ಸಂಸ್ಕೃತಿಯ ಪ್ರತೀಕ ಕೆಸರ್ಡ್​ ಒಂಜಿ ದಿನ

ಉಡುಪಿಯಲ್ಲಿ ಆಯೋಜಿಸಿದ್ದ 'ಕೆಸರ್ಡ್​ ಒಂಜಿ ದಿನ' ಗ್ರಾಮೀಣ ಕ್ರೀಡಾಕೂಟವನ್ನು ರಾಜೇಂದ್ರ ಪಂದುಬೆಟ್ಟು ಉದ್ಘಾಟಿಸಿದರು. ಶಿವಕುಮಾರ್​ ಅಂಬಲಪಾಡಿ, ದಾಮೋದರ್​ ಕುಂದರ್​, ಶಿವಾಜಿ ಸನಿಲ್​, ಸುಧಾಕರ್​ ಮೆಂಡನ್​, ವಿಶ್ವನಾಥ್​ ಹೆಗ್ಡೆ, ಹರಿಪ್ರಸಾದ್​ ರೈ ಇತರರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ 'ಕೆಸರ್ಡ್​ ಒಂಜಿ ದಿನ' ಗ್ರಾಮೀಣ ಕ್ರೀಡಾಕೂಟವನ್ನು ರಾಜೇಂದ್ರ ಪಂದುಬೆಟ್ಟು ಉದ್ಘಾಟಿಸಿದರು. ಶಿವಕುಮಾರ್​ ಅಂಬಲಪಾಡಿ, ದಾಮೋದರ್​ ಕುಂದರ್​, ಶಿವಾಜಿ ಸನಿಲ್​, ಸುಧಾಕರ್​ ಮೆಂಡನ್​, ವಿಶ್ವನಾಥ್​ ಹೆಗ್ಡೆ, ಹರಿಪ್ರಸಾದ್​ ರೈ ಇತರರಿದ್ದರು.
Published on

* ರಾಜೇಂದ್ರ ಪಂದುಬೆಟ್ಟು ಅನಿಸಿಕೆ

* ಗ್ರಾಮೀಣ ಕ್ರೀಡಾಕೂಟ ಉದ್ಘಾಟನೆ

ಉಡುಪಿ: ಹಳ್ಳಿಗಳಲ್ಲಿರುವ ಕಲೆ, ಕ್ರೀಡೆಗಳು ನಮ್ಮೆಲ್ಲರ ಪರಂಪರೆಯಾಗಿದ್ದು, ಆಧುನಿಕ ಭರಾಟೆಯಲ್ಲಿ ಕೊಚ್ಚಿ ಹೋಗುತ್ತಿವೆ. ಅಂತಹ ಪರಂಪರೆಯನ್ನು ಹೊಸ ಪೀಳಿಗೆಗೆ ಪರಿಚಯಿಸಿ, ಗ್ರಾಮೀಣ ಭಾಗದ ಕ್ರೀಡೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಸರ್ಡ್​ ಒಂಜಿ ದಿನ ಕಾರ್ಯಕ್ರಮ ಮಹತ್ವಪೂರ್ಣ ಹಾಗೂ ಅರ್ಥಪೂರ್ಣವಾಗಿದೆ ಎಂದು ಉಡುಪಿ ತಾಪಂ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಬಂಕೇರ್ಕಟ್ಟ ಕೆಸರು ಗದ್ದೆಯಲ್ಲಿ ಎನ್​.ಸಿ. ಯೂತ್​ ಸ್ಪೋರ್ಟ್ಸ್​ ಆ್ಯಂಡ್​ ಕಲ್ಚರಲ್​ ಕ್ಲಬ್​ (ರಿ.), ಬಂಕೇರ್ಕಟ್ಟ ಅಂಬಲಪಾಡಿ ವತಿಯಿಂದ  ಶ್ರೀ ನಾಗರಾಜ ಸೇವಾ ಸಮಿತಿ ಮತ್ತು ಶ್ರೀ ನಾಗರಾಜ ಮಹಿಳಾ ಸೇವಾ ಸಮಿತಿ ಬಂಕೇರ್ಕಟ್ಟ ಸಹಕಾರದಲ್ಲಿ ಆಯೋಜಿಸಿದ್ದ 'ಕೆಸರ್ಡ್​ ಒಂಜಿ ದಿನ' ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ಲಬ್​ನ ಅಧ್ಯಕ್ಷ ಕಾರ್ತಿಕ್​ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಯೋಮಾನದ ವಿಭಾಗಗಳಲ್ಲಿ ವಿದ್ಯಾರ್ಥಿಗಳು, ಯುವಕ, ಯುವತಿಯರು ಹಾಗೂ ಹಿರಿಯರು ಭಾಗವಹಿಸಿ ಸಂಭ್ರಮಿಸಿದರು. ಮಧ್ಯಾಹ್ನ ಸಾಮೂಹಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಲ್ಪೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಗೋಪಾಲ್​ ಸಿ. ಬಂಗೇರ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಎನ್​.ಸಿ. ಯೂತ್​ ಸ್ಪೋರ್ಟ್ಸ್​ ಆ್ಯಂಡ್​ ಕಲ್ಚರಲ್​ ಕ್ಲಬ್​ (ರಿ.)ನ ಸ್ಥಾಪಕಾಧ್ಯಕ್ಷ ದಾಮೋದರ್​ ಕುಂದರ್​, ಶ್ರೀ ನಾಗರಾಜ ಸೇವಾ ಸಮಿತಿಯ ಅಧ್ಯಕ್ಷ ಶಿವಾಜಿ ಸನಿಲ್​, ಗೌರವಾಧ್ಯಕ್ಷರಾದ ಸುಧಾಕರ್​ ಮೆಂಡನ್​, ವಿಶ್ವನಾಥ್​ ಹೆಗ್ಡೆ, ಜಿಲ್ಲಾ ಅಥ್ಲೆಟಿಕ್​ ಅಸೋಸಿಯೇಷನ್​ನ ಅಧ್ಯಕ್ಷ ಹರಿಪ್ರಸಾದ್​ ರೈ ಇತರರು ಉಪಸ್ಥಿತರಿದ್ದರು.
ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶಿವದಾಸ್​ ಪಿ., ಅಂಬಲಪಾಡಿ ಪಡುಪಾಲು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ದೇವದಾಸ್​, ಯತೀಶ್​ ಕಿದಿಯೂರು, ಕ್ಲಬ್​ನ ಗೌರವ ಸಲಹೆಗಾರರಾದ ರಾಜೇಶ್​ ಸುವರ್ಣ, ಕಿರಣ್​ ಕುಮಾರ್​, ಸದಾನಂದ ಕಾಂಚನ್​, ಉಪಾಧ್ಯಕ್ಷ ಗಣೇಶ್​ ಬಂಗೇರ, ಪ್ರಧಾನ ಕಾರ್ಯದರ್ಶಿ ರೂಪೇಶ್​ ಪೂಜಾರಿ, ಸಂಘಟನಾ ಕಾರ್ಯದರ್ಶಿ ನವೀನ್​ ಸುವರ್ಣ, ಕೋಶಾಧಿಕಾರಿ ಪ್ರಸನ್ನ ಶ್ರೀಯಾನ್, ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಎಸ್. ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಯತೀಶ್ ಸುವರ್ಣ, ಲಯನ್ಸ್ ಕ್ಲಬ್ ಪ್ರಾಂತ್ಯ ಅಧ್ಯಕ್ಷ ಲೂಯಿಸ್ ಲೋಬೊ  ಇತರರು ಪಾಲ್ಗೊಂಡಿದ್ದರು.
ವೃತ್ತಿಪರ ಕೃಷಿಕ ಪಠೇಲರ ಮನೆ ಶರತ್ ಶೆಟ್ಟಿ, ಶ್ರೀ ವಿಠೋಬ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ರಾಜೇಶ್, ಶ್ರೀ ಉಮಾಮಹೇಶ್ವರ ಭಜನಾ ಮಂದಿರದ ಅಧ್ಯಕ್ಷ ಸುಧಾಕರ್, ಶ್ರೀ ನಾಗರಾಜ ಮಹಿಳಾ ಸೇವಾ ಸಮಿತಿಯ ಉಪಾಧ್ಯಕ್ಷೆ ಲಲಿತಾ ನಾರಾಯಣ, ಗ್ರಾಪಂ ಮಾಜಿ ಅಧ್ಯಕ್ಷೆ ಭಾರತಿ ಭಾಸ್ಕರ್, ಪದಾಧಿಕಾರಿಗಳಾದ ಹಾಲೇಶ್, ಮಂಜುನಾಥ್, ಸಂತೋಷ್ ಪೂಜಾರಿ, ಸಮರ್ಥ್ ಪೂಜಾರಿ, ಯಶಸ್, ಯಶ್, ನಿಹಾಲ್, ಜನ್ವಿತ್, ದಿಶಾನ್, ಆಯುಷ್, ಪ್ರದೀಪ್ ಸಹಿತ ಸಮಿತಿ ಸದಸ್ಯರು, ಶ್ರೀ ನಾಗರಾಜ ಸೇವಾ ಸಮಿತಿಯ ಪದಾಧಿಕಾರಿಗಳು, ಕ್ರೀಡಾ ಪಟುಗಳು ಮತ್ತು ಗ್ರಾಮಸ್ಥರು ಇದ್ದರು.
ಕಲಾವಿದೆ ಶ್ರೀಯಾ ಎಸ್​. ಪೂಜಾರಿ ಪ್ರಾರ್ಥಿಸಿದರು. ಎನ್​.ಸಿ. ಯೂತ್​ ಸ್ಪೋರ್ಟ್ಸ್​ ಆ್ಯಂಡ್​ ಕಲ್ಚರಲ್​ ಕ್ಲಬ್​(ರಿ.) ಗೌರವಾಧ್ಯಕ್ಷ ಶಿವಕುಮಾರ್​ ಅಂಬಲಪಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೂಪೇಶ್​ ಪೂಜಾರಿ ವಂದಿಸಿದರು. ಅಶ್ವತ್ಥ ಪೂಜಾರಿ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net