

ಭಾರತದ ಕ್ರೀಡಾ ಕ್ಷೇತ್ರದಲ್ಲಿ ಉದ್ಯೋಗಾರ್ಹ ವೃತ್ತಿಪರರ ತೀವ್ರ ಕೊರತೆಯಿದೆ. ಅದನ್ನು ನೀಗಿಸಲು ಮಾಹೆ ಮತ್ತು ಟೆನ್ವಿಕ್ ಜಂಟಿಯಾಗಿ ಈ ವಿಶೇಷ ಶೈಕ್ಷಣಿಕ ಪಥ ರೂಪಿಸಿದೆ. 2010ರಲ್ಲಿ ನಾವು ಕಂಡಿದ್ದ ಕನಸಿನಂತೆ ಕ್ರೀಡಾ ಶಿಕ್ಷಣದ ಮೂಲಕ ಕ್ರಾಂತಿಕಾರಿ ಬದಲಾವಣೆ ಮೂಲಕ ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿಯನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.