ಇಂದ್ರಾಳಿ ರೈಲ್ವೇ ನಿಲ್ದಾಣ ಅಮೃತ್​ ಯೋಜನೆಯಲ್ಲಿ ಅಭಿವೃದ್ಧಿ: ಸಂಸದ ಕೋಟ

ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಕೊಂಕಣ ರೈಲ್ವೇ ಕಾಪೋರ್ರೇಶನ್​ ವತಿಯಿಂದ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಕೈಗೊಂಡ ವಿವಿಧ ಕಾಮಗಾರಿಗಳನ್ನು  ಸಂಸದ ಕೋಟ ಶ್ರಿನಿವಾಸ ಪೂಜಾರಿಉದ್ಘಾಟಿಸಿದರು.
ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಕೊಂಕಣ ರೈಲ್ವೇ ಕಾಪೋರ್ರೇಶನ್​ ವತಿಯಿಂದ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಕೈಗೊಂಡ ವಿವಿಧ ಕಾಮಗಾರಿಗಳನ್ನು ಸಂಸದ ಕೋಟ ಶ್ರಿನಿವಾಸ ಪೂಜಾರಿಉದ್ಘಾಟಿಸಿದರು.
Published on

ಉಡುಪಿ: ಪ್ರಯಾಣಿಕರ ಸೌಲಭ್ಯಕ್ಕಾಗಿ 2.38 ಕೋಟಿ ರೂ. ವೆಚ್ಚದಲ್ಲಿ ನವೀಕೃತ ಪ್ಲಾಟ್ ಫಾರಂ ಹಾಗೂ ಓವರ್​ ಬ್ರಿಡ್ಜ್​ ಕಾಮಗಾರಿಗಳನ್ನು ನಡೆಸಲಾಗಿದ್ದು, 110 ಕೋಟಿ ರೂ. ವೆಚ್ಚದ ಪ್ರಥಮ ಹಂತದ ಅಮೃತ್​ ಯೋಜನೆ ಮಂಜೂರಾತಿ ಹಂತದಲ್ಲಿದೆ ಎಂದು ಸಂಸದ ಕೋಟ ಶ್ರಿನಿವಾಸ ಪೂಜಾರಿ ಹೇಳಿದರು.

ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಕೊಂಕಣ ರೈಲ್ವೇ ಕಾಪೋರ್ರೇಶನ್​ ವತಿಯಿಂದ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಕೈಗೊಂಡ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿ ರೈಲ್ವೇ ನಿಲ್ದಾಣಕ್ಕೆ ಶ್ರೀಕೃಷ್ಣ ರೈಲು ನಿಲ್ದಾಣ ಎಂಬುದಾಗಿ ಹೆಸರಿಡುವಂತೆ ನಗರಸಭೆ ವತಿಯಿಂದ ರೈಲ್ವೇ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಾರ್ಕೂರು ಮತ್ತು ಮೂಲ್ಕಿ ರೈಲು ನಿಲ್ದಾಣದಲ್ಲಿ 4.28 ಕೋಟಿ ರೂ, ವೆಚ್ಚದಲ್ಲಿ ಪ್ಲಾಟ್ ಫಾರಂ ಅಭಿವೃದ್ಧಿಗೊಳಿಸಲಾಗುತ್ತಿದೆ. ಮಂಗಳೂರು&ಕಾರವಾರ ಹಳಿಯನ್ನು ದ್ವಿಪಥಗೊಳಿಸಬೇಕು ಹಾಗೂ ಬೆಂಗಳೂರು&ಕಾರವಾರ ವಂದೇ ಭಾರತ್​ ರೈಲು ಪ್ರಾರಂಭಿಸಬೇಕು ಎಂಬ ಬೇಡಿಕೆಯನ್ನು ರೈಲ್ವೇ ಇಲಾಖೆಗೆ ಸಲ್ಲಿಸಲಾಗಿದೆ. ಇದರಿಂದ 3 ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕೊಂಕಣ ರೈಲ್ವೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್​ ಕುಮಾರ್​ ಝಾ ಮಾತನಾಡಿ, ಮೂರು ಲಿಫ್ಟ್​ಗಳ ಸ್ಥಾಪನೆ, ಕಾರ್ಯನಿರ್ವಾಹಕ ಕೋಣೆಯ ವಿಸ್ತರಣೆ ಮತ್ತು ಶೌಚಾಲಯ ಬ್ಲಾಕ್​ ನಿಮಾರ್ಣ ಸೇರಿದಂತೆ 1.5 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಗೋವಾ ಮತ್ತು ಕರ್ನಾಟಕದಲ್ಲಿ 105 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕರಾದ ಯಶ್ಪಾಲ್​ ಎ. ಸುವರ್ಣ ಮತ್ತು ಗುರ್ಮೆ ಸುರೇಶ್​ ಶೆಟ್ಟಿ, ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ , ಆರ್​ಟಿಎಂ ದಿಲೀಪ್​ ಡಿ. ಭಟ್​, ಇನಾಯತ್​ ಹುಸೇನ್​, ಮುಖ್ಯ ಇಂಜಿನಿಯರ್​ ವಿಜಯ ಕುಮಾರ್​, ಪಿಆರ್​ಒ ಸುಧಾ ಕೃಷ್ಣಮೂರ್ತಿ, ಎಸಿಎಂ ಜಿ.ಡಿ. ಮೀನಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net