ಉಡುಪಿ ಪೊಲೀಸರು ವಶಪಡಿಸಿಕೊಂಡ ಅಕ್ರಮ ಮದ್ಯ ಹಾಗೂ ಬಂಧಿತ ಕಂಟ್ಯಪ್ಪ ಮೇಥಿ.
Published on:
Copied
Follow Us
* ಬಾಗಲಕೋಟೆ ಮೂಲದ ಕಂಟ್ಯಪ್ಪ ಮೇಥಿ ವಶಕ್ಕೆ
ಉಡುಪಿ: ಉಡುಪಿಯ ಹಳೆಯ ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ ಶನಿವಾರ (ಜು.4) ನಸುಕಿನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಮೂಲದ ಕಂಟ್ಯಪ್ಪ ಮೇಥಿ (32) ಬಂಧಿತ.
ಖಚಿತ ಮಾಹಿತಿಯ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯ ನಿರೀಕ್ಷಕ ಮಹೇಶ್ ಪ್ರಸಾದ್, ಉಪನಿರೀಕ್ಷಕ ಭರತೇಶ್ ನೇತೃತ್ವದಲ್ಲಿ ಮುಖ್ಯ ಆರಕ್ಷಕ ಬಶೀರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.
ಬೈಕ್ನಲ್ಲಿ ಬಂದಿದ್ದ ಕಂಟ್ಯಪ್ಪ, ಸಿಟಿ ಬಸ್ ನಿಲ್ದಾಣದಲ್ಲಿ ಮದ್ಯದ ಪೊಟ್ಟಣ (ಟೆಟ್ರಾ ಪ್ಯಾಕ್) ಮಾರಾಟ ಮಾಡುತ್ತಿದ್ದನು. ಪೊಲೀಸರು ಆತನನ್ನು ವಶಕ್ಕೆ ಪಡೆದು, ಆತನ ಬೈಕ್ ತಪಾಸಣೆ ನಡೆಸಿದಾಗ 4 ಲೀಟರ್ನಷ್ಟು ಮದ್ಯ ಪತ್ತೆಯಾಗಿದೆ.
ಕಾರ್ಯಾಚರಣೆಗೆ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಸಹಕರಿಸಿದರು. ಉಡುಪಿ ನಗರ ಪೊಲೀಸ್ ಠಾಣೆೆಯಲ್ಲಿ ಪ್ರಕರಣ ದಾಖಲಾಗಿದೆ.