ಕೇಂದ್ರದ ಸವಲತ್ತುಗಳಿಂದ ಜನಜೀವನ ಸುಧಾರಣೆ

 ಮಹಿಳಾ ಸಂಗಮ ಕಾರ್ಯಕ್ರಮ ಪ್ರಯುಕ್ತ ಕುಂಬಳೆ ಪಂಚಾಯಿತಿ ಸಮಿತಿ ವತಿಯಿಂದ ಮೆರವಣಿಗೆ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ, ಕೆ.ಎಸ್.ರಮಣಿ ಸಹಿತ ಪ್ರಮುಖರಿದ್ದರು.
ಮಹಿಳಾ ಸಂಗಮ ಕಾರ್ಯಕ್ರಮ ಪ್ರಯುಕ್ತ ಕುಂಬಳೆ ಪಂಚಾಯಿತಿ ಸಮಿತಿ ವತಿಯಿಂದ ಮೆರವಣಿಗೆ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ, ಕೆ.ಎಸ್.ರಮಣಿ ಸಹಿತ ಪ್ರಮುಖರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿ ಕುಟುಂಬಕ್ಕೆ ಮೂಲಸೌಕರ್ಯ ಮತ್ತು ಆರ್ಥಿಕ ಸೌಲಭ್ಯ ಒದಗಿಸುವ ಮೂಲಕ ಭಾರತದ ಕೋಟ್ಯಂತರ ಜನರ ಜೀವನಮಟ್ಟ ಸುಧಾರಣೆಗೆ ಕಾರಣಕರ್ತರಾಗಿದ್ದಾರೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಹೇಳಿದರು.
ಮಹಿಳಾ ಮೋರ್ಚಾ ಕುಂಬಳೆ ಪಂಚಾಯಿತಿ ಸಮಿತಿ ಆಯೋಜಿಸಿದ್ದ ಮಹಿಳಾ ಸಂಗಮ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮಾತನಾಡಿ, ಕೇಂದ್ರ ಸರ್ಕಾರ ಕೇರಳಕ್ಕೆ ಸಹಾಯ ಮಾಡಲು ಸಿದ್ಧವಿದ್ದರೂ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಅದನ್ನು ಬಳಸಿಕೊಳ್ಳುವಲ್ಲಿ ಮತ್ತು ಕೇಂದ್ರದ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ. ಜತೆಗೆ ಭಾಷಾ ಅಲ್ಪಸಂಖ್ಯಾತರನ್ನೂ ರಾಜ್ಯ ಸರ್ಕಾರ ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು
.
ಮಹಿಳಾ ಮೋರ್ಚಾ ಕುಂಬಳೆ ಪಂಚಾಯಿತಿ ಸಮಿತಿ ಅಧ್ಯಕ್ಷೆ ಶಾರದಾ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವಿ.ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾಧ್ಯಕ್ಷೆ ಕೆ.ಎಸ್.ರಮಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅನಿತಾ ನಾಯ್ಕ, ಪ್ರೇಮಲತಾ ಎಸ್., ಬಿಜೆಪಿ ಕುಂಬಳೆ ಮಂಡಲಾಧ್ಯಕ್ಷ ಸುನೀಲ್ ಅನಂತಪುರ, ಸುಜಿತ್ ರೈ, ಶಿವಪ್ರಸಾದ್ ರೈ, ಪ್ರೇಮಾವತಿ ಶೆಟ್ಟಿ, ವಿದ್ಯಾ ಎನ್.ಪೈ, ಪ್ರೇಮಾ ವಿ.ಶೆಟ್ಟಿ, ಅಮಿತಾ ಆಳ್ವ ಉಪಸ್ಥಿತರಿದ್ದರು.
ಮಹಿಳಾ ಸಂಗಮ ಆರಂಭಕ್ಕೂ ಮೊದಲು ಬಿಜೆಪಿ ಕುಂಬಳೆ ಮಂಡಲ ಸಮಿತಿ ಕಚೇರಿ ಆವರಣದಿಂದ ಕುಂಬಳೆ ಸಹಕಾರಿ ಬ್ಯಾಂಕ್ ಆವರಣ ತನಕ ನೂರಾರು ಮಹಿಳೆಯರಿಂದ ಮೆರವಣಿಗೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net