

ವಿಜಯವಾಣಿಸುದ್ದಿಜಾಲ ಪಡುಬಿದ್ರಿ
ಕಾಪುಪುರಸಭೆಗೆ ಮಂಜೂರಾಗಿರುವ ಪರಿಸರಪರಿಹಾರ ನಿಧಿ(ಎನ್‌ಜಿಟಿ)4.34 ಕೋಟಿರೂ.ಅನುದಾನದಲ್ಲಿಎಸ್‌ಟಿಪಿ (ತ್ಯಾಜ್ಯಸಂಸ್ಕರಣಾ ಘಟಕ)ನಿರ್ವಾಣಕ್ಕೆಶ್ರೀದಲ್ಲಿ ಜಮೀನು ಕಲ್ಪಿಸದಿದ್ದಲ್ಲಿಯೋಜನೆ ವಾಪಸ್ ಆಗುತ್ತದೆ.ಅಲ್ಲದೆಮುಂದೆ ಹಸಿರು ನ್ಯಾಯಾಧೀಕರಣದಿಂದಎಲ್ಲ ಅನುದಾನ ಕಡಿತದ ದಂಡನೆಎದುರಿಸಬೇಕಾಗುತ್ತದೆ.ಅದಕ್ಕಾಗಿಸೂಕ್ತ ಜಾಗ ಗುರುತಿಸಲು ಗಂಭೀರಪ್ರಯತ್ನಗಳಾಗಬೇಕು ಎಂದು ಶಾಸಕಗುರ್ಮೆ ಸುರೇಶ್ ಶೆಟ್ಟಿ ಸೂಚಿಸಿದರು.
ಕಾಪುಪುರಸಭೆಯಲ್ಲಿ ಗುರುವಾರ ನಡೆದಸಾಮಾನ್ಯ ಸಭೆಯಲ್ಲಿ ಮಾತನಾಡಿದಶಾಸಕ ಗುರ್ಮೆ ಅಧಿಕಾರಿಗಳು,ಸದಸ್ಯರಿಗೆಸೂಕ್ತ ಕ್ರಮ ಕೈಗೊಳ್ಳುವಂತೆನಿರ್ದೇಶಿಸಿದರು.
ಮುಖ್ಯಾಧಿಕಾರಿನಾಗರಾಜು ಸಿ.ಮಾತನಾಡಿ,ಎಸ್‌ಟಿಪಿನಿರ್ವಾಣಕ್ಕೆ ತಾಲೂಕು ಆಡಳಿತದಿಂದಪುರಸಭೆಗೆ ಹಸ್ತಾಂತರವಾಗಿರುವಮೂಳೂರಿನ 1.78ಎಕರೆಜಾಗ ಯೋಗ್ಯವಾಗಿಲ್ಲ ಎಂದುಕೆಯುಐಡಿಎಫ್‌ಸಿ ವ್ಯವಸ್ಥಾಪಕನಿರ್ದೇಶಕರು ವರದಿ ನೀಡಿದ್ದಾರೆ.ಪುರಸಭೆವ್ಯಾಪ್ತಿಯಲ್ಲಿ ಯೋಜನೆಗೆಅಗತ್ಯವಿರುವ 4ಎಕರೆಸರ್ಕಾರಿ ಜಮೀನಿನ ಕೊರತೆಯಿದ್ದು,ಸರಿಯಾದಜಮೀನು ಗುರುತಿಸುವಲ್ಲಿ ಸದಸ್ಯರುಪ್ರಯತ್ನಿಸಬೇಕು.ಸರ್ಕಾರಿಜಮೀನು ಲಭ್ಯವಾಗದಿದ್ದಲ್ಲಿಖಾಸಗಿ ಜಮೀನು ಖರೀದಿಸಲು ಯೋಜಿಸಬೇಕು.ಇಲ್ಲವಾದಲ್ಲಿಮುಂದಿನ ದಿನಗಳಲ್ಲಿ ತೊಂದರೆಎದುರಿಸಬೇಕಾಗುತ್ತದೆ ಎಂದುಎಚ್ಚರಿಸಿದರು.
