ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ

concrete road project
ಶಾಸಕ ಯಶ್​ಪಾಲ್​ ಸುವರ್ಣ ಕಾಂಕ್ರೀಟ್​ ರಸ್ತೆ ಕಾಮಗಾರಿ ಉದ್ಘಾಟಿಸಿದರು.
Published on: 

ಉಡುಪಿ: ಸುವ್ಯವಸ್ಥಿತ ರಸ್ತೆ ಸಂಪರ್ಕ ಜನ ಜೀವನಕ್ಕೆ ಅನುಕೂಲ. ಜೊತೆಗೆ ಗ್ರಾಮದ ಅಭಿವೃದ್ಧಿಗೆ ವೇಗ ನೀಡಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದಾಗಿ ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಚಾಂತಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಪ್ರಧಾನ ನಗರದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿಮಾರ್ಣಗೊಂಡ ಕಾಂಕ್ರೀಟ್​ ರಸ್ತೆ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಮುಖಂಡ ಬೈಕಾಡಿ ಸುಪ್ರಸಾದ್​ ಶೆಟ್ಟಿ ಮಾತನಾಡಿ, ಹೇರೂರು ಪ್ರಧಾನ ನಗರ ಜನತೆಯ ಬಹು ವರ್ಷಗಳ ಬೇಡಿಕೆಗೆ ಶಾಸಕರು ಸ್ಪಂದಿಸಿ 50 ಲಕ್ಷ ವೆಚ್ಚದಲ್ಲಿ ರಸ್ತೆ ನಿಮಾರ್ಣ ಮಾಡಿರುವುದು ಅಭಿನಂದನಾರ್ಹ ಎಂದರು.

ಈ ಸಂದರ್ಭದಲ್ಲಿ ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್​ ಕುಲಾಲ್​, ಪ್ರಧಾನ ಕಾರ್ಯದರ್ಶಿ ಮನೋಜ್​ ಶೆಟ್ಟಿ , ಪಕ್ಷದ ಪ್ರಮುಖರಾದ ವೀಣಾ ನಾಯ್ಕ್​, ಮೀರಾ ಸದಾನಂದ, ಹೇಮಾ ಅಶೋಕ್​, ಶೈಲಜಾ, ರವಿ ಬೈಕಾಡಿ, ದಿನೇಶ್​ ಶೆಟ್ಟಿ ಕೆಂಜೂರು, ಸಂತೋಷ್​ ಜತ್ತನ್​, ಗಿರೀಶ್​ ಅಡಿಗ, ನಿತ್ಯಾನಂದ ನಾಯ್ಕ್​, ದಿನೇಶ್​ ಶೆಟ್ಟಿ ಹೇರೂರು, ಸುಶಾಂತ್​ ಎಸ್​. ಪೂಜಾರಿ ಉಪಸ್ಥಿತರಿದ್ದರು.