ಜ.25ರಂದು ಬೃಹತ್ ಹಿಂದೂ ಸಂಗಮ ಶೋಭಾಯಾತ್ರೆ ಸಮಾವೇಶ

ಬೃಹತ್ ಹಿಂದೂ ಸಂಗಮ, ಶೋಭಾಯಾತ್ರೆ ಸವಾವೇಶದ ಪೋಸ್ಟರ್‌ನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಮಿತಿ ಗೌರವಾಧ್ಯಕ್ಷ ಆನಂದ್ ಸಿ.ಕುಂದರ್ ಬಿಡುಗಡೆಗೊಳಿಸಿದರು. ಪ್ರಮುಖರಾದ ಸತೀಶ್ ಎಚ್.ಕುಂದರ್, ಜ್ಯೋತಿ ಭರತ್ ಕುವಾರ್ ಶೆಟ್ಟಿ ಇತರರಿದ್ದರು.
ಬೃಹತ್ ಹಿಂದೂ ಸಂಗಮ, ಶೋಭಾಯಾತ್ರೆ ಸವಾವೇಶದ ಪೋಸ್ಟರ್‌ನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಮಿತಿ ಗೌರವಾಧ್ಯಕ್ಷ ಆನಂದ್ ಸಿ.ಕುಂದರ್ ಬಿಡುಗಡೆಗೊಳಿಸಿದರು. ಪ್ರಮುಖರಾದ ಸತೀಶ್ ಎಚ್.ಕುಂದರ್, ಜ್ಯೋತಿ ಭರತ್ ಕುವಾರ್ ಶೆಟ್ಟಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕೋಟ
ಹಿಂದೂ ಸಂಗಮ ಆಯೋಜನಾ ಸಮಿತಿ ಸಾಲಿಗ್ರಾಮ ತಾಲೂಕು ಕೋಟ ಮಂಡಲದ ಆಶ್ರಯದಲ್ಲಿ ಇದೇ ಜ.25ರಂದು ಕೋಟದ ಮಾಂಗಲ್ಯ ಮಂದಿರ ಮುಂಭಾಗ ಮಧ್ಯಾಹ್ನ 3 ಗಂಟೆಗೆ ಬೃಹತ್ ಹಿಂದೂ ಸಂಗಮ, ಶೋಭಾಯಾತ್ರೆ ಸಮಾವೇಶ ಆಯೋಜಿಸಲಾಗಿದೆ. ಈ ಹಿನ್ನಲೆಯಲ್ಲಿ ಬುಧವಾರ ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಕೋಟ ಅಮೃತೇಶ್ವರೀ ದೇಗುಲದ ಸಭಾಂಗಣದಲ್ಲಿ ಜರುಗಿತು.
ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಮಿತಿ ಗೌರವಾಧ್ಯಕ್ಷ ಆನಂದ್ ಸಿ.ಕುಂದರ್ ಪೋಸ್ಟರ್ ಬಿಡುಗಡೆಗೊಳಿಸಿದರು.
ಹಿಂದೂ ಸಂಗಮ ಕೋಟ ಮಂಡಲ ಸಮಿತಿ ಅಧ್ಯಕ್ಷ ಸತೀಶ್ ಎಚ್.ಕುಂದರ್, ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಭರತ್ ಕುವಾರ್ ಶೆಟ್ಟಿ, ಕೋಟ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸದಾನಂದ ಗಿಳಿಯಾರು, ಕದ್ರಿ ಮಂಜುನಾಥೇಶ್ವರ ದೇಗುಲದ ವಾಜಿ ಟ್ರಸ್ಟಿ ಕುಸುವಾ ದೇವಾಡಿಗ, ಹಿಂದೂ ಸಂಗಮ ಆಯೋಜನಾ ಸಮಿತಿಯ ಸಾಲಿಗ್ರಾಮ ತಾಲೂಕು ಸಂಯೋಜಕ ಸುರೇಂದ್ರ ಪೂಜಾರಿ ಕೋಡಿ ಕನ್ಯಾಣ, ಸಂದೀಪ್ ಶಿರಿಯಾರ, ದೇವದತ್ತ ಭಟ್, ಪಂಜು ಪೂಜಾರಿ ಯಡಬೆಟ್ಟು, ರಮೇಶ್ ಪ್ರಭು ಕೋಟ, ರಾಮ ಬಂಗೇರ, ಅಜಿತ್ ದೇವಾಡಿಗ, ಪ್ರಮೋದ್ ಹಂದೆ, ರವೀಂದ್ರ ತಿಂಗಳಾಯ, ಸಮತಾ ಸುರೇಶ್, ರಂಜಿತ್ ಕುವಾರ್, ಪ್ರಸಾದ್ ಬಿಲ್ಲವ, ಪ್ರಶಾಂತ್ ಪಡುಕರೆ, ಲಲಿತಾ ಪೂಜಾರಿ, ಸೋಮ ಮರಕಾಲ, ಜೀವನ್ ಪೂಜಾರಿ, ಅವಿನಾಶ್ ಮರಕಾಲ, ಗಿರೀಶ್ ಆಚಾರ್, ಶ್ರೀಕಾಂತ್ ಆಚಾರ್, ಸಂದೀಪ್ ತೋಳಾರ್ ಮತ್ತಿತರರು ಇದ್ದರು.
ಕೋಟದಲ್ಲಿ ಆಯೋಜಿಸಲಾಗುತ್ತಿರುವ ಬೃಹತ್ ಹಿಂದೂ ಸಂಗಮ ಸವಾವೇಶ ಮಣೂರು ಮಹಾಲಿಂಗೇಶ್ವರ ದೇಗುಲದಿಂದ ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲದವರೆಗೆ ಶೋಭಾಯಾತ್ರೆ ನಡೆಯಲಿದೆ. ಬೃಹತ್ ಹಿಂದೂ ಸವಾವೇಶ ವಾಂಗಲ್ಯ ಮಂದಿರದ ಮೈದಾನದಲ್ಲಿ ಜರುಗಿಲಿದೆ ಎಂದು ಕೋಟ ಮಂಡಲ ಸಂಯೋಜಕ ರತ್ನಾಕರ ಪೂಜಾರಿ ಬಾರಿಕೆರೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net