ಅಕ್ರಮವಾಗಿ ಮರ ಕಡಿದು ಸಾಗಾಟ

crime
crime
Published on

ಕಾಸರಗೋಡು: ಮಂಗಲ್ಪಾಡಿಯ ಲೋಕೋಪಯೋಗಿ ಇಲಾಖೆ ಸ್ವಾಮ್ಯದ ಜಾಗದಲ್ಲಿ ಬೆಲೆಬಾಳುವ ಮರ ಕಡಿದು ಸಾಗಿಸಿರುವ ಆರೋಪದ ಮೇಲೆ ಉಪ್ಪಳ ಜಯನಗರ ನಿವಾಸಿ ಪುರುಷೋತ್ತಮ ಎಂಬಾತನ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಜು.13ರಂದು ಬೆಳಗ್ಗೆ 10.30ಕ್ಕೆ ಮಂಗಲ್ಪಾಡಿ ಗ್ರಾಮದಲ್ಲಿ ಮರ ಕಡಿದು ಸಾಗಿಸಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಟಿ.ಶೋಭಾ ದೂರು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net