ಗುರುಕುಲ ಮಾದರಿ ಶಿಕ್ಷಣ ಇಂದಿನ ಅಗತ್ಯ

 ಸಾಸ್ತಾನದಲ್ಲಿ ನಡೆದ ಬೃಹತ್ ಹಿಂದೂ ಸಂಗಮದಲ್ಲಿ ಈಶ ವಿಠಲದಾಸ ಶ್ರೀಗಳು ಆಶೀರ್ವಚನ ನೀಡಿದರು. ಆರೆಸೆಸ್ಸ್ ಮುಖಂಡ ಪ್ರಕಾಶ್ ಎಸ್.ಪಿ., ಪ್ರಮುಖರಾದ ವಾಸುದೇವ ಹಂಗಾರಕಟ್ಟೆ, ಡಾ.ಉಷಾ ಹೇಮಂತ್, ಎಂ.ಸಿ.ಚಂದ್ರಶೇಖರ ಉಪಸ್ಥಿತರಿದ್ದರು.
ಸಾಸ್ತಾನದಲ್ಲಿ ನಡೆದ ಬೃಹತ್ ಹಿಂದೂ ಸಂಗಮದಲ್ಲಿ ಈಶ ವಿಠಲದಾಸ ಶ್ರೀಗಳು ಆಶೀರ್ವಚನ ನೀಡಿದರು. ಆರೆಸೆಸ್ಸ್ ಮುಖಂಡ ಪ್ರಕಾಶ್ ಎಸ್.ಪಿ., ಪ್ರಮುಖರಾದ ವಾಸುದೇವ ಹಂಗಾರಕಟ್ಟೆ, ಡಾ.ಉಷಾ ಹೇಮಂತ್, ಎಂ.ಸಿ.ಚಂದ್ರಶೇಖರ ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕೋಟ
ಗುಲಾಮಿ ಶಿಕ್ಷಣದಿಂದ ದೇಶಕ್ಕೆ ತೊಂದರೆಯಿದ್ದು, ನಮ್ಮ ದೇಶದಲ್ಲಿ ಗುರುಕುಲ ಮಾದರಿ ಶಿಕ್ಷಣ ಪದ್ಧತಿ ಜಾರಿಗೊಳಿಸಬೇಕು ಎಂದು ಕೇಮಾರಿನ ಸಾಂದೀಪನಿಸಾಧನಾಶ್ರಮದ ಈಶ ವಿಠಲದಾಸ ಶ್ರೀಗಳು ಹೇಳಿದರು.
ಸಾಸ್ತಾನದ ಕಾರ್ತಿಕೇಯ ಎಸ್ಟೇಟ್‌ನಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಸಾಲಿಗ್ರಾಮ ತಾಲೂಕಿನ ಸಾಸ್ತಾನ ಮಂಡಲದ ಆಶ್ರಯದಲ್ಲಿ ಭಾನುವಾರ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಬಳಿಕ ದಿಕ್ಸೂಚಿ ಭಾಷಣ ಮಾಡಿದ ಆರೆಸೆಸ್ಸ್ ದಕ್ಷಿಣ ಪ್ರಾಂತ ಕಾರ್ಯವಾಹ ಪ್ರಕಾಶ್ ಎಸ್.ಪಿ., ಅಖಂಡವಾಗಿದ್ದ ಈ ಭರತ ಖಂಡವನ್ನು ಮರುಜೋಡಿಸುವ ಕೆಲಸವಾಗಬೇಕು. ಸನಾತನ ಹಿಂದೂ ಧರ್ಮವನ್ನು ಮತ್ತಷ್ಟು ಜಾಗೃತಗೊಳಿಸಬೇಕು. ಜಗತ್ತಿಗೆ ಭಾರತ ವಿಶ್ವಗುರುವಾಗಿದ್ದು, ರಾಮಮಂದಿರದ ಮೂಲಕ ಸ್ವದೇಶಿ ಚಿಂತನೆ ಜಾಗೃತಗೊಂಡಿದೆ ಎಂದರು.
ಹಿಂದೂ ಸಂಗಮ ಸಾಸ್ತಾನ ಮಂಡಲ ಅಧ್ಯಕ್ಷ ರಘು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಾಸುದೇವ ಹಂಗಾರಕಟ್ಟೆ, ಡಾ.ಉಷಾ ಹೇಮಂತ್, ಎಂ.ಸಿ.ಚಂದ್ರಶೇಖರ ಉಪಸ್ಥಿತರಿದ್ದರು.
ಸುರೇಶ್ ಪೂಜಾರಿ ಪಾಂಡೇಶ್ವರ ಸ್ವಾಗತಿಸಿದರು. ಡಾ.ವಿದ್ವಾನ್ ವಿಜಯ ಮಂಜರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಂದ್ರ ಕೋಡಿ ವಂದಿಸಿದರು. ಪ್ರಶಾಂತ್ ಶೆಟ್ಟಿ ನಿರೂಪಿಸಿದರು. ಸಾಸ್ತಾನದಿಂದ ಕಾರ್ತಿಕೇಯ ಎಸ್ಟೇಟ್ ತನಕ ಮೆರವಣಿಗೆ ನಡೆಯಿತು. ಶ್ರೀ ಮಹಾಲಿಂಗೇಶ್ವರ ಪಾರಾಯಣ ತಂಡದಿಂದ ಭಗವದ್ಗೀತೆ ಪಾರಾಯಣ, ಮೀನಾ ಕಾರಂತರ ತಂಡದಿಂದ ನೃತ್ಯ ಸಿಂಚನ, ಮಂಜುನಾಥ ಕುಂದೇಶ್ವರರಿಂದ ಹಾಸ್ಯ ಸಂಜೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net