ಬಸ್ ನಿಲ್ದಾಣದಲ್ಲಿ ಅವಿತು ಕುಳಿತಿದ್ದ ಮತ್ತೊಬ್ಬ ಆರೋಪಿಯನ್ನು ಹಿಡಿದು ವಿಚಾರಿಸಿದಾಗ ಆತ ತಾಲೂಕಿನ ತೋಟತ್ತಾಡಿ ಗ್ರಾಮದ ಬೋವುಕಾಡು ನಿವಾಸಿ ಸ್ನೇಕ್ ಅನಿಲ್ ಪಿ.(43) ಎಂದು ತಿಳಿದುಬಂದಿದೆ. ಹೋರಿಯನ್ನು ತೋಟತ್ತಾಡಿ ನಿವಾಸಿ ಥೋಮಸ್ ಮತ್ತು ಕಕ್ಕಿಂಜೆ ನಿವಾಸಿ ಕಬೀರ್ ಎಂಬುವರು ವಧೆ ಮಾಡುವ ಉದ್ದೇಶದಿಂದ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ನಿವಾಸಿ ರಾಘವೇಂದ್ರ ಭಟ್ ಎಂಬುವರಿಂದ ಖರೀದಿಸಿ ಸಾಗಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸ್ನೇಕ್ ಅನಿಲ್ ಪಿ., ತೋಮಸ್, ಕಬೀರ್, ರಾಘವೇಂದ್ರ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ.