ದೇವರಲ್ಲಿ ವಿನಮ್ರತೆಯೇ ನಾಯಕತ್ವದ ಲಕ್ಷಣ

ಉಡುಪಿ ಕಲ್ಯಾಣಪುರದ ಚರ್ಚ್​ನಲ್ಲಿ ಮೂವರು ಉಪಯಾಜಕರಿಗೆ ಗುರುದೀಕ್ಷೆ ನೀಡಲಾಯಿತು. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ, ಮೊನ್ಸಿಂಜ್ಞೊರ್​ ಫ್ರಾನ್ಸಿಸ್​ ಎಫ್​ ಲೂವಿಸ್​, ಸ್ಟೀವನ್​ ಡಿಸೋಜಾ ಇತರರಿದ್ದರು.
ಉಡುಪಿ ಕಲ್ಯಾಣಪುರದ ಚರ್ಚ್​ನಲ್ಲಿ ಮೂವರು ಉಪಯಾಜಕರಿಗೆ ಗುರುದೀಕ್ಷೆ ನೀಡಲಾಯಿತು. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ, ಮೊನ್ಸಿಂಜ್ಞೊರ್​ ಫ್ರಾನ್ಸಿಸ್​ ಎಫ್​ ಲೂವಿಸ್​, ಸ್ಟೀವನ್​ ಡಿಸೋಜಾ ಇತರರಿದ್ದರು.
Published on: 

* ಉಡುಪಿ ಬಿಷಪ್​ ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಅನಿಸಿಕೆ

* ಧರ್ಮಪ್ರಾಂತ್ಯದ ಮೂವರಿಗೆ ಗುರುದೀಕ್ಷೆ ಪ್ರದಾನ

ಉಡುಪಿ: ಕ್ರೈಸ್ತ ಕುಟುಂಬಗಳಿಂದ ಹೆಚ್ಚಿನ ಯುವಕರು ಧರ್ಮಗುರುವಾಗಲು ಮುಂದೆ ಬರಬೇಕಿದೆ. ಇದಕ್ಕೆ ಪಾಲಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹಿಸಬೇಕು. ಜನರ ಸೇವೆಗಾಗಿ ದೇವರ ಎದುರು ನಮ್ಮನ್ನು ನಾವು ವಿನಮ್ರಗೊಳಿಸುವುದೇ ನೈಜ ನಾಯಕತ್ವವಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ತಿಳಿಸಿದರು.

ಉಡುಪಿ ಕಲ್ಯಾಣಪುರದ ಮಿಲಾಗ್ರಿಸ್​ ಕ್ಯಾಥೆಡ್ರಲ್​ ಚರ್ಚ್​ನಲ್ಲಿ ಧರ್ಮಪ್ರಾಂತದ ಮೂವರು ಉಪ ಯಾಜಕರಿಗೆ ಬುಧವಾರ (ಅ.21) ಗುರುದೀಕ್ಷೆ ಪ್ರದಾನಿಸಿ, ಧರ್ಮಪ್ರಾಂತಕ್ಕೆ ಹೊಸ ಧರ್ಮಗುರುವನ್ನು ನೀಡಿದ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದರು.

ಪಡುಕೋಣಿಯ ಕೆವಿನ್​ ಡಿಸೋಜಾ, ನಿಡ್ಪಳ್ಳಿಯ ಸ್ವೀವನ್​ ಡಿಸೋಜಾ ಹಾಗೂ ಕೆಮ್ಮಣ್ಣುವಿನ ಶೊನ್​ ಸಾವಿಯೋ ಅಂದ್ರಾದೆ ಅವರಿಗೆ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ನೂತನ ಧರ್ಮಗುರುಗಳಾಗಿ ದೀಕ್ಷೆ ಸ್ವೀಕರಿಸಿದರು.

ಸಂಭ್ರಮದ ಬಲಿಪೂಜೆಯಲ್ಲಿ ಪವಿತ್ರಾತ್ಮನ ಆಗಮನಕ್ಕಾಗಿ ಧಮಾರ್ಧ್ಯಕ್ಷರೊಂದಿಗೆ ಸೇರಿದ ಎಲ್ಲ ಧರ್ಮಗುರುಗಳೂ ತಮ್ಮ ಕರಗಳನ್ನು ನವ ಧರ್ಮಗುರುಗಳ ಅಭ್ಯರ್ಥಿಯ ಶಿರದ ಮೇಲಿಟ್ಟು ಪ್ರಾರ್ಥಿಸಿದರು. ನಂತರ ಕ್ರೈಸ್ತ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ನವ ಧರ್ಮಗುರುಗಳ ಕರಗಳನ್ನು ಪವಿತ್ರ ತೈಲಗಳಿಂದ ಅಭಿಷಿಕ್ತಗೊಳಿಸಿದರು. ಧರ್ಮಗುರುವಿನ ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿ ವಿವರಿಸಲಾಯಿತು.

ದೀಕ್ಷೆ ಸ್ವೀಕರಿಸಿದ ಉಪಯಾಜಕರು ಪ್ರಥಮ ಬಾರಿಗೆ ಬಲಿಪೀಠದ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಭಕ್ತಾದಿಗಳಿಗೆ ದಿವ್ಯ ಪ್ರಸಾದ ವಿತರಿಸಿದರು.

ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್​ ಫ್ರಾನ್ಸಿಸ್​ ಎಫ್​ ಲೂವಿಸ್​, ಕುಲಪತಿ ವಂ.ಸ್ಟೀವನ್​ ಡಿಸೋಜಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್​ ಡೆಸಾ ಹಾಗೂ ಶಿರ್ವ, ಕಾರ್ಕಳ, ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ವಂ.ಚಾರ್ಲ್ಸ್​ ಮಿನೇಜಸ್​, ವಂ.ಆಲ್ಬನ್​ ಡಿಸೋಜಾ, ವಂ.ಪಾವ್ಲ್​ ರೇಗೊ, ಮಂಗಳೂರು ಗುರುಮಠದ ರೆಕ್ಟರ್​ ವಂ.ರಾಜೇಶ ರೊಸಾರಿಯೊ ವಿವಿಧ ಚರ್ಚ್​ಗಳ ಧರ್ಮಗುರುಗಳು ಉಪಸ್ಥಿತರಿದ್ದರು.

ವಂ.ವಿಲ್ಸನ್​ ಡಿಸೋಜಾ ಗುರು ದೀಕ್ಷೆಯ ಧಾರ್ಮಿಕ ವಿಧಿ ವಿಧಾನಗಳ ಕಾರ್ಯಕ್ರಮ ನಿರೂಪಿಸಿದರು. ವಂ.ಸ್ಟೀಫನ್​ ರೊಡ್ರಿಗಸ್​ ನೂತನ ಧರ್ಮಗುರುಗಳ ಪರಿಚಯ ಮಾಡಿದರು. ವಂ.ಸ್ಟೀವನ್​ ಡಿಸೋಜಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net