ಶ್ರದ್ಧೆ, ನಿಯತ್ತಿನ ಕೆಲಸದಿಂದ ದೇವರ ಅನುಗ್ರಹ

ಬ್ಲೂಬೆರಿ ಹಿಲ್ಸ್‌ನ ಏ ಝೋನ್ ವಿಭಾಗ ವಸತಿ ಸಮುಚ್ಚಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್ ಧರ್ಮಗುರು ಜೋನ್ ಫರ್ನಾಂಡಿಸ್ ಮಾತನಾಡಿದರು. ಪ್ರಮುಖರಾದ ನಿಯೋನ್ ಆ್ಯಂಟನಿ ಡಿಸೋಜ, ಇವೇಟ್ ಡಿಸೋಜ, ಮೈಕಲ್ ಡಿಸೋಜ, ಗ್ರೇಸಿ ಡಿಸೋಜ, ನಿಶಾನ್ ಡಿಸೋಜ ಉಪಸ್ಥಿತರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನಗರ ಹೃದಯಭಾಗದಲ್ಲಿ 48 ವಸತಿ ಸಮುಚ್ಚಯ
  • ಎನ್.ಎನ್.ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯವರಿಂದ ನಿರ್ಮಾಣ
ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ಯಾವುದೇ ಕೆಲಸವನ್ನು ಶ್ರದ್ಧೆ ಮತ್ತು ನಿಯತ್ತಿನಿಂದ ಮಾಡಿದಾಗ ದೇವರು ಅನುಗ್ರಹ ಮಾಡುತ್ತಾರೆ ಎನ್ನುವುದಕ್ಕೆ ಈ ಸಂಸ್ಥೆ ಸಾಕ್ಷಿ. ಈ ವಸತಿ ಸಮುಚ್ಚಯದಲ್ಲಿ ವಾಸ ಮಾಡುವ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ಲಭಿಸಲಿ ಎಂದು ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್ ಧರ್ಮಗುರು ಜೋನ್ ಫರ್ನಾಂಡಿಸ್ ಹೇಳಿದರು.
ಬ್ರಹ್ಮಾವರದಲ್ಲಿ ಹಲವು ವರ್ಷಗಳಿಂದ ವಸತಿ ಸಮುಚ್ಚಯ ನಿರ್ಮಾಣದಲ್ಲಿ ಖ್ಯಾತಿ ಹೊಂದಿದ ಎನ್.ಎನ್.ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯವರಿಂದ ನಗರ ಹೃದಯಭಾಗದಲ್ಲಿ 48 ವಸತಿ ಸಮುಚ್ಚಯಗಳನ್ನು ಹೊಂದಿದ ಬ್ಲೂಬೆರಿ ಹಿಲ್ಸ್‌ನ ಏ ಝೋನ್ ವಿಭಾಗವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಬ್ಲೂಬೆರಿ ಹಿಲ್ಸ್‌ನ ಮಾಲೀಕ ನಿಯೋನ್ ಆ್ಯಂಟನಿ ಡಿಸೋಜ, ಪ್ರಮುಖರಾದ ಇವೇಟ್ ಡಿಸೋಜ, ಮೈಕಲ್ ಡಿಸೋಜ, ಗ್ರೇಸಿ ಡಿಸೋಜ, ನಿಶಾನ್ ಡಿಸೋಜ ಉಪಸ್ಥಿತರಿದ್ದರು. ಮಿಲ್‌ರ‌್ರೆಡ್ ಸ್ವಾಗತಿಸಿದರು. ಶರಣ್ ಪ್ರಾಸ್ತಾವಿಕ ಮಾತನಾಡಿದರು. ಪೀಟರ್ ಡಿಸೋಜ ವಂದಿಸಿದರು. ಸ್ಟೀವನ್ ಕುಲಾಸೋ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net