ನಾಯ ಸಿಗದಿದ್ದರೆ ಹೋರಾಟ

 ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಶಿರೂರು ಹಕ್ಕುಪತ್ರ ಹೋರಾಟ ಸಮಿತಿ ವತಿಯಿಂದ ಶನಿವಾರ ಶಿರೂರು ಗ್ರಾಪಂ ಎದುರು ಪ್ರತಿಭಟನೆ ನಡೆಯಿತು.
ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಶಿರೂರು ಹಕ್ಕುಪತ್ರ ಹೋರಾಟ ಸಮಿತಿ ವತಿಯಿಂದ ಶನಿವಾರ ಶಿರೂರು ಗ್ರಾಪಂ ಎದುರು ಪ್ರತಿಭಟನೆ ನಡೆಯಿತು.
Published on

ಬೈಂದೂರು: ಕಳೆದ 80 ವರ್ಷಗಳಿಂದ ಶಿರೂರು ಗ್ರಾಮದ ಸರ್ಕಾರಿ ಸ್ಥಳದಲ್ಲಿ ಮೂನ್ನೂರಕ್ಕೂ ಅಧಿಕ ಕುಟುಂಬಗಳು ವಾಸವಾಗಿದ್ದು, ಪ್ರತಿ ವರ್ಷ ತೆರಿಗೆ ಪಾವತಿಸುತ್ತಿದ್ದಾರೆ. ಇಲ್ಲಿಯ ತನಕ ನಮಗೆ ಹಕ್ಕುಪತ್ರ ನೀಡುವಂತೆ ಹಲವು ಬಾರಿ ಮನವಿ ನೀಡಿದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ. ನಮಗೆ ನ್ಯಾಯ ಸಿಗದಿದ್ದಲ್ಲಿ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶಿರೂರು ಗ್ರಾಪಂ

ಜಿ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್ ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರಿಗೆ ಹಕ್ಕುಪತ್ರ ಒದಗಿಸುವಂತೆ ಆಗ್ರಹಿಸಿ ಶಿರೂರು ಹಕ್ಕುಪತ್ರ ಹೋರಾಟ ಸಮಿತಿ ವತಿಯಿಂದ ಶನಿವಾರ ಶಿರೂರು ಗ್ರಾಪಂ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಗ್ರಾಪಂ ಮಾಜಿ ಸದಸ್ಯ ಮುಕ್ರಿ ಅಲ್ತಾಫ್, ಹೋರಾಟ ಸಮಿತಿ ಸದಸ್ಯ ಮನೋಜ್ ಶಿರೂರು ಮಾತನಾಡಿದರು. ತಹಸೀಲ್ದಾರ್ ಪರವಾಗಿ ಉಪತಹಸೀಲ್ದಾರ್ ರಮೇಶ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಹೋರಾಟ ಸಮಿತಿ ಸದಸ್ಯ ಮೋಹನ್ ರೇವಣ್ಕರ್, ಶಿರೂರು ಗ್ರಾಪಂ ವಾಜಿ ಅಧ್ಯಕ್ಷೆ ಜಿ.ಯು.ದಿಲ್‌ಶಾದ್ ಬೇಗಂ, ವಾಜಿ ಸದಸ್ಯರಾದ ಎಚ್.ಎಸ್.ಸಿದ್ದಿಕ್, ಫಾರೂಕ್, ಶಕೀಲ್ ಅಹ್ಮದ್, ನಾರಾಯಣ ಪೂಜಾರಿ, ಮುಸಿನ್ ಬಾವಾಜಿ, ಶೋಯಬ್ ಅರೆಹೊಳೆ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net