ಸಂಸ್ಕೃತಿ ಮರೆತರೆ ಸಂಸ್ಕಾರ ನಾಶ

 ಆಟಿದ ಗೌಜಿ ಗಮ್ಮತ್ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಲೇಖಕಿ, ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷೆ ಪದ್ಮಲತಾ, ಸದಸ್ಯರಾದ ಲೋಕಯ್ಯ ಸಾಲ್ಯಾನ್ ಮತ್ತಿತರರಿದ್ದರು.
ಆಟಿದ ಗೌಜಿ ಗಮ್ಮತ್ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಲೇಖಕಿ, ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷೆ ಪದ್ಮಲತಾ, ಸದಸ್ಯರಾದ ಲೋಕಯ್ಯ ಸಾಲ್ಯಾನ್ ಮತ್ತಿತರರಿದ್ದರು.
Published on

ಕಟೀಲು: ಸಂಸ್ಕೃತಿಯನ್ನು ಮರೆತರೆ ಸಂಸ್ಕಾರ, ಭಾಷೆ ಹೀಗೆ ಅನೇಕ ಸಂಗತಿಗಳು ಇಲ್ಲವಾಗುತ್ತವೆ. ನಮ್ಮ ಎಲ್ಲ ತಿಂಗಳುಗಳ ಜತೆಗೆ ಕಷ್ಟದ ದಿನಗಳ ಆಟಿ ತಿಂಗಳ ವಿಚಾರಗಳನ್ನು ತಿಳಿಸುವ ಅಗತ್ಯ ಇದೆ ಎಂದು ಲೇಖಕಿ ವಿಜಯಲಕ್ಷ್ಮೀ ಕಟೀಲು ಹೇಳಿದರು.

ಕಟೀಲು ಗಿಡಿಗೆರೆಯ ಮಹಾಕಾಳಿ ಸಭಾಭವನದಲ್ಲಿ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ, ಶ್ರೀ ಬ್ರಹ್ಮಮುಗೇರ ತಂಗಡಿ ಸೇವಾ ಸಮಿತಿ, ಶ್ರೀ ದುರ್ಗಾಂಬಿಕಾ ಯುವಕ-ಯುವತಿ ಮಂಡಲ, ಶ್ರೀದೇವಿ ಪ್ರಸಾದಿತ ಭಜನಾ ಮಂಡಳಿ ಸಹಯೋಗದಲ್ಲಿ ದುರ್ಗಾಂಬಿಕಾ ಯುವಕ ಮಂಡಲದ 50ನೇ ವರ್ಷದ ಸಂಭ್ರಮದ ಸಂದರ್ಭ ಆಯೋಜಿಸಿದ ಆಟಿದ ಗೌಜಿ ಗಮ್ಮತ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಧಕರಾದ ತಿಮ್ಮಪ್ಪ ಮೇಸ್ತ್ರಿ, ಜಾನಕಿ ಗಿಡಿಗೆರೆ, ಗೀತಾ ಗಿಡಿಗೆರೆ ಅವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷೆ ಪದ್ಮಲತಾ, ಸದಸ್ಯರಾದ ಲೋಕಯ್ಯ ಸಾಲ್ಯಾನ್, ಈಶ್ವರ ಕಟೀಲ್, ದೈವಸ್ಥಾನ ಅಧ್ಯಕ್ಷ ಶ್ಯಾಮ ಡಿ.ಕೆ, ಸ್ಟ್ಯಾನಿ ಪಿಂಟೋ, ಸಂಘಟಕ ಸಂಸ್ಥೆಗಳ ಮುಖ್ಯಸ್ಥರಾದ ತಿಮ್ಮಪ್ಪ ಮೇಸ್ತ್ರಿ, ಕೃಷ್ಣಪ್ಪ, ಕೃಷ್ಣ ಪಿ, ಲಕ್ಷ್ಮಣ ಕೆ., ಭಾರತಿ ಸತೀಶ್, ನಳಿನಿ ಕೃಷ್ಣ ಮತ್ತಿತರರಿದ್ದರು. ಸ್ವಾತಿ ನಿರೂಪಿಸಿದರು. ಸತೀಶ್ ಸ್ವಾಗತಿಸಿದರು. ಲಕ್ಷ್ಮಣ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net