ಬಡ ಕುಟುಂಬಕ್ಕೆ ಮನೆ ಹಸ್ತಾಂತರ

ಗಿಳಿಯಾರು ಹೊನ್ನಾರಿ ಬೊಬ್ಬರ್ಯ ದೈವಸ್ಥಾನ ಸಮೀಪದ ನಿವಾಸಿ ವೀರು ಪೂಜಾರಿ ಕುಟುಂಬಕ್ಕೆ ಮನೆ ಹಸ್ತಾಂತರಿಸಲಾಯಿತು. ಪ್ರಮುಖರಾದ ಕಿರಣ್​ ಕುಮಾರ್​ ಕೊಡ್ಗಿ, ಆನಂದ ಸಿ.ಕುಂದರ್​, ವಸಂತ ಗಿಳಿಯಾರು ಮೊದಲಾದವರಿದ್ದರು.
ಗಿಳಿಯಾರು ಹೊನ್ನಾರಿ ಬೊಬ್ಬರ್ಯ ದೈವಸ್ಥಾನ ಸಮೀಪದ ನಿವಾಸಿ ವೀರು ಪೂಜಾರಿ ಕುಟುಂಬಕ್ಕೆ ಮನೆ ಹಸ್ತಾಂತರಿಸಲಾಯಿತು. ಪ್ರಮುಖರಾದ ಕಿರಣ್​ ಕುಮಾರ್​ ಕೊಡ್ಗಿ, ಆನಂದ ಸಿ.ಕುಂದರ್​, ವಸಂತ ಗಿಳಿಯಾರು ಮೊದಲಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರ್ಥಿಕ ಸಂಕಷ್ಟದಲ್ಲಿದ್ದ ವೀರು ಪೂಜಾರಿಗೆ ಸೂರು
  • 9 ಲಕ್ಷ ರೂ. ವೆಚ್ಚದಲ್ಲಿ ವ್ಯವಸ್ಥೆ
  • ಜನಸೇವಾ ಟ್ರಸ್ಟ್, ಟೀಮ್​ ಅಭಿಮತ ಸಾಥ್​
ವಿಜಯವಾಣಿ ಸುದ್ದಿಜಾಲ ಕೋಟ
ಗಿಳಿಯಾರು ಹೊನ್ನಾರಿ ಬೊಬ್ಬರ್ಯ ದೈವಸ್ಥಾನ ಸಮೀಪದ ನಿವಾಸಿ ಆರ್ಥಿಕ ಸಂಕಷ್ಟದಲ್ಲಿದ್ದ ವೀರು ಪೂಜಾರಿ ಕುಟುಂಬಕ್ಕೆ ಮೂಡು ಗಿಳಿಯಾರು ಜನಸೇವಾ ಟ್ರಸ್ಟ್​ ಹಾಗೂ ಟೀಮ್​ ಅಭಿಮತದ ಗೆಳೆಯರು ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿ ಹಸ್ತಾಂತರಿಸಿದರು.

ಪುತ್ರಿಗೆ ಉದ್ಯೋಗ

ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಂದಾಪುರ ಶಾಸಕ ಕಿರಣ್​ ಕುಮಾರ್​ ಕೊಡ್ಗಿ ವೀರು ಪೂಜಾರಿ ಪುತ್ರಿ ವಿಶೇಷಚೇತನ ಯುವತಿಗೆ ಉದ್ಯೋಗದ ಅಗತ್ಯವಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್​ ತಮ್ಮ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಜೂನ್​ 1ರಿಂದ ಹಾಜರಾಗುವಂತೆ ಸೂಚಿಸಿದರು.

ಪ್ರಮುಖರ ಉಪಸ್ಥಿತಿ

ಜನಸೇವಾ ಟ್ರಸ್ಟ್​ನ ಪ್ರವರ್ತಕ ವಸಂತ ಗಿಳಿಯಾರು, ಕೋಟ ಗ್ರಾ.ಪಂ. ಮಾಜಿ ಅಧ್ಯಕ್ಷೆ ಜ್ಯೋತಿ ಭರತ್​ ಕುಮಾರ್​ ಶೆಟ್ಟಿ, ವಿಶ್ವವಿಖ್ಯಾತ ಜಾದೂಗಾರ ಸತೀಶ್​ ಹೆಮ್ಮಾಡಿ ಮೊದಲಾದವರಿದ್ದರು.
ಕೆ.ಸಿ.ರಾಜೇಶ್​ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net