ಬಾಲಕಿಗೆ ಕಿರುಕುಳ ನೀಡಿದಾತನ ಮನೆಗೆ ದಾಳಿ

Attack
Attack
Published on
ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನದಲ್ಲಿ ಪೋಕ್ಸೋ ಪ್ರಕರಣದ ಆರೋಪಿ ಅಬೂಬಕ್ಕರ್ ಎಂಬಾತನ ಪಡನ್ನ ಗಣೇಶ್ ಮುಖ್‌ನಲ್ಲಿರುವ ಮನೆ ಮೇಲೆ ಆಕ್ರೋಶಿತ ತಂಡವೊಂದು ದಾಳಿ ನಡೆಸಿದೆ.
ತಂಡ ಕಿಟಕಿ ಗ್ಲಾಸ್ ಒಡೆದು ಹಾನಿಗೊಳಿಸಿದ್ದು, ಮನೆಯಲ್ಲಿದ್ದ ಮಹಿಳೆಯನ್ನು ಅಶ್ಲೀಲ ಪದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಅಕ್ಷಯ್ ಮತ್ತು ವಿಜಯ್ ಎಂಬುವರ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚಂದೇರ ಠಾಣೆ ವ್ಯಾಪ್ತಿಯ 14ರ ಹರೆಯದ ಬಾಲಕಿಯನ್ನು ತಿನಿಸು ಕೊಡುವ ನೆಪದಲ್ಲಿ ಮನೆಗೆ ಕರೆಸಿಕೊಂಡಿದ್ದ ಪಡನ್ನ ಗಣೇಶ್‌ಮುಖ್ ನಿವಾಸಿ ಎ.ಸಿ.ಅಬೂಬಕ್ಕರ್(70) ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net