ಉಡುಪಿಯ ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ನಡೆಯಿತು. ರೊ. ಎ.ಗಣೇಶ್, ರೊ. ರಾಜೇಶ್ ಡಿ. ಶೆಣೈ, ರೊ. ಸಂದೀಪ್ ಕುಮಾರ್, ರೂಪಾ ಡಿ. ಕಿಣಿ, ಸುಮನಾ ಬಿ.ಆರ್., ರೊ. ವೆಂಕಟೇಶ್ ಭಟ್ ಕೆ.ಎಂ. ಇದ್ದರು.
Published on:
Copied
Follow Us
* ರೋಟರಿ ಜಿಲ್ಲಾ ಸಭಾಪತಿ ರೊ. ಎ.ಗಣೇಶ್ ಅನಿಸಿಕೆ
* ಅಲೆವೂರು ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ನ ಪದಗ್ರಹಣ
ಉಡುಪಿ: ಶಾಲೆಯಲ್ಲಿನ ಓದು ಕೇವಲ ಅಂಕೆ ಗಳಿಕೆಗೆ ಸೀಮಿತವಾಗಿರಬಾರದು. ರ್ನಿದಿಷ್ಟ ಗುರಿ, ದೃಢನಿಶ್ಚಯ, ಸಮರ್ಪಣೆ, ಶಿಸ್ತು ಮತ್ತು ನಿರ್ದೇಶನ ಎಂಬ ಐದು ಅಂಶಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182ರ ಶಿಕ್ಷಕರ ಬೆಂಬಲ ಸಮಿತಿ ಜಿಲ್ಲಾ ಸಭಾಪತಿ ರೊ. ಎ.ಗಣೇಶ್ ಅನಿಸಿಕೆ ವ್ಯಕ್ತಪಡಿಸಿದರು.
ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶನಿವಾರ (ಜು.11) ಆಯೋಜಿಸಿದ್ದ ರೋಟರಿ ಐಸಿರಿ ಪರ್ಕಳ ಪ್ರಾಯೋಜಿತ ಇಂಟರಾಕ್ಟ್ ಕ್ಲಬ್ನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ರೊ. ರಾಜೇಶ್ ಡಿ. ಶೆಣೈ ಇಂಟರಾಕ್ಟ್ ಕ್ಲಬ್ನ ಉದ್ದೇಶ ಹಾಗೂ ವಿದ್ಯಾರ್ಥಿಗಳಿಗೆ ದೊರೆಯುವ ನಾಯಕತ್ವ ಮತ್ತು ಸೇವಾ ಅವಕಾಶಗಳ ಕುರಿತು ಮಾಹಿತಿ ನೀಡಿದರು. ರೋಟರಿ ಐಸಿರಿ ಅಧ್ಯಕ್ಷ ರೊ. ಸಂದೀಪ್ ಕುಮಾರ್ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಶಾಲೆಯ ಉಪಪ್ರಾಂಶುಪಾಲೆ ಹಾಗೂ ಇಂಟರಾಕ್ಟ್ ಸಂಯೋಜಕಿ ಸುಮನಾ ಬಿ.ಆರ್., ನಿರ್ಗಮನ ಅಧ್ಯಕ್ಷೆ ಮಾನ್ಯಾ ಎಸ್. ನಾಯಕ್ ಹಾಗೂ ಕಾರ್ಯದರ್ಶಿ ಹರ್ಷಾ ಮೂಲ್ಕಿ ಉಪಸ್ಥಿತರಿದ್ದರು.
ಶಾಖೆಯ ಪ್ರಾಂಶುಪಾಲೆ ರೂಪಾ ಡಿ. ಕಿಣಿ ಸ್ವಾಗತಿಸಿದರು. ರೋಟರಿ ಐಸಿರಿ ಇಂಟರಾಕ್ಟ್ ಸಭಾಪತಿ ರೊ. ವೆಂಕಟೇಶ್ ಭಟ್ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು.