ಸಾಮರ್ಥ್ಯ, ಕೌಶಲ ಗುರುತಿಸಿ ಗುರಿ ರೂಪಿಸಿ

ಯೇನೆಪೋಯ ಇಂಜಿನಿಯರ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.  ಅಬ್ದುಲ್ಲಾ ಖಾನ್ ಎಂ., ರತ್ನಾಕರ್ ಭಟ್, ಯೇನೆಪೋಯ ಅಬ್ದುಲ್ಲಾ ಜಾವೀದ್ ಮತ್ತಿತರರಿದ್ದರು.
ಯೇನೆಪೋಯ ಇಂಜಿನಿಯರ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಬ್ದುಲ್ಲಾ ಖಾನ್ ಎಂ., ರತ್ನಾಕರ್ ಭಟ್, ಯೇನೆಪೋಯ ಅಬ್ದುಲ್ಲಾ ಜಾವೀದ್ ಮತ್ತಿತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ, ಪ್ರತಿಭೆ ಹಾಗೂ ಕೌಶಲ ಗುರುತಿಸಿಕೊಂಡು ಮುಂದಿನ ಐದರಿಂದ ಹತ್ತು ವರ್ಷಗಳ ಗುರಿ ರೂಪಿಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆ ಆಧಾರಿತ ಸ್ಪರ್ಧಾತ್ಮಕ ಪರಿಸರದಲ್ಲಿ ನಿರಂತರ ಕಲಿಕೆ, ವೃತ್ತಿಪರ ಶ್ರೇಷ್ಠತೆ, ನೈತಿಕ ಮೌಲ್ಯಗಳು, ಹೊಂದಿಕೊಳ್ಳುವಿಕೆ, ಭಾವನಾತ್ಮಕ ಬುದ್ಧಿವಂತಿಕೆ ಹಾಗೂ ಮಾನಸಿಕ ಸ್ವಾಸ್ಥೃಕ್ಕೂ ಆದ್ಯತೆ ನೀಡಬೇಕು ಎಂದು ಬೆಂಗಳೂರಿನ ಐವೇವ್ ಸಿಸ್ಟಮ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ಅಧ್ಯಕ್ಷ ಅಬ್ದುಲ್ಲಾ ಖಾನ್ ಎಂ. ಹೇಳಿದರು.
ಯೆನೆಪೋಯ ಇಂಜಿನಿಯರ್ ಕಾಲೇಜಿನ 2022-26ನೇ ಬ್ಯಾಚ್‌ನ ಬಿ.ಇ. ಪದವೀಧರರ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಣಿಪಾಲದ ಕಾರ್‌ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ರತ್ನಾಕರ್ ಭಟ್ ಅತಿಥಿಯಾಗಿದ್ದರು.
ಮಂಗಳೂರಿನ ಯೆನೆಪೋಯ ಗ್ರೂಪ್ ಕಾರ್ಯಾಚರಣೆ ನಿರ್ದೇಶಕ ಯೆನೆಪೋಯ ಅಬ್ದುಲ್ಲಾ ಜಾವೀದ್ ಅಧ್ಯಕ್ಷತೆ ವಹಿಸಿ, ಪದವಿ ಸ್ವೀಕಾರದ ಪ್ರತಿಜ್ಞಾ ವಿಧಿ ಬೋಧಿಸಿದರು.
ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಪ್ರಶಾಂತ್ 9.78 ಸಿಜಿಪಿಎಯೊಂದಿಗೆ ಬ್ಯಾಚ್‌ನ ಅಗ್ರಗಣ್ಯ ವಿದ್ಯಾರ್ಥಿಯಾದರು. ಅದೇ ವಿಭಾಗದ ನಿತ್ಯಾ ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿ ಪ್ರಶಸ್ತಿ ಪಡೆದುಕೊಂಡರು.
ಯೆನೆಪೋಯ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಸಹಕುಲಾಧಿಪತಿ ಯೆನೆಪೋಯ ಮೊಹಮ್ಮದ್ ಫರ್ಹಾದ್, ಆಡಳಿತ ಮಂಡಳಿ ಸದಸ್ಯ ಡಾ.ಅಖ್ತರ್ ಹುಸೇನ್, ಶೈಕ್ಷಣಿಕ ವಿಭಾಗದ ಡೀನ್ ಪ್ರೊ.ಡಾ.ಮೆಲ್ವಿನ್ ಡಿಸೋಜ, ಸಂಶೋಧನಾ ವಿಭಾಗದ ಡೀನ್ ಪ್ರೊ.ಡಾ.ಸುಜರಿತಾ, ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಬಿ.ಶಾಹಿದ್, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ವೈ.ಐ.ಟಿ. ಪ್ರಾಂಶುಪಾಲ ಪ್ರೊ.ಡಾ.ಅಬ್ದುಲ್ ಕರೀಮ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸಿಂಚನಾ ನಿರೂಪಿಸಿದರು. ಕಾರ್ತಿಕ್ ಮತ್ತು ಡಯಾನಾ ಅತಿಥಿಗಳನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಪೂಜಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net