ಪುರಸಭೆವ್ಯಾಪ್ತಿಯಲ್ಲಿರುವ ಗೂಡಂಗಡಿಗಳಿಂದಸಮಸ್ಯೆಯಾಗುತ್ತಿದ್ದು,ಈಬಗ್ಗೆ ಕ್ರಮಕ್ಕೆ ಆಗ್ರಹಿಸಿದರೂಪ್ರಯೋಜನವಾಗಿಲ್ಲ ಎಂದು ಸದಸ್ಯರಾದಮೊಹಮ್ಮದ್ ಆಸೀಫ್ ಹಾಗೂ ಸತೀಶ್ಚಂದ್ರಮೂಳೂರು ದೂರಿದರು.ಇದಕ್ಕುತ್ತರಿಸಿದಅಧಿಕಾರಿಗಳು ಪುರಸಭೆ ವ್ಯಾಪ್ತಿಯಲ್ಲಿ67ಗೂಡಂಗಡಿಗಳಿವೆ.ಅದರಿಂದಸಮಸ್ಯೆಗಳಾಗುತ್ತಿರುವ ಬಗ್ಗೆಯಾವುದೇ ದೂರು ಬಂದಿಲ್ಲ.ಪರಿಶೀಲಿಸಲಾಗುವುದುಎಂದರು.ಈವೇಳೆ ಮಧ್ಯಪ್ರವೇಶಿಸಿದ ಸ್ಥಾಯಿಸಮಿತಿ ಅಧ್ಯಕ್ಷ ಅನಿಲ್ ಕುವಾರ್ಗೂಡಂಗಡಿಗಳಿಗೆ ನಿರ್ದಿಷ್ಟವಿಸ್ತೀರ್ಣ ನಿಗದಿಪಡಿಸಿ ನಿರ್ಣಯಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಸಭೆಗೆವಿವಿಧ ಇಲಾಖೆಯ ಅಧಿಕಾರಿಗಳುಗೈರಾಗುತ್ತಿರುವ ಬಗ್ಗೆ ಹಾಗೂವಿವಿಧ ಸಮಸ್ಯೆಗಳ ಬಗ್ಗೆ ಸದಸ್ಯರಾದಫರ್ಜಾನಾ,ಬಾಬಣ್ಣನಾಯಕ್,ಅನಿಲ್,ಅಮೀರ್ಅಸವಾಧಾನ ವ್ಯಕ್ತಪಡಿಸಿದರು.ಸಭೆಯಲ್ಲಿಪುರಸಭೆ ಅಧ್ಯಕ್ಷೆ ಹರಿಣಾಕ್ಷಿದೇವಾಡಿಗ,ಉಪಾಧ್ಯಕ್ಷೆಸರಿತಾ ಶಿವಾನಂದ ಉಪಸ್ಥಿತರಿದ್ದರು.
ಪುರಸಭೆವ್ಯಾಪ್ತಿಯಲ್ಲಿ ಬೀದಿನಾಯಿಗಳಸಮಸ್ಯೆ ಗಂಭೀರವಾಗಿದ್ದು,ಈಬಗ್ಗೆ ಕ್ರಮ ಕೈಗೊಳ್ಳಲು ಪಶುಇಲಾಖೆ ಸೂಕ್ತ ನಿರ್ದೇಶನ ನೀಡುವಂತೆಮುಖ್ಯಾಧಿಕಾರಿ ನಾಗರಾಜು ಸಿ.ಹೇಳಿದರು.ಇದಕ್ಕೆಉತ್ತರಿಸಿದ ಪಶುವೈದ್ಯಾಧಿಕಾರಿ,ಪುರಸಭೆವ್ಯಾಪ್ತಿಯಲ್ಲಿ ಬೀದಿನಾಯಿ ಹಾಗೂಸಾಕು ನಾಯಿಗಳಿಗೆ ರೇಬಿಸ್ ಉಚಿತಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಪುರಸಭೆಆಡಳಿತದೊಂದಿಗೆ ಚರ್ಚಿಸಿ ನಿರ್ಧಾರಕೈಗೊಳ್ಳಲಾಗುವುದು ಎಂದರು.
ಪುರಸಭೆವ್ಯಾಪ್ತಿಯಲ್ಲಿ 19ಅಂಗನವಾಡಿಗಳಿದ್ದು,ಅಂಗನವಾಡಿಗಳನಿರ್ವಹಣೆಗೆ ಇಲಾಖೆಯಿಂದ ಯಾವುದೇಅನುದಾನ ಲಭ್ಯವಾಗುತ್ತಿಲ್ಲ ಎಂದುಅಂಗನವಾಡಿ ಮೇಲ್ವಿಚಾರಕಿ ಸಭೆಗಮನಕ್ಕೆ ತಂದರು.ಅಂಗನವಾಡಿಗಳಸಮಸ್ಯೆಗಳ ಬಗ್ಗೆ ಸಮಗ್ರ ವರದಿನೀಡುವಂತೆ ಅನಿಲ್ ಸೂಚಿಸಿದರು.