

ವ್ಯಾಪ್ತಿಯ ಗ್ರಾಪಂನಲ್ಲಿ ಸಭೆ ನಡೆಸಿ, ಠರಾವು ಪಾಸು ಮಾಡದೇ ಏಕಾಏಕಿ ಜಿಲ್ಲಾಡಳಿತವೇ ನಿರ್ಧಾರ ಕೈಗೊಂಡಿದ್ದು ಸೂಕ್ತವಕಲ್ಲ. ಮೂರೂ ಗ್ರಾಮಸ್ಥರ ಬೇಡಿಕೆಯಂತೆ ತಕ್ಷಣವೇ ಬೀದಿ ನಾಯಿಗಳ ಶೆಲ್ಟರ್ ಯೋಜನೆ ಕೈಬಿಡಬೇಕು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧ್ಯಕ್ಷತೆಯಲ್ಲಿ ತ್ವರಿತವಾಗಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಸಭೆ ನಡೆಸಿ ಈ ಬಗ್ಗೆ ಸೂಕ್ತ ರ್ನಿಣಯ ಕೈಗೊಳ್ಳಬೇಕು.