ಉಡುಪಿ ನಗರದ ಚರಂಡಿಯಲ್ಲಿ ಡ್ರೈನೇಜ್​ ನೀರು!!

ಉಡುಪಿ ನಗರದಲ್ಲಿ ಅಮ್ಮುಂಜೆ ಪೆಟ್ರೋಲ್​ ಪಂಪ್​ನ ಎದುರಿನ ಚರಂಡಿಯಲ್ಲಿ ಡ್ರೈನೇಜ್​ ನೀರು ಬಿಟ್ಟಿರುವುದು.
ಉಡುಪಿ ನಗರದಲ್ಲಿ ಅಮ್ಮುಂಜೆ ಪೆಟ್ರೋಲ್​ ಪಂಪ್​ನ ಎದುರಿನ ಚರಂಡಿಯಲ್ಲಿ ಡ್ರೈನೇಜ್​ ನೀರು ಬಿಟ್ಟಿರುವುದು.
Published on

* ಮಳೆನೀರು ಕಾಲುವೆಯಲ್ಲಿ ರೆಸ್ಟೋರೆಂಟ್​ಗಳ ತ್ಯಾಜ್ಯ

* ಪರಿಸರದಲ್ಲಿ ಗಬ್ಬು ವಾಸನೆ, ಸ್ಥಳೀಯರ ಅಸಮಾಧಾನ

ಉಡುಪಿ: ನಗರದಲ್ಲಿ ಇನ್ನೂ ಸಹ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ್ದರಿಂದ ಮನೆ, ಅಪಾರ್ಟ್​ಮೆಂಟ್​ ಹಾಗೂ ವಿವಿಧ ಹೋಟೆಲ್​-ರೆಸ್ಟೋರೆಂಟ್​ಗಳ ತ್ಯಾಜ್ಯವನ್ನು ಚರಂಡಿಗೆ ಬಿಡುವ ಪರಿಪಾಠ ಮುಂದುವರಿದಿದೆ.
ಉಡುಪಿ ನಗರದ ಹೃದಯ ಭಾಗದಲ್ಲಿರುವ ಅಮ್ಮುಂಜೆ ಪೆಟ್ರೋಲ್​ ಪಂಪ್​ನ ಎದುರು, ಸಮ್ಮರ್​ ಪಾರ್ಕ್​ ಹೋಟೆಲ್​ ಸಮೀಪದಲ್ಲಿ ಮಳೆ ನೀರು ಹರಿಯುವ ಕಾಲುವೆ ಇದ್ದು, ಕೆಲವು ದಿನಗಳಿಂದ ಇಲ್ಲಿ ಡ್ರೈನೇಜ್​ ನೀರು ಬಿಡಲಾಗುತ್ತಿದೆ.
ಪರಿಸರದಲ್ಲಿ ದುರ್ನಾತ
ಹೋಟೆಲ್​, ಲಾಡ್ಜ್​ಗಳ ಶೌಚಾಲಯಗಳ ಕೊಳಕು ನೀರನ್ನು ಚರಂಡಿಗೆ  ಬಿಡುತ್ತಿರುವುದರಿಂದ ಈ ಪರಿಸರದಲ್ಲಿ ಗಬ್ಬುವಾಸನೆ ಹಬ್ಬಿದೆ. ದುರ್ನಾತ ತಡೆಯಲಾಗದೆ ಈ ಭಾಗದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಸಾಗುವಂತಾಗಿದೆ. ನಗರಸಭೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚರಂಡಿ ಸಮೀಪದಲ್ಲಿರುವ ಅಂಗಡಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"

ಮಳೆಗಾಲ ಸಮೀಪಿಸುತ್ತಿದ್ದಂತೆ ನಗರಸಭಾ ಅಧಿಕಾರಿಗಳು ಮಳೆ ನೀರು ಹರಿಯುವ ಚರಂಡಿಗೆ ಶೌಚಾಲಯಗಳ ಮಲೀನ ನೀರು ಬಿಡದಂತೆ ಪತ್ರಿಕಾ ಪ್ರಕಟಣೆ ನೀಡುತ್ತಾರೆ. ಅಥವಾ ಒಂದಿಷ್ಟು ಮಂದಿಗೆ ನೋಟಿಸ್​ ನೀಡಿ ಕೈತೊಳೆದುಕೊಳ್ಳುತ್ತಾರೆ. ಆದರೆ, ಮಣಿಪಾಲ ಸೇರಿದಂತೆ ಉಡುಪಿಯ ಪ್ರಮುಖ ಪ್ರದೇಶಗಳಲ್ಲಿ ಚರಂಡಿಗೆ ಡ್ರೈನೇಜ್​ ನೀರು ಬಿಡುತ್ತಾರೆ. ನಗರಸಭೆ ಅಧಿಕಾರಿಗಳು ಈ ಸಮಸ್ಯೆ ಪರಿಶೀಲಿಸಿ ತಕ್ಷಣ ಸೂಕ್ತ ಕ್ರಮ ಜರುಗಿಸಬೇಕು.

— ನಿತ್ಯಾನಂದ ಒಳಕಾಡು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net