ಕಾಸರಗೋಡು: ಬೇತೂರುಪಾದದಲ್ಲಿ ಗೃಹಿಣಿ ಮೃತದೇಹ ಶೆಡ್ಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಲ್ಲಿನ ನಿವಾಸಿ ವಿ. ನಾರಾಯಣನ್ ಎಂಬುವರ ಪತ್ನಿ ಎನ್.ಶೋಭಾ(50) ಮೃತಪಟ್ಟವರು.
ಮನೆ ಸಮೀಪದ ಶೆಡ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶೋಭಾ ಅವರನ್ನು ಪತ್ತೆಹಚ್ಚಲಾಗಿದ್ದು, ತಕ್ಷಣ ನೇಣಿನಿಂದ ಕೆಳಗಿಳಿಸಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಪ್ರಯೋಜನವಾಗಿರಲಿಲ್ಲ. ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.