ಅಕ್ರಮ ಮರಳುಗಾರಿಕೆ, ಆರೋಪಿ ಬಂಧನ

ವಶಪಡಿಸಿಕೊಂಡ ಟಿಪ್ಪರ್‌ಗಳು.
ವಶಪಡಿಸಿಕೊಂಡ ಟಿಪ್ಪರ್‌ಗಳು.
Published on

ಬೆಳ್ತಂಗಡಿ: ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಓರ್ವನನ್ನು ಬಂಧಿಸಿ, ಎರಡು ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್‌ಐ ಆನಂದ ಎಂ. ಮಂಗಳವಾರ ಇಂದಬೆಟ್ಟು ಗ್ರಾಮದ ನೇತ್ರಾವತಿ ನಗರ ಬೊಳ್ಳೂರುಬೈಲು ಪ್ರದೇಶದ ನದಿ ಕಿನಾರೆಗೆ ದಾಳಿ ನಡೆಸಿ ಮಹಮ್ಮದ್ ಸುಹೈಲ್ ಎಂಬಾತನನ್ನು ಬಂಧಿಸಿದರು.

ಈತನನ್ನು ವಿಚಾರಣೆಗೊಳಪಡಿಸಿದಾಗ ಪರಾರಿಯಾದ ಚಾಲಕ ಇಬ್ರಾಹಿಂ ಹಾಗೂ ಮರಳು ತುಂಬುತ್ತಿದ್ದವನು ಪುನೀತ್ ಎಂದು ತಿಳಿಸಿದ್ದಾನೆ. ಒಂದು ಟಿಪ್ಪರ್‌ನಲ್ಲಿ ಪೂರ್ತಿ ಮರಳು ತುಂಬಿದ್ದು, ಅದರ ಮೌಲ್ಯ 10,000 ರೂ. ಹಾಗೂ ಟಿಪ್ಪರ್‌ನ ಮೌಲ್ಯ 3.50 ಲಕ್ಷ ಎಂದು ಅಂದಾಜಿಸಲಾಗಿದೆ. ಮತ್ತೊಂದು ಟಿಪ್ಪರ್‌ನಲ್ಲಿ ಸುಮಾರು 20 ಪ್ಲಾಸ್ಟಿಕ್ ಬುಟ್ಟಿಗಳಷ್ಟು ಮರಳು ಪತ್ತೆಯಾಗಿದೆ.

ಆರೋಪಿಗಳಾದ ಬಂಟ್ವಾಳದ ಮಹಮ್ಮದ್ ಸುಹೈಲ್, ಬಂಟ್ವಾಳದ ಇಬ್ರಾಹಿಂ, ಇಂದಬೆಟ್ಟು ಗ್ರಾಮದ ನೇತ್ರಾವತಿನಗರದ ಪುನೀತ್ ಹಾಗೂ ಇತರರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net