ಪ್ರೀತಿ ಇದ್ದರೆ ಪರಸ್ಪರ ಗೌರವ ಇರಲು ಸಾಧ್ಯ

 ಕೋಟೇಶ್ವರದ ಯುವ ಮೆರಿಡಿಯನ್ ಮಿನಾಲ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕ ಆಯೋಜಿಸಿದ್ದ ಸುಖೀ ಕುಟುಂಬ ಎಂಬ ಕಾರ್ಯಕ್ರಮದಲ್ಲಿ ಮೈಸೂರಿನ ಖ್ಯಾತ ಕಲಿಕಾ ಗುರು ಚೇತನ್ ರಾಮ ಮಾತನಾಡಿದರು.
ಕೋಟೇಶ್ವರದ ಯುವ ಮೆರಿಡಿಯನ್ ಮಿನಾಲ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕ ಆಯೋಜಿಸಿದ್ದ ಸುಖೀ ಕುಟುಂಬ ಎಂಬ ಕಾರ್ಯಕ್ರಮದಲ್ಲಿ ಮೈಸೂರಿನ ಖ್ಯಾತ ಕಲಿಕಾ ಗುರು ಚೇತನ್ ರಾಮ ಮಾತನಾಡಿದರು.
Published on
ಕೋಟ: ದಾಂಪತ್ಯ ಬದುಕಿನಲ್ಲಿ ಪರಸ್ಪರ ಪ್ರೀತಿ ಇದ್ದರೆ ಗೌರವಗಳು ತಾನಾಗಿ ಹುಟ್ಟಿಕೊಳ್ಳುತ್ತವೆ ಮತ್ತು ಕುಟುಂಬಗಳು ಪರಸ್ಪರ ಪ್ರೀತಿ ಮತ್ತು ಗೌರವಗಳ ಮೇಲೆ ನಿಂತಿದೆ ಎಂದು ಮೈಸೂರಿನ ಖ್ಯಾತ ಕಲಿಕಾ ಗುರು ಚೇತನ್ ರಾಮ ಅವರು ಹೇಳಿದರು.
ಅವರು ಕೋಟೇಶ್ವರದದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲ್ಲೂಕು ಘಟಕ ಆಯೋಜಿಸಿದ್ದ ಸುಖೀ ಕುಟುಂಬ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಗೀತಾ ಆನಂದ್ ಸಿ.ಕುಂದರ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕುಟುಂಬ ಜೀವನದ ಅತ್ಯಾಕರ್ಷಕ ವಿಷಯಗಳ ಬಗ್ಗೆ ಹಿರಿಯ ವಕೀಲ ಮತ್ತು ವಾಗ್ಮಿ ಎಎಸ್‌ಎನ್ ಹೆಬ್ಬಾರ್ ಮಾತನಾಡಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಘಟಕದ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಸ್ವಾಗತಿಸಿದರು. ಕಸಾಪ ತಾಲೂಕು ಅಧ್ಯಕ್ಷರುಗಳಾದ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ಗುಂಡ್ವಿ ರಾಮಚಂದ್ರ ಐತಾಳ ಉಪಸ್ಥಿತರಿದ್ದರು. ಕಾರ್ಯದರ್ಶಿ ದಿನಕರ್ ಶೆಟ್ಟಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net