ಮುಚ್ಚುವ ಭೀತಿಯಲ್ಲಿ ಹೋಟೆಲ್‌ಗಳು!

ಗ್ಯಾಸ್ ಸಿಲಿಂಡರ್ ಪೂರೈಕೆ ವ್ಯತ್ಯಯ
ಗ್ಯಾಸ್ ಸಿಲಿಂಡರ್ ಪೂರೈಕೆ ವ್ಯತ್ಯಯ
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆ ವ್ಯತ್ಯಯ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ನೀಡಿದೆ. ಸಿಲಿಂಡರ್ ಪೂರೈಕೆ ಅಡಚಣೆ 3ನೇ ವಾರ ತಲುಪಿದ್ದು, ಇದರ ಪರಿಣಾಮ ಕ್ಯಾಂಟೀನ್, ಸಣ್ಣ ಹೋಟೆಲ್‌ಗಳು ಬಾಗಿಲು ಹಾಕುತ್ತಿವೆ.
ಕೊಲ್ಲೂರು ಸಹಿತ ಜಿಲ್ಲೆಯ ಹಲವು ಪ್ರಸಿದ್ಧ ಯಾತ್ರಾ ಕ್ಷೇತ್ರ ಪರಿಸರದಲ್ಲಿನ ಹೋಟೆಲ್, ಕ್ಯಾಂಟೀನ್‌ಗಳು ಮುಚ್ಚುವ ಹಂತ ತಲುಪಿವೆ. ಕೆಲವೊಂದು ಹೋಟೆಲ್‌ಗಳಲ್ಲಿ ಸೌದೆ ಒಲೆ ಮೂಲಕ ತಿಂಡಿ ತಯಾರಿಸಿ ಗ್ರಾಹಕರಿಗೆ ಒದಗಿಸುವ ಸಂದರ್ಭ ಎದುರಾಗಿದೆ. ಕೆಲ ಹೋಟೆಲ್‌ಗಳು ಬೆಂಕಿ ರಹಿತ ಆಹಾರ ಖಾದ್ಯಕ್ಕೆ ಹೆಚ್ಚು ಒತ್ತು ನೀಡಿವೆ. ಹೀಗಾಗಿ ಗ್ರಾಹಕರ ನೆಚ್ಚಿನ ುಡ್‌ಗಳು ಈಗ ಲಭ್ಯವಿಲ್ಲದಂತಾಗಿದೆ.
*ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೂ ಸಂಕಷ್ಟ: ಕೆಲವು ವಾಂಸಾಹಾರಿ ಹೋಟೆಲ್‌ಗಳು ಮುಚ್ಚಿವೆ. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಮೀನು ಮತ್ತು ವಾಂಸದ ಖಾದ್ಯ ಲಭ್ಯವಿಲ್ಲ. ಬದಲಾಗಿ ಬಿರಿಯಾನಿ ಮೊದಲಾದ ಖಾದ್ಯಗಳಷ್ಟೇ ಲಭಿಸುತ್ತಿವೆ. ನಗರಗಳಲ್ಲಿ ಸಂಜೆ ವೇಳೆ ಕಾರ್ಯಾಚರಿಸುತ್ತಿದ್ದ ಬಹುತೇಕ ಚೈನೀಸ್ ಪಾಸ್ಟ್ ಫುಡ್(ಮೊಬೈಲ್ ಕ್ಯಾಂಟೀನ್) ಅಂಗಡಿಗಳು ಮುಚ್ಚಿವೆ. ಇದು ವರ್ತಕರಿಗೆ ವಾತ್ರವಲ್ಲದೆ ಕಡಿಮೆ ದರದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವಲಸೆ ಕಾರ್ಮಿಕರಿಗೆ ಹೊಡೆತ ನೀಡಿದೆ. ಗೂಡಂಗಡಿಗಳು, ಆಮ್ಲೆಟ್, ಮಿರ್ಚಿ, ಬೋಂಡಾ, ಪಾನಿಪುರಿ, ಗೋಬಿ ಮಂಚೂರಿ ಖಾದ್ಯ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಣ್ಣ ಹೋಟೆಲ್ ವ್ಯವಹಾರಸ್ಥರು ತಮ್ಮ ಮನೆಗಳಲ್ಲಿ ಆಹಾರ ತಯಾರಿಸಿ ತಂದು ವಾರಾಟ ವಾಡುತ್ತಿದ್ದಾರೆ. ಹಲವೆಡೆ ಕಲ್ಯಾಣ ಮಂಟಪಗಳಿಗೂ ಗ್ಯಾಸ್ ಕೊರತೆ ಬಿಸಿ ತಟ್ಟಿದೆ.
ಶೇ.35ರಷ್ಟು ವ್ಯವಹಾರ ಸ್ಥಗಿತ
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಕೊರತೆಯಿಂದಾಗಿ ಮಾರ್ಚ್ 10ರಿಂದ ಉದ್ಭವಿಸಿರುವ ಬಿಕ್ಕಟ್ಟಿನಿಂದಾಗಿ ಶೇ.30-35 ವ್ಯವಹಾರ ಸ್ಥಗಿತಗೊಂಡಿದೆ. ಹೋಟೆಲ್‌ಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು ತೀವ್ರ ಸಂಕಷ್ಟದಲ್ಲಿವೆ.

ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆಯಿಲ್ಲದೆ 3 ವಾರ ಕಳೆದಿವೆ. ಸೌದೆ ಒಲೆ ಮೂಲಕ ಎಲ್ಲ ಬಗೆಯ ತಿಂಡಿ ತಯಾರಿಸುವುದು ಸಾಧ್ಯವಿಲ್ಲ. ಕೆಲಸದವರು ನಿಲ್ಲುವುದಿಲ್ಲ, ಪರಿಸ್ಥಿತಿ ಹೀಗೆ ಮುಂದುವರಿದರೆ ಹೋಟೆಲ್ ಮುಚ್ಚುವುದು ಅನಿವಾರ್ಯ.

ನಿರ್ದಿಷ್ಟ ಆಹಾರ ಖಾದ್ಯಗಳನ್ನು ಕೆಲ ದಿನಗಳಿಂದ ಸೌದೆ ಒಲೆಯಲ್ಲಿ ತಯಾರಿಸಲಾಗುತ್ತಿದೆ. ಅನಿಲ ಸಮಸ್ಯೆ ಹೀಗೆಯೇ ಮುಂದುವರಿದರೆ ವ್ಯವಹಾರಕ್ಕೆ ಹೊಡೆತ ಬೀಳಲಿದೆ. ಹೋಟೆಲ್ ಮುಚ್ಚುವುದು ದೊಡ್ಡ ವಿಚಾರವಲ್ಲ. ಇದರಿಂದ ಕೆಲಸಗಾರರನ್ನು ಮತ್ತೆ ತರುವುದು ಕಷ್ಟ. ಗ್ರಾಹಕರು ದೂರವಾಗುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net