ಸ್ಥಳೀಯ ಸಮಾಜ ಸೇವಕರು ಮತ್ತು ಪರಿಸರ ಪ್ರೇಮಿ ನವೀನ್ ಕುಮಾರ್ ಚಿತ್ರಬೈಲ್, ಸುಕೇಶ್, ಹರೀಶ ರಾಂ ಮತ್ತು ವಿಶ್ವನಾಥ್ ಎಂಬವರು ಇದನ್ನು ಗಮನಿಸಿದರು. ಕೂಡಲೇ ಕಾರ್ಯ ಪ್ರವೃತ್ತರಾದ ಅವರು ಕೋತಿಯನ್ನು ಹಗ್ಗ ಕಟ್ಟಿ ಹಿಡಿದರು. ಚಿತ್ರಬೈಲು ಬ್ರಹ್ಮಲಿಂಗೇಶ್ವರ ದೇವಸ್ಥಾನದತ್ತ ಕೊಂಡೊಯ್ದರು. ಕೋತಿಯ ತಲೆಯನ್ನು ನೀರಿನಲ್ಲಿ ಒದ್ದೆ ಮಾಡಿ ಬಳಿಕ ಅತ್ಯಂತ ನಾಜೂಕಾಗಿ ಕೋತಿಗೆ ನೋವಾಗದ ರೀತಿಯಲ್ಲಿ ಚೊಂಬನ್ನು ತಲೆಯಿಂದ ಬೇರ್ಪಡಿಸಿದರು. ಚೊಂಬು ತೆಗೆದ ತಕ್ಷಣವೇ ಕೋತಿ ಅಲ್ಲಿಂದ ಓಡಿ ಪರಾರಿಯಾಗಿದೆ. ಸ್ಥಳೀಯ ಯುವಕರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.