರ್ಡ್​ ಡಿ'ಸೋಜಾ ಅಧಿಕಾರ ಸ್ವೀಕಾರ ಸಮಾರಂಭ ಏ.20ರಂದು ಸೋಮವಾರ ಬೆಳಗ್ಗೆ 9 ಗಂಟೆಗೆ ಕಲ್ಯಾಣಪುರದ ಮಿಲಾಗ್ರಿಸ್​ ಕಾಲೇಜು ಮೈದಾನದಲ್ಲಿ ನೆರವೇರಲಿದೆ ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್​ ಡೆಸಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೋವಾ ಮತ್ತು ದಮನ್​ ಮಹಾಧರ್ಮಪ್ರಾಂತ್ಯದ ಮಹಾಧಮಾರ್ಧ್ಯಕ್ಷ ಕಾರ್ಡಿನಲ್​ ಫಿಲಿಪ್​ ನೆರಿ ಫೆರಾವೊ ನೇತೃತ್ವದಲ್ಲಿ ಪವಿತ್ರ ಬಲಿಪೂಜೆ ಹಾಗೂ ನೂತನ ಧಮಾರ್ಧ್ಯಕ್ಷರಿಗೆ ಅಭಿಷೆೇಕ ನಡೆಯಲಿದೆ. ಬೆಂಗಳೂರು ಮಹಾಧಮಾರ್ಧ್ಯಕ್ಷ ಡಾ. ಪೀಟರ್​ ಮಚಾದೊ ಹಾಗೂ ಉಡುಪಿ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಡಾ. ಜೆರಾಲ್ಡ್​ ಐಸಾಕ್​ ಲೋಬೊ ಸಹ-ಅಭಿಷೇಕಕಾರರಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾರತ ಮತ್ತು ನೇಪಾಳದ ಪೋಪ್​ ವ್ಯಾಟಿಕನ್​ ರಾಯಭಾರಿ ಡಾ. ಲಿಯೋಪೋಲ್ಡೊ ಗಿರೆಲ್ಲಿ ಸೇರಿದಂತೆ ಸುಮಾರು 6000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ಪೌರ ಸನ್ಮಾನ
ಮಧ್ಯಾಹ್ನ 11.45ಕ್ಕೆ ನೂತನ ಧಮಾರ್ಧ್ಯಕ್ಷರಿಗೆ ಪೌರ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಹಾಗೂ ಶಾಸಕ ಯಶಪಾಲ್​ ಸುವರ್ಣ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸಲಿದ್ದಾರೆ. ಪ್ರಸ್ತುತ ಬಿಷಪ್​ ಡಾ. ಜೆರಾಲ್ಡ್​ ಐಸಾಕ್​ ಲೋಬೊ 2012ರಿಂದ 2026ರವರೆಗೆ 13 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ.ಜೆರಾಲ್ಡ್​ ಐಸಾಕ್​ ಲೋಬೊ, ಕಲ್ಯಾಣಪುರ ಮಿಲಾಗ್ರಿಸ್​ ಕ್ಯಾಥೆಡ್ರಲ್​ ಧರ್ಮಗುರು ಫರ್ಡಿನಾಂಡ್​ ಗೊನ್ಸಾಲ್ವಿಸ್​, ಧರ್ಮಪ್ರಾಂತ್ಯದ ಕುಲಪತಿ ಸ್ಟೀವನ್​ ಡಿಸೋಜಾ, ಮಾಧ್ಯಮ ಸಂಯೋಜಕ ಮೈಕಲ್​ ರೊಡ್ರಿಗಸ್​ ಉಪಸ್ಥಿತರಿದ್ದರು.

ಧರ್ಮಪ್ರಾಂತ್ಯದಲ್ಲಿ 51 ಚರ್ಚುಗಳುಉಡುಪಿ ಧರ್ಮಕ್ಷೇತ್ರವು ಕಾರ್ಕಳ, ಕುಂದಾಪುರ, ಕಾಪು, ಬೈಂದೂರು, ಹೆಬ್ರಿ, ಬ್ರಹ್ಮಾವರ ಹಾಗೂ ಉಡುಪಿ ತಾಲೂಕುಗಳನ್ನು ಒಳಗೊಂಡಿದೆ. ಬೆಂಗಳೂರು ಮಹಾಧರ್ಮಪ್ರಾಂತ್ಯದ ಅಧೀನದಲ್ಲಿದ್ದು, ಕಲ್ಯಾಣಪುರದ ಮಿಲಾಗ್ರಿಸ್​ ಕ್ಯಾಥೆಡ್ರಲ್​ ಪ್ರಧಾನ ದೇವಾಲಯ. ಧರ್ಮಕ್ಷೇತ್ರದಲ್ಲಿ 60,338 ಕ್ಯಾಥೋಲಿಕ್​ ಕುಟುಂಬಗಳು ವಾಸಿಸುತ್ತಿದ್ದು, 51 ಚರ್ಚುಗಳು, ಒಂದು ಬಸಿಲಿಕಾ, ಮೂರು ತೀರ್ಥಕ್ಷೇತ್ರಗಳು ಹಾಗೂ ಏಳು ಉಪಕೇಂದ್ರಗಳನ್ನು ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net