ತಲಪ್ಪಾಡಿ ಟೋಲ್ ಗೇಟ್‌ನಿಂದ 21 ಕಿ.ಮೀ. ದೂರದಲ್ಲಿ ಮತ್ತೊಂದು ಟೋಲ್ ಬೂತ್ ಸ್ಥಾಪನೆ ವಿರುದ್ಧ ಭಾರಿ ಸಾರ್ವಜನಿಕ ಪ್ರತಿರೋಧ ವ್ಯಕ್ತವಾಗಿತ್ತು. ಇದರ ಜತೆಗೆ, ಸುಪ್ರೀಂ ಕೋರ್ಟ್ ತೀರ್ಪು ಕೂಡ ವಿರುದ್ಧವಾಗಿರುತ್ತದೆ ಎಂಬ ಊಹೆ ಮೇಲೆ ರಾ.ಹೆ.ಪ್ರಾಧಿಕಾರ ಆರಿಕ್ಕಾಡಿ ಟೋಲ್‌ಗೇಟ್‌ನ್ನು ಮುಚ್ಚಲು ನಿರ್ಧರಿಸಿತು. ಅದರ ಕಾರ್ಯಾಚರಣೆ ಕೇವಲ 21 ದಿನಗಳಲ್ಲಿ ಮುಚ್ಚಲ್ಪಟ್ಟಿತು. ರಾ.ಹೆ. ಪ್ರಾಧಿಕಾರ ಟೋಲ್ ಬೂತ್‌ನಿಂದ, ಪ್ರಯಾಣಿಕರಿಂದ ಅಷ್ಟು ದಿನಗಳಲ್ಲಿ 2.75 ಕೋಟಿ ರೂ. ಸಂಗ್ರಹಿಸಿತ್ತು. ಮುಚ್ಚಿದ ಬಳಿಕ ಟೋಲ್ ಗೇಟ್‌ನ 70 ಪ್ರತಿಶತ ನಿರ್ಮಾಣ ಸಾಮಗ್ರಿ ಇಲ್ಲಿಂದ ಸ್ಥಳಾಂತರಿಸಲಾಗಿದೆ.