ಅಕ್ರಮ ಬಾಂಗ್ಲಾವಲಸಿಗರಿಗೆ 2 ವರ್ಷ ಜೈಲು

ಮಲ್ಪೆಯಲ್ಲಿ ಬಂಧಿತ 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರು.
ಮಲ್ಪೆಯಲ್ಲಿ ಬಂಧಿತ 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರು.
Published on
ಉಡುಪಿ: ಮಲ್ಪೆಯಲ್ಲಿ ಬಂಧಿತರಾಗಿದ್ದ 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಜಿಲ್ಲಾ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿದೆ.

ಬಾಂಗ್ಲಾ ದೇಶದಿಂದ ಅಕ್ರಮವಾಗಿ ಉಡುಪಿಗೆ ಬಂದಿದ್ದ ಹಕೀಮ್​ ಆಲಿ, ಸುಜೋನ್​ ಎಸ್​.ಕೆ. , ಇಸ್ಮಾಯಿಲ್​ ಎಸ್​.ಕೆ , ಕರೀಮ್​ ಎಸ್​.ಕೆ., ಸಲಾಂ ಎಸ್​.ಕೆ., ರಾಜಿಕುಲ್​ ಎಸ್​.ಕೆ., ಮೊಹಮ್ಮದ್​ ಸೋಜಿಬ್​ , ರಿಮೂಲ್​ , ಮೊಹಮ್ಮದ್​ ಇಮಾಮ್​ ಶೇಖ್​, ಮೊಹಮ್ಮದ್​ ಜಹಾಂಗಿರ್​ ಆಲಂ ಶಿಕ್ಷೆಗೊಳಗಾದವರು.

2024, ಅ. 11ರಂದು ಸಾಯಂಕಾಲ 7 ಗಂಟೆಗೆ ಮಲ್ಪೆ ಠಾಣೆ ಪಿಎಸ್​ಐ ರೌಂಡ್ಸ್​ ಕರ್ತವ್ಯದಲ್ಲಿರುವಾಗ ಮಲ್ಪೆ ವಡಭಾಂಡೇಶ್ವರ ಬಸ್​ ನಿಲ್ದಾಣದ ಬಳಿ 7 ಜನರು ಅನುಮಾನಸ್ಪದವಾಗಿ ಲಗೇಜ್​ ಸಮೇತ ಒಡಾಡುತ್ತಿರುವುದನ್ನು ಕಂಡು ವಿಚಾರಿಸಿದಾಗ ಆರೋಪಿತರು ಯಾವುದೇ ಅನುಮತಿ ದಾಖಲೆಗಳನ್ನು ಪಡೆಯದೇ ಅಕ್ರಮವಾಗಿ ನಕಲಿ ಆಧಾರ್​ ಕಾರ್ಡ್​ ದಾಖಲೆಗಳನ್ನು ಸೃಷ್ಟಿಸಿರುವುದು ಕಂಡುಬಂದಿತ್ತು. ಬಾಂಗ್ಲಾದೇಶದಿಂದ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿತ್ತು. ಇವರು ನೀಡಿದ ಮಾಹಿತಿಯಂತೆ ಉಳಿದ 3 ಮಂದಿ ಅಕ್ರಮ ವಲಸಿಗರನ್ನು ನಂತರ ಬಂಧಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net