ವರ್ಗಾವಣೆಗೊಂಡ ಕಿಲ್ಪಾಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಅವರನ್ನು ಸನ್ಮಾನಿಸಲಾಯಿತು. ಪಂಚಾಯಿತಿ ಆಡಳಿತಾಧಿಕಾರಿ ರಾಮಕೃಷ್ಣ ಐತಾಳ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ ಮತ್ತಿತರರಿದ್ದರು.
ಮೂಲ್ಕಿ: ಸರ್ಕಾರಿ ಅಧಿಕಾರಿಗಳಲ್ಲಿ ಪ್ರಾಮಾಣಿಕತೆ, ನಿಷ್ಠೆ ಇದ್ದರೆ ಜನರು ಅವರ ಸೇವೆಯನ್ನು ಗೌರವಿಸುತ್ತಾರೆ ಎಂದು ಕಿಲ್ಪಾಡಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ರಾಮಕೃಷ್ಣ ಐತಾಳ್ ಹೇಳಿದರು.
ಕಿಲ್ಪಾಡಿ ಗ್ರಾಮ ಪಂಚಾಯಿತಿಯಲ್ಲಿ ಐದು ವರ್ಷಗಳಿಂದ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಬಂಟ್ವಾಳ ತಾಲೂಕಿನ ಆರಳ ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡಿರುವ ಪೂರ್ಣಿಮಾ ಅವರನ್ನು ಪಂಚಾಯಿತಿ ವತಿಯಿಂದ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ ಮಾತನಾಡಿ, ಗ್ರಾಮದ ಸ್ವಚ್ಛತೆ ಮತ್ತು ಅಭಿವೃದ್ಧಿಯಲ್ಲಿ ಪಿಡಿಒಗಳ ಪಾತ್ರ ಮಹತ್ವದ್ದು, ಇದಕ್ಕೆ ಸರಿಸಾಟಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಎಂದರು.
ಕಿಲ್ಪಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿಕಾಸ್ ಶೆಟ್ಟಿ, ಲೀಲಾ, ಮಾಜಿ ಸದಸ್ಯರಾದ ಗೋಪಿನಾಥ ಪಡಂಗ, ಮಮತಾ ಶೆಟ್ಟಿ, ದಿನೇಶ್, ರಾಜೇಶ್, ಲಲಿತಾ ಯಾದವ್, ಶಾಂತ, ಪಂಚಾಯಿತಿ ಕಾರ್ಯದರ್ಶಿ ಹರಿಶ್ಚಂದ್ರ, ಸಬಿತಾ ಶೆಟ್ಟಿ, ಸುರೇಶ್ ಕೊಲಕಾಡಿ, ತಾರಾನಾಥ, ರಮೇಶ್, ಯತೀಶ್ ಕೊಲಕಾಡಿ ಹಾಗೂ ಸಂಜೀವಿನಿ ಒಕ್ಕೂಟ ಸದಸ್ಯರು ಉಪಸ್ಥಿತರಿದ್ದರು.