ದೈವಿಕ ಕರೆಯಿಂದ ಉಡುಪಿಗೆ ಬಂದಿರುವೆ

ಉಡುಪಿಯಲ್ಲಿ ಬೃಹತ್​ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಆಂಧ್ರ ಪ್ರದೇಶದ ಡಿಸಿಎಂ ಪವನ್​ ಕಲ್ಯಾಣ್​, ಸುಗುಣೇಂದ್ರ ಶ್ರೀಗಳಿಗೆ ತಿರುಪತಿ ತಿಮ್ಮಪ್ಪನ ಸನ್ನಿಧಾನದ ಪ್ರಸಾದ ನೀಡಿದರು. ಸುಶ್ರೀಂದ್ರ ಶ್ರೀ, ಪ್ರಸನ್ನ ಆಚಾರ್ಯ ಇದ್ದರು.
ಉಡುಪಿಯಲ್ಲಿ ಬೃಹತ್​ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಆಂಧ್ರ ಪ್ರದೇಶದ ಡಿಸಿಎಂ ಪವನ್​ ಕಲ್ಯಾಣ್​, ಸುಗುಣೇಂದ್ರ ಶ್ರೀಗಳಿಗೆ ತಿರುಪತಿ ತಿಮ್ಮಪ್ಪನ ಸನ್ನಿಧಾನದ ಪ್ರಸಾದ ನೀಡಿದರು. ಸುಶ್ರೀಂದ್ರ ಶ್ರೀ, ಪ್ರಸನ್ನ ಆಚಾರ್ಯ ಇದ್ದರು.
Published on

ತೆಲುಗು ನಟ, ಆಂಧ್ರ ಡಿಸಿಎಂ ಪವನ್​ ಕಲ್ಯಾಣ್​ ಪ್ರತಿಕ್ರಿಯೆ

ಉಡುಪಿ: ಉಡುಪಿ ಅಂದರೆ ಡಿವೈನ್​ ಪವರ್​ ಹೌಸ್​. ಉಡುಪಿಗೆ ಬರಲು ನನಗೆ ದೇವರು ನೀಡಿದ ಡಿವೈನ್​ ಕಾಲ್​ (ದೈವಿಕ ಕರೆ). ಪುತ್ತಿಗೆ ಸುಗುಣೇಂದ ಶ್ರೀಗಳು ವೈಯಕ್ತಿಕವಾಗಿ ನನ್ನನ್ನು ಆಮಂತ್ರಿಸಿದ್ದಾರೆ. ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದು ತೆಲುಗು ಖ್ಯಾತ ನಟ, ಆಂಧ್ರ ಪ್ರದೇಶದ ಡಿಸಿಎಂ ಪವನ್​ ಕಲ್ಯಾಣ್​ ತಿಳಿಸಿದರು.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಮಠದಿಂದ ಆಯೋಜಿಸಿದ್ದ ಬೃಹತ್​ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾನುವಾರ (ಡಿ.7) ಉಡುಪಿಗೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಒಂದು ಕೋಟಿಗೂ ಅಧಿಕ ಜನರಿಂದ ಪುತ್ತಿಗೆ ಸುಗುಣೇಂದ್ರ ಶ್ರೀಗಳು ಭಗವದ್ಗೀತೆ ಬರೆಸಿರುವುದು ಅದ್ಭುತ, ಕ್ರಾಂತಿಕಾರಕ ಕಾರ್ಯ. ಅಲ್ಲದೆ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಏಕಕಾಲದಲ್ಲಿ ಒಂದು ಲಕ್ಷ ಜನ ಗೀತಾ ಪಾರಾಯಣ ಮಾಡಿರುವುದೂ ಸಹ ವಿಶೇಷವಾಗಿದೆ ಎಂದರು.

ಕಾಂತಾರಾ ವಿಶಿಷ್ಟ ಸಿನಿಮಾ

ಪ್ರತಿಯೊಂದು ಊರಿಗೂ ತನ್ನದೇ ಆದ ವಿಶಿಷ್ಟ ಸಂಸ್ಕ್ಕತಿ ಇರುತ್ತದೆ. ಅದೇರೀತಿ ಕಾಂತಾರಾ ಸಿನಿಮಾವು ತುಳುನಾಡಿನ ಕಥೆ ಹೇಳುತ್ತದೆ. ಆಂಧ್ರದ ತೆಲಂಗಾಣ ಭಾಗದಲ್ಲಿಯೂ ಅಂತಹ ಸಾಂಸ್ಕ್ಕತಿಕ ವೈಶಿಷ್ಟ್ಯ ಹೊಂದಿರುವ ಕಥೆಗಳಿವೆ. ಇದೀಗ ಬಿಡುಗಡೆಯಾದ ಕಾಂತಾರಾ ಚಾಪ್ಟರ್-1 ಸಿನಿಮಾ ನಾನು ನೋಡಿಲ್ಲ. ಹಿಂದೆ ಬಿಡುಗಡೆಯಾದ ಕಾಂತಾರ ನೋಡಿ ಖುಷಿ ಪಟ್ಟಿದ್ದೇನೆ. ಸಾಂಸ್ಕ್ಕತಿಕ ಹಿನ್ನೆಲೆಯ ಕಥೆ ಹೇಳುವ ಇಂತಹ ಸಿನಿಮಾಗಳು ಹೆಚ್ಚು ಹೆಚ್ಚು ಬರಬೇಕು ಎಂದರು.
ರಾಜ್ಯ ರಾಜಕಾರಣದ ಪವರ್​ ಶೇರಿಂಗ್​ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದೆಲ್ಲ ಎಲ್ಲ ರಾಜ್ಯದಲ್ಲೂ ಇರುವಂತದ್ದೇ ಎಂದು ನಕ್ಕು, ಉಡುಪಿ ಶ್ರೀಕೃಷ್ಣ ಮಠದತ್ತ ತೆರಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